ರಾಮನಾಥಿ (ಗೋವಾ) ಇಲ್ಲಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ಚಂಡಿಯಾಗ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವ !

ಯಜ್ಞಕ್ಕಾಗಿ ಮಂಡಿಸಲಾಗಿದ್ದ ದೇವಿಯ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಛಾಯಾಚಿತ್ರಗಳು ಹಾಗೂ ದೇವಿಯ ಮೂರ್ತಿ

ರಾಮನಾಥಿ (ಗೋವಾ) – ಮೇ ೩೦ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವವು ಇಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಭಾವಪೂರ್ಣವಾಗಿ ನೆರವೇರಿತು. ಈ ನಿಮಿತ್ತ ಮೇ ೨೮ ರಿಂದ ೩೦ ಈ ಕಾಲಾವಧಿಯಲ್ಲಿ ಆಶ್ರಮದಲ್ಲಿ ‘ಚಂಡಿಯಾಗ’ವನ್ನು ಆಯೋಜಿಸಲಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಹಾಗೂ ಸನಾತನದ ಸಂತರ ವಂದನೀಯ ಉಪಸ್ಥಿತಿಯಲ್ಲಿ ಈ ಯಾಗ ನೆರವೇರಿತು.

ಸನಾತನದ ಪುರೋಹಿತ ಪಾಠಶಾಲೆಯ ಪುರೋಹಿತರು ಈ ಯಾಗದಲ್ಲಿ ದಶದ್ರವ್ಯ ಮಿಶ್ರಿತ ಪಾಯಸ ಮುಂತಾದ ದ್ರವ್ಯಗಳಿಂದ ಹವನವನ್ನು ಮಾಡಿದರು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮಹಾಮೃತ್ಯುಯೋಗ ದೂರವಾಗಿ ಅವರಿಗೆ ಆರೋಗ್ಯ ಪೂರ್ಣ ದೀರ್ಘಾಯುಷ್ಯ ಲಭಿಸಲಿ ಹಾಗೂ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿನ ತೊಂದರೆಗಳು ದೂರವಾಗಲಿ ಮತ್ತು ಆದಷ್ಟು ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿ’, ಎಂಬ ಉದ್ದೇಶವಿರಿಸಿ ದೈವೀ ವಾತಾವಣದಲ್ಲಿ ಈ ಯಜ್ಞ ನಡೆಸಲಾಯಿತು. ಈ ಸಮಯದಲ್ಲಿ ಸನಾತನ ಸಾಧಕರಾದ ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭), ಶ್ರೀ. ನಿಷಾದ ದೇಶಮುಖ (ಆಧ್ಯಾತ್ಮಿಕ ಮಟ್ಟ ಶೇ.೬೩) ಮತ್ತು ಶ್ರೀ. ರಾಮ ಹೊನಪ ಇವರು ಯಾಗದ ವಿಷಯದಲ್ಲಿ ಭಾವಪೂರ್ಣವಾಗಿ ಸೂತ್ರಸಂಚಾಲನೆಯ ಸೇವೆ ಮಾಡಿದರು.

ಯಜ್ಞದ ಸಮಯದಲ್ಲಿ ದೊರೆತಿರುವ ದೈವಿಕ ಸಾಕ್ಷಿ : ಯಾಗದ ಮೊದಲನೆಯ ದಿನ ಆಶ್ರಮದಲ್ಲಿನ ಕಮಲ ಪೀಠದಲ್ಲಿ ಎರಡು ಕಮಲ ಪುಷ್ಪಗಳು ಅರಳಿದ್ದವು.