Case Filed on NCP MLA: ಎಲ್ಲೆಡೆಯ ಅಪರಾಧಗಳನ್ನು ಒಟ್ಟುಗೂಡಿಸಿ ಮೊಕದ್ದಮೆ ದಾಖಲಿಸಿ ! – ಜಿತೇಂದ್ರ ಆವ್ಹಾಡರ  ಕೋರಿಕೆ

  • ಶ್ರೀರಾಮನ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಪ್ರಕರಣ 

  • ಸರ್ಕಾರದ ಅಭಿಪ್ರಾಯ ಕೇಳಿದ ನ್ಯಾಯಾಲಯ ! 

ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಪವಾರ್ ಗುಂಪು) ಶಾಸಕ ಜಿತೇಂದ್ರ ಅವ್ಹಾಡ

ಮುಂಬಯಿ – ಪ್ರಭು ಶ್ರೀರಾಮ ಸಸ್ಯಾಹಾರಿಯಾಗಿರಲಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗಾಗಿ ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಪವಾರ್ ಗುಂಪು) ಶಾಸಕ ಜಿತೇಂದ್ರ ಅವ್ಹಾಡ ವಿರುದ್ಧ ರಾಜ್ಯದ ವಿವಿಧೆಡೆ 7 ಪ್ರಕರಣಗಳು ದಾಖಲಾಗಿವೆ. ‘ಈ ಎಲ್ಲ ಅಪರಾಧಗಳನ್ನು ಒಂದುಗೂಡಿಸಿ ಪ್ರಕರಣ ನಡೆಸಬೇಕು’ ಎಂದು ಜಿತೇಂದ್ರ ಆವ್ಹಾಡ ನ್ಯಾಯಾಲಯಕ್ಕೆ ಕೋರಿದ್ದಾರೆ. ಈ ಸಂಬಂಧ ನ್ಯಾಯಾಲಯವು ರಾಜ್ಯ ಸರಕಾರದ ಅಭಿಪ್ರಾಯ ಕೇಳಿದೆ.

ಆವ್ಹಾಡರ ಅರ್ಜಿಯು ಜೂನ 10 ರಂದು ನ್ಯಾಯಮೂರ್ತಿ ರೇವತಿ ಡೆರೆ ಮತ್ತು ನ್ಯಾಯಮೂರ್ತಿ ಶ್ಯಾಮ ಚಾಂಡಕ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯಿತು. ಎಲ್ಲಾ ಅಪರಾಧಗಳನ್ನು ಠಾಣೆಯ ವರ್ತಕನಗರ ಅಥವಾ ನವಘರ್ ಪೊಲೀಸ್ ಠಾಣೆ ವ್ಯಾಪ್ತಿಗೆ ವರ್ಗಾಯಿಸಬೇಕು ಎಂದು ಆವ್ಹಾಡರು ಅರ್ಜಿಯಲ್ಲಿ ಕೋರಿದ್ದಾರೆ.

ವಿವಾದಾತ್ಮಕ ಹೇಳಿಕೆಗಳು ಯಾವುದು ?

ಜನವರಿ 2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ದಿನದಂದು ಮಹಾರಾಷ್ಟ್ರದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು ಭಾಜಪ ಶಾಸಕ ರಾಮ ಕದಮ ಒತ್ತಾಯಿಸಿದ್ದರು. ಆ ಸಮಯದಲ್ಲಿ ಜಿತೇಂದ್ರ ಅವ್ಹಾಡರು ‘ಭಗವಾನ ರಾಮನು ನಮ್ಮಂತಹ ಬಹುಜನರವರಾಗಿದ್ದರು, ಅವರು ಬೇಟೆಯಾಡಿ ತಿನ್ನುತ್ತಿದ್ದರು. ಅವರು ಸಸ್ಯಾಹಾರಿಯಾಗಿರಲಿಲ್ಲ. 14 ವರ್ಷ ಕಾಡಿನಲ್ಲಿ ವಾಸಿಸುವ ವ್ಯಕ್ತಿಗೆ ಸಸ್ಯಾಹಾರ ಎಲ್ಲಿ ಸಿಗುತ್ತದೆ?” ಎಂದು ಹೇಳಿದ್ದರು. ಇದರಿಂದಾಗಿ ವಿವಾದಗಳು ನಿರ್ಮಾಣವಾಗುತ್ತಿರುವುದು ಗಮನಕ್ಕೆ ಬರುತ್ತಲೇ ಆವ್ಹಾಡರು ಈ ಹೇಳಿಕೆಗೆ ಕ್ಷಮೆಯಾಚಿಸಿದ್ದರು.