Pakistan On Lok Sabha Results : ಚುನಾವಣೆಯಲ್ಲಿ ಬಿಜೆಪಿ ಪೆಟ್ಟು ಖುಷಿ ಪಟ್ಟ ಪಾಕಿಸ್ತಾನ !

ಮೋದಿ ಸಿದ್ಧಾಂತವನ್ನು ಭಾರತೀಯರು ತಿರಸ್ಕರಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಅವರ ಅಭಿಪ್ರಾಯ !

ಇಸ್ಲಾಮಾಬಾದ್ – ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಪೆಟ್ಟು ಬಿದ್ದಿದ್ದರಿಂದ ಪಾಕಿಸ್ತಾನ ಸಂತಸಗೊಂಡಿದೆ. 2019 ಕ್ಕೆ ಹೋಲಿಸಿದರೆ ಬಿಜೆಪಿಯ ಸ್ಥಾನಗಳು ಕಡಿಮೆಯಾದ ಬಗ್ಗೆ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರದಲ್ಲಿದ್ದ ಹಂಗಾಮಿ ಸಚಿವ ಫವಾದ್ ಚೌಧರಿ ಸಂತೋಷ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿನ ಜನರು ನರೇಂದ್ರ ಮೋದಿ ಮತ್ತು ಅವರ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ ಎಂದು ಫವಾದ್ ಹೇಳಿದ್ದಾರೆ.

ಪಾಕಿಸ್ತಾನದಂತೆ ಭಾರತದಲ್ಲೂ ಮೋದಿ ತಪ್ಪು ಸಾಬೀತಾಯಿತು ! – ಫವಾದ್ ಚೌಧರಿ

‘ಎಕ್ಸ್‌’ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಲ್ಲಿ ಫವಾದ್ ಚೌಧರಿ ಇವರು, ಪಾಕಿಸ್ತಾನದಂತೆ ಭಾರತದಲ್ಲಿ ಮೋದಿ ತಪ್ಪು ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಿಗಳು ರಾಹುಲ್ ಅವರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತಾರೆ; ಏಕೆಂದರೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ನಡೆ ಬಹುಸಂಖ್ಯಾತದತ್ತ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಅವರಲ್ಲಿ ನರೇಂದ್ರ ಮೋದಿಯನ್ನು ಯಾರೇ ಸೋಲಿಸಿದರೂ ಅವರನ್ನು ನಾವು ಬೆಂಬಲಿಸಬೇಕು. ನರೇಂದ್ರ ಮೋದಿ ಅವರನ್ನು ಸೋಲಿಸುವಂತೆ ಚೌಧರಿ ಅವರು ಭಾರತದ ಜನತೆಗೆ ಪದೇ ಪದೇ ಮನವಿ ಮಾಡಿದ್ದರು.

ಸಂಪಾದಕೀಯ ನಿಲುವು

ಪಾಕಿಸ್ತಾನಿಗಳ ನರನಾಡಿಗಳಲ್ಲಿ ಮೋದಿ ದ್ವೇಷ ಎಷ್ಟಿದೆ ಎಂಬುದು ಇದರಿಂದ ಕಂಡು ಬರುತ್ತದೆ !