ಚೀನಾದಿಂದ ಜಗತ್ತಿನಾದ್ಯಂತ ಸಿಖರ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ !

  • ‘ಮೇಟ’ ಕಂಪನಿಯ ವರದಿ !

  • ಭಾರತವನ್ನು ಟಿಕಿಸುವ ಪ್ರಯತ್ನ

ನವ ದೆಹಲಿ – ಚೀನಾ ಜಗತ್ತಿನಾದ್ಯಂತ ಸಿಖರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಿಂದ ಚೀನಾ ಸಿಖರನ್ನು ಕಳಂಕಿತಗೊಳಿಸುವುದಕ್ಕಾಗಿ ಮತ್ತು ಅವರನ್ನು ಪ್ರಚೋದಿಸುವುದಕ್ಕಾಗಿ ಅನೇಕ ಅಭಿಯಾನಗಳು ನಡೆಸುತ್ತಿದೆ ಮತ್ತು ಅಪಪ್ರಚಾರ ಮಾಡುತ್ತಿದೆ. ಈ ಪ್ರಚಾರದಲ್ಲಿ ಚೀನಾವು ಭಾರತ, ಅಮೇರಿಕಾ, ಕೆನಡಾ ಸಹಿತ ಜಗತ್ತಿನಲ್ಲಿನ ಸಿಖ ಜನಾಂಗದ ಜನರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಮೂಲ ಕಂಪನಿ ‘ಮೇಟಾ’ದಿಂದ ಮಾಹಿತಿ ಲಭ್ಯವಾಗಿದೆ.

ಹಿಂದಿ ಮತ್ತು ಇಂಗ್ಲೀಷ್ ಖಾತೆಯ ಮೂಲಕ ಅಪಪ್ರಚಾರ !

ಚೀನಾ ಫೇಸ್ಬುಕ್ ,ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಮೂಲಕ ಹಿಂದಿ ಮತ್ತು ಇಂಗ್ಲಿಷ್ ಈ ಎರಡೂ ಭಾಷೆಗಳಲ್ಲಿ ದ್ವೇಷಪೂರಿತ ಖಾತೆಗಳನ್ನು ನಡೆಸುತ್ತಿದೆ. ಇದರ ಮೂಲಕ ಅದು ಸಿಖರನ್ನ ಪ್ರಚೋದಿಸುವುದು ಮತ್ತು ಅವರನ್ನು ಕಳಂಕಿತಗೊಳಿಸುವ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ಪಂಜಾಬ್ ಸಹಿತ ಜಗತ್ತಿನಲ್ಲಿನ ಸಿಖ್ ಜನಾಂಗ, ಖಲಿಸ್ತಾನಗಾಗಿ ಚಳುವಳಿ, ಕೆನಡಾದಲ್ಲಿನ ಖಲಿಸ್ತಾನಿ ಹರದೀಪ ಸಿಂಹ ನಿಜ್ಜರನ ಹತ್ಯೆ ಮತ್ತು ಭಾರತ ಸರಕಾರದ ಕುರಿತು ಟೀಕೆ ಮುಂತಾದಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳ ಸಮಾವೇಶವಿತ್ತು.

ಫೆಸ್‌ಬುಕ್‌ನಿಂದ ಖಾತೆ ಬಂದ

ಫೆಸ್‌ಬುಕ್‌ ಚೀನಾದ ಈ ಖಾತೆಗಳಿಗೆ ಕಡಿವಾಣ ಹಾಕಲು ಪ್ರಾರಂಭಿಸಿದೆ. ಫೆಸ್‌ಬುಕ್‌ನಿಂದ ಚೀನಾದಿಂದ ನಡೆಸುವ ಇಂತಹ ೩೭ ಖಾತೆಗಳು ಮತ್ತು ೧೩ ಪೇಜಗಳನ್ನು ತೆಗೆದು ಹಾಕಲಾಗಿದೆ.

ಚೀನಾ ಮತ್ತು ಪಾಕಿಸ್ತಾನ್ ಇವುಗಳ ಜಂಟಿ ಷಡ್ಯಂತ್ರ !

ಇಲ್ಲಿಯವರೆಗೆ ಸಾಮಾಜಿಕ ಜಾಲತಾಣದಲ್ಲಿನ ಪಾಕಿಸ್ತಾನಿ ಖಾತೆಗಳಿಂದ ಈ ರೀತಿ ಸಿಖರನ್ನು ಗುರಿ ಮಾಡಿ ಭಾರತದ ವಿರುದ್ಧ ಅಭಿಯಾನ ನಡೆಸಲಾಗುತ್ತಿತ್ತು. ಈಗ ಚೀನಾದ ಈ ರೀತಿ ಮೋಟ್ಟು ಮೊದಲ ಬಾರಿ ಬೆಳಕಿಗೆ ಬಂದಿದೆ. ಚೀನಾ ಮತ್ತು ಪಾಕಿಸ್ತಾನ ಇವರ ಜಂಟಿ ಷಡ್ಯಂತ್ರ ಇರಬಹುದು ಎಂದು ಭಾರತೀಯ ರಕ್ಷಣಾ ಇಲಾಖೆಯು ನುಡಿದಿದೆ.

ಸಂಪಾದಕೀಯ ನಿಲುವು

ತಂತ್ರಗಾರಿಕೆಯಲ್ಲಿ ನೈಪುಣ್ಯವಾಗಿರುವ ಚೀನಾ ! ಭಾರತ ಕೂಡ ಈಗ ‘ತಕ್ಕಂತೆ ಉತ್ತರಿಸುವ’ ನೀತಿಯನ್ನು ಅನುಸರಿಸುವುದು ಆವಶ್ಯಕ !