೨೦೨೪ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವ ಪ್ರಯುಕ್ತ ಸಪ್ತರ್ಷಿಗಳು ನೀಡಿದ ಸಂದೇಶ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಕಲಿಯುಗದಲ್ಲಿನ ಶ್ರೀವಿಷ್ಣುವಿನ ಅವತಾರವಾಗಿದ್ದು ಯೋಗ್ಯ ಸಮಯ ಬರುತ್ತಲೇ ಅವರು ಪೃಥ್ವಿಯ ಮೇಲೆ ಧರ್ಮಸಂಸ್ಥಾಪನೆ ಮಾಡುವರು

‘ಪ್ರತಿಯೊಂದು ಯುಗದಲ್ಲಿ ‘ಧರ್ಮಸಂಸ್ಥಾಪನೆ’ ಮಾಡುವುದು’ ಇದು ಶ್ರೀವಿಷ್ಣುವಿನ ಕಾರ್ಯವಾಗಿದೆ. ಶ್ರೀವಿಷ್ಣು ಪ್ರತಿಯೊಂದು ಯುಗದಲ್ಲಿ ಧರ್ಮಸಂಸ್ಥಾಪನೆಗಾಗಿ ಬೇರೆ ಬೇರೆ ಅವತಾರಗಳನ್ನು ತಾಳಿದ್ದಾನೆ. ಕಲಿಯುಗದಲ್ಲಿ ಶ್ರೀವಿಷ್ಣುವಿನ ಅವತಾರ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ಆಗಿದ್ದಾರೆ. ‘ಯೋಗ್ಯ ಸಮಯ ಹಾಗೂ ಯೋಗ್ಯ ಪ್ರಸಂಗ ಬರುತ್ತಲೇ ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಪೃಥ್ವಿಯಲ್ಲಿ ‘ಧರ್ಮಸಂಸ್ಥಾಪನೆ ಮಾಡುವರು’, ಇದರಲ್ಲಿ ಸಂದೇಹವಿಲ್ಲ.

ಪೂ. ಡಾ. ಓಂ ಉಲಗನಾಥನ್‌

೨. ಶ್ರೀರಾಮ ಮತ್ತು ಶ್ರೀಕೃಷ್ಣ ಈ ಅವತಾರಗಳಲ್ಲಿನ ಲೀಲೆ !

ಮಹಾಬಲಿ ಯೋಧರಿಗೂ ಎತ್ತಲು ಸಾಧ್ಯವಾಗದಂತಹ ಶಿವ ಧನುಷ್ಯವನ್ನು ಶ್ರೀರಾಮನು ಆಟಿಕೆಯಂತೆ ಎತ್ತಿ ಇಬ್ಭಾಗ ಮಾಡಿದನು. ಇದಕ್ಕಾಗಿ ಶ್ರೀರಾಮನಿಗೆ ಮಿಂಚಿನ ವೇಗಕ್ಕಿಂತಲೂ ಕಡಿಮೆ ಸಮಯ ತಗಲಿತು. ಅದರಂತೆ ೧೮ ವರ್ಷಗಳ ಕಾಲ ನಡೆಯಲಿದ್ದ ಯುದ್ಧವನ್ನು ಶ್ರೀಕೃಷ್ಣನು ಕೇವಲ ೧೮ ದಿನಗಳಲ್ಲಿ ಮುಗಿಸಿದನು.

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಧರ್ಮಸಂಸ್ಥಾಪನೆಗಾಗಿ ಯೋಗ್ಯ ಸಮಯಕ್ಕೆ ಕಾಯುತ್ತಿರುವುದು

‘ಶ್ರೀರಾಮ ಮತ್ತು ಶ್ರೀಕೃಷ್ಣನ ರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಕಲಿಯುಗದಲ್ಲಿನ ಈ ಕಾಲದಲ್ಲಿ ಧರ್ಮಸಂಸ್ಥಾಪನೆ ಮಾಡಲು ಸಮಯ ತಗಲುವುದಿಲ್ಲ; ಆದರೆ ಅವರು ಯೋಗ್ಯ ಸಮಯಕ್ಕಾಗಿ ಕಾಯುತ್ತಿದ್ದಾರೆ’, ಇದನ್ನು ಎಲ್ಲ ಸಾಧಕರು ಗಮನದಲ್ಲಿಟ್ಟುಕೊಳ್ಳಬೇಕು.

ಸಾಕ್ಷಾತ್‌ ಶ್ರೀಮನ್ನಾರಾಯಣನ ಪೃಥ್ವಿಯ ಮೇಲಿನ ಮೂರ್ತಿಮಂತ ರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಜನ್ಮೋತ್ಸವದ ನಿಮಿತ್ತ ಅವರ ಚರಣಗಳಲ್ಲಿ ಸಪ್ತರ್ಷಿಗಳಾದ ನಮ್ಮೆಲ್ಲರ ವಂದನೆಗಳು !’

– ಸಪ್ತರ್ಷಿಗಳು (ಪೂ. ಡಾ. ಓಂ ಉಲಗನಾಥನ್‌ ಇವರ ಮಾಧ್ಯಮದಿಂದ), (೨೬.೫.೨೦೨೪, ಬೆಳಗ್ಗೆ ೧೧)