|
ಪ್ಯಾರಿಸ, ಜೂನ್ 6 (ಸುದ್ದಿ) – ಸಕಲ ಮನುಕುಲದ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುವ, ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿ ಜಗತ್ತಿನಾದ್ಯಂತ ಸಾಧಕರ ಜೀವನವನ್ನು ಆಂನಂದಮಯ ಮಾಡಿದ, ವಿಜ್ಞಾನಯುಗದಲ್ಲಿ ಸುಲಭ ಭಾಷೆಯಲ್ಲಿ ಅಧ್ಯಾತ್ಮ ಪ್ರಸಾರ ಮಾಡಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರನ್ನು ಜೂನ 5, 2024 ರಂದು ಫ್ರಾನ್ಸಿನ ಸಂಸತ್ತಿನಲ್ಲಿ 11 ನೇ `ಭಾರತ ಗೌರವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಜಾಗತಿಕ ಪ್ರಸಾರಕ್ಕಾಗಿ ನೀಡಿರುವ ಅನನ್ಯ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಪರವಾಗಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್ ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ‘ಸಂಸ್ಕೃತಿ ಯುವ ಸಂಸ್ಥೆ’ಯು ಪ್ರತಿಷ್ಠಿತ ಪ್ರಶಸ್ತಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರನ್ನು ಆಯ್ಕೆ ಮಾಡಿತ್ತು. ಈ ಭವ್ಯ ಸಮಾರಂಭದಲ್ಲಿ ಸಂಸ್ಕೃತಿ ಯುವ ಸಂಸ್ಥೆಯ ಅಧ್ಯಕ್ಷ ಪಂಡಿತ ಸುರೇಶ ಮಿಶ್ರಾ ಸೇರಿದಂತೆ ಜಗತ್ತಿನಾದ್ಯಂತದ ಗಣ್ಯರು ಉಪಸ್ಥಿತರಿದ್ದರು. ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯವನ್ನು ಶ್ಲಾಘಿಸಿದರು.
Sachchidananda Parabrahman Dr Jayant Athavale (Founder, @SanatanSanstha) conferred the 11th ‘Bharat Gaurav’ Award by Sanskriti Yuva Sanstha (@BGAoffc) for His contributions to the spread of Spirituality and the uplift of Nation and Dharma.
Sachchidananda Parabrahman Dr… pic.twitter.com/J4TGToI96I
— Sanatan Sanstha (@SanatanSanstha) June 6, 2024
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಅವರ ನಾಯಕತ್ವದಲ್ಲಿ, ಸನಾತನ ಸಂಸ್ಥೆಯು ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಉಪಕ್ರಮಗಳ ಮೂಲಕ ಸಮಾಜದಲ್ಲಿ ಜಾಗೃತಿ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ. – ಪಂ. ಸುರೇಶ ಮಿಶ್ರಾ, ಅಧ್ಯಕ್ಷರು, ಸಂಸ್ಕೃತಿ ಯುವ ಸಂಸ್ಥೆ. |
ಈ ಪ್ರಶಸ್ತಿ ಎಂದರೆ ಆದಿಶಕ್ತಿಯ ಆಶೀರ್ವಾದ !ಫ್ರಾನ್ಸ್ ದೇಶದ ರಾಜಧಾನಿಗೆ ‘ಪ್ಯಾರಿಸ’ ಈ ಹೆಸರು ನಿಜವಾಗಿಯೂ ಆದಿಶಕ್ತಿಯ ರೂಪವಾಗಿರುವ ಪರಮೇಶ್ವರಿದೇವಿಯ ಹೆಸರಿನಲ್ಲಿ ಲಭಿಸಿದೆ. ರೋಮ ನಾಗರಿಕತೆಯ(ಸಂಸ್ಕೃತಿಯ) ಸಮಯದಲ್ಲಿ, ಪ್ಯಾರಿಸ ನಗರವನ್ನು ‘ಪ್ಯಾರಿಶೋರಿಯಮ್’ ಎಂದು ಕರೆಯಲಾಗುತ್ತಿತ್ತು. ನಿಜವಾಗಿ ಈ ಹೆಸರು ‘ಪರಮೇಶ್ವರಿ’ ಈ ದೇವಿಯ ಹೆಸರಿನ ಅಪಭ್ರಂಶವಾಗಿದೆ; ಏಕೆಂದರೆ ಪ್ಯಾರಿಸ್ ಪ್ರಾಚೀನ ಕಾಲದಲ್ಲಿ ಪರಮೇಶ್ವರಿದೇವಿಯ ಸ್ಥಾನವಾಗಿತ್ತು. ಇಂದು ವಿದೇಶಿ ಭೂಮಿಯ ಮೇಲೆ ಮತ್ತು ಅದೂ ಆದಿಶಕ್ತಿಯ ಸ್ಥಾನವಾಗಿರುವ ಫ್ರಾನ್ಸನ ಸಂಸತ್ತಿನಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗೌರವ, ಒಂದು ರೀತಿಯಲ್ಲಿ ಪರಮೇಶ್ವರಿದೇವಿಯ ಆಶೀರ್ವಾದವಾಗಿದೆ. ಕೆಲವು ವರ್ಷಗಳ ಹಿಂದೆ ನಾಡಿಪಟ್ಟಿಯ ಮಾಧ್ಯಮದಿಂದ ಮಹರ್ಷಿಗಳು, ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕೀರ್ತಿಯು ಪ್ರಪಂಚದಾದ್ಯಂತ ಹರಡುತ್ತದೆ ಎಂದು ಹೇಳಿದ್ದರು. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ‘ಸಂಸ್ಕೃತಿ ಯುವಾ ಸಂಸ್ಥೆ’ಯ ವತಿಯಿಂದ ಗುರುದೇವರಿಗೆ ನೀಡಲಾಗಿರುವ ಭಾರತ ಗೌರವ ಪ್ರಶಸ್ತಿಯ ಮೂಲಕ ಮಹರ್ಷಿಯ ಹೇಳಿಕೆಯು ನಿಜವಾಯಿತು. – ಶ್ರೀ. ವಿನಾಯಕ ಶಾನಭಾಗ, ಪ್ಯಾರಿಸ, ಫ್ರಾನ್ಸ. |
‘ಭಾರತ ಗೌರವ ಪ್ರಶಸ್ತಿ’ಯಿಂದ ಲಭಿಸಿದ ಗೌರವವು ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ದಿವ್ಯ ಕಾರ್ಯಕ್ಕೆ ಸಿಕ್ಕಿರುವ ಗೌರವ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ ಫ್ರಾನ್ಸ ಸಂಸತ್ತಿನಲ್ಲಿ ‘ಭಾರತ ಗೌರವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿರುವ ವಿಷಯದಲ್ಲಿ ಸನಾತನ ಸಂಸ್ಥೆಯು ‘ಸಂಸ್ಕೃತಿ ಯುವಾ ಸಂಸ್ಥೆ’ ಮತ್ತು ಅದರ ಅಧ್ಯಕ್ಷ ಪಂ. ಸುರೇಶ ಮಿಶ್ರಾ ಇವರಿಗೆ ಕೃತಜ್ಞವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಉನ್ನತ ಮಟ್ಟದ ಸಂತರಾಗಿದ್ದು, ಈ ಪ್ರಶಸ್ತಿಗಳು ಮತ್ತು ಗೌರವಗಳನ್ನು ಮೀರಿದ್ದರೂ ಅವರಿಗೆ ನೀಡಲಾಗಿರುವ ಈ ಗೌರವ ಎಂದರೆ ಅವರು ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿ ಮಾಡಿರುವ ದಿವ್ಯ ಆಧ್ಯಾತ್ಮಿಕ ಕಾರ್ಯದ ಗೌರವವಾಗಿದೆ. ಈ ಗೌರವವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸನಾತನ ಧರ್ಮದಲ್ಲಿ ಅಧ್ಯಾತ್ಮಕ್ಕೆ ‘ಶಾಸ್ತ್ರ’ ಅಂದರೆ ‘ವಿಜ್ಞಾನ’ ಎಂದು ರೂಪಿಸಲು ಮಾಡಿರುವ ಅಲೌಕಿಕ ಸಂಶೋಧನಾ ಕಾರ್ಯ ಮತ್ತು ಗ್ರಂಥಲೇಖನಗಳು, ಅಲ್ಲದೇ, ಒಂದು ರೀತಿಯಲ್ಲಿ ಅಖಿಲ ಮಾನವಜಾತಿಗೆ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿರುವ ‘ಗುರುಕೃಪಾಯೋಗ’ ಈ ಸಾಧನಾ ಮಾರ್ಗ ಇವುಗಳ ಗೌರವವಾಗಿದೆಯೆಂದು ನಾವು ತಿಳಿಯುತ್ತೇವೆ.’ – ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ