ಓಟಾವಾ (ಕೆನಡಾ) – ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಇವರ ಹತ್ಯೆಯನ್ನು ವೈಭವಿಕರಿಸುವ ಪ್ರಯತ್ನ ಇತ್ತೀಚಿಗೆ ಕೆನಡಾದಲ್ಲಿ ನಡೆದಿದೆ. ಇದರ ಕುರಿತು ಒಂದು ವಿಡಿಯೋ ಬೆಳಕಿಗೆ ಬಂದ ನಂತರ ಭಾರತ ಕಠಿಣ ನಿಲುವು ತಾಳಿ ಇಂದಿರಾ ಗಾಂಧಿ ಇವರ ಹತ್ಯೆಯ ಉತ್ಸವ ಆಚರಿಸುವವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ‘ಆಪರೇಷನ್ ಬ್ಲೂ ಸ್ಟಾರ್’ಗೆ ೪೦ ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಕೆನಡಾದಲ್ಲಿನ ಬ್ರಮ್ಟನ್ ನಗರದಲ್ಲಿನ ಖಲಿಸ್ತಾನಿ ಬೆಂಬಲಿಗರು ಒಂದು ಚಿತ್ರರಥದ ಮೆರವಣಿಗೆ ನಡೆಸಿದರು. ಅದರಲ್ಲಿ ಇಂದಿರಾ ಗಾಂಧಿ ಇವರ ಪುತ್ತಳಿಗೆ ಅವರ ಸಿಖ್ ಅಂಗರಕ್ಷಕರು ಗುಂಡು ಹಾರಿಸಿರುವುದು ತೋರಿಸಿದ್ದಾರೆ. ಕೆನಡಾದ ಭಾರತದಲ್ಲಿನ ಉಚ್ಚಾಯುಕ್ತ ಕ್ಯಾಮೆರೂನ್ ಮ್ಯಾಕೆ ಇವರು ಕೂಡ ‘ಈ ಘಟನೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದು ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವುದು, ನಾವು ಎಂದಿಗೂ ಒಪ್ಪುವುದಿಲ್ಲ’ ಎಂದು ಹೇಳಿದರು.
ವಿದೇಶಾಂಗ ಸಚಿವ ಜೈಶಂಕರ್ ಇವರಿಂದ ಅಸಮಾಧಾನ !
ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಇವರು ಈ ಚಿತ್ರರಥದ ಮೆರವಣಿಗೆಗೆ ಅನುಮತಿ ನೀಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು, ‘ಇದು ಸಿಖ್ ಪ್ರತ್ಯೇಕತಾವಾದಿಗಳ ಹಿಂಸಾಚಾರಕ್ಕೆ ಬೆಂಬಲ ನೀಡುವಂತಾಗಿದೆ. ಇದು ಕೆನಡಾಗೆ ಒಳ್ಳೆಯದಲ್ಲ ಮತ್ತು ಭಾರತದ ಜೊತೆಗಿನ ಸಂಬಂಧಕ್ಕಾಗಿ ಕೂಡ ಒಳ್ಳೆಯದಲ್ಲ.” ಎಂದು ಹೇಳಿದರು.