Bharat Gaurav Award : ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ಘೋಷಣೆ !

‘ಸಂಸ್ಕೃತಿ ಯುವಾ ಸಂಸ್ಥೆ’ಯ ವತಿಯಿಂದ ಜೂನ 5 ರಂದು ಫ್ರಾನ್ಸನ ಸಂಸತ್ತಿನಲ್ಲಿ ಸನ್ಮಾನ ಸಮಾರಂಭ !

ಜೈಪುರ (ರಾಜಸ್ಥಾನ) – ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಜಾಗತಿಕ ಪ್ರಸಾರಕ್ಕಾಗಿ ಮಾಡಿರುವ ಅನನ್ಯ ಕೊಡುಗೆಗಾಗಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಿದೆ. `ಸಂಸ್ಕೃತಿ ಯುವಾ ಸಂಸ್ಥೆ’ಯ ವತಿಯಿಂದ ಜೂನ 5, 2024 ರಂದು ಫ್ರಾನ್ಸ್‌ನ ಸಂಸತ್ತಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪಂಡಿತ ಸುರೇಶ ಮಿಶ್ರಾ ಘೋಷಿಸಿದ್ದಾರೆ.

ಸತ್ ಶಕ್ತಿ(ಸೌ.) ಬಿಂದಾ ಸಿಂಗಬಾಳ ಮತ್ತು ಚಿತ್ ಶಕ್ತಿ(ಸೌ.) ಅಂಜಲಿ ಗಾಡಗೀಳ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಪರವಾಗಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಸತ್ ಶಕ್ತಿ(ಸೌ.) ಬಿಂದಾ ಸಿಂಗಬಾಳ ಮತ್ತು ಚಿತ್ ಶಕ್ತಿ(ಸೌ.) ಅಂಜಲಿ ಗಾಡಗೀಳ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಉನ್ನತಿಗೆ ಅನನ್ಯ ಕೊಡುಗೆಗಾಗಿ ಗೌರವ


*28 ವರ್ಷಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಉನ್ನತಿಗಾಗಿ ಮೀಸಲಿಟ್ಟ `ಸಂಸ್ಕೃತಿ ಯುವಾ ಸಂಸ್ಥೆ’ಯು ಈ ವರ್ಷದ ಪ್ರತಿಷ್ಠಿತ `ಭಾರತ ಗೌರವ ಪ್ರಶಸ್ತಿ’ಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಯನ್ನು ಅವರ ಅತ್ಯುತ್ತಮ ಸಾಮಾಜಿಕ ಕಾರ್ಯ, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಾಗಿ ಅನನ್ಯ ಕೊಡುಗೆಗಾಗಿ ನೀಡಲಾಗುತ್ತಿದೆ.


ಈ ಮಹತ್ವಪೂರ್ಣ ಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರನ್ನು ಗೌರವಿಸಲು ಜಗತ್ತಿನಾದ್ಯಂತದ ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ ಮತ್ತು ಈ ಸಮಾರಂಭ ಭಾರತೀಯ ಸಂಸ್ಕೃತಿಯ ಸಮೃದ್ಧ ಪರಂಪರೆಯ ಉತ್ಸವವನ್ನು ಆಚರಿಸುವ ಒಂದು ಮಹತ್ವಪೂರ್ಣ ವ್ಯಾಸಪೀಠವಾಗಲಿದೆ.*

 

`ಭಾರತ ಗೌರವ ಪ್ರಶಸ್ತಿ’ ಸಮಾರಂಭವು ಈ ಮೊದಲು `ಯುನೈಟೆಡ ಕಿಂಗಡಮ್ ಹೌಸ ಆಫ್ ಕಾಮನ್ಸ’ (ಬ್ರಿಟನ) ವಿಶ್ವ ಸಂಸ್ಥೆ ಮತ್ತು ಅಟ್ಲಾಂಟಿಸ ಹಾಗೂ ದುಬೈನಂತಹ ಪ್ರತಿಷ್ಠಿತ ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಫ್ರಾನ್ಸ್‌ನ ಸಂಸತ್ತಿನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಯಾರು ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಪ್ರಸಾರದಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಿದ್ದಾರೆ. ಭಾರತ ಮತ್ತು ಭಾರತೀಯ ಸಮುದಾಯದ ಗಣ್ಯ ವ್ಯಕ್ತಿಗಳನ್ನು ಗೌರವಿಸುತ್ತದೆ.