China Deploys fighter Jets : ಸಿಕ್ಕಿಂ ಗಡಿಯಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳ ಮರು ನಿಯೋಜನೆ ಮಾಡಿದ ಚೀನಾ !

ನವದೆಹಲಿ – ಸಿಕ್ಕಿಂನಿಂದ 150 ಕಿ.ಮೀ. ದೂರದಲ್ಲಿರುವ ಗಡಿ ಭಾಗದಲ್ಲಿ ಚೀನಾ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳಾದ ‘ಜೆ-20’ ಅನ್ನು ಮತ್ತೊಮ್ಮೆ ನಿಯೋಜಿಸಿದೆ. ಉಪಗ್ರಹಗಳು ತೆಗೆದ ಛಾಯಾಚಿತ್ರಗಳಲ್ಲಿ ಈ ಚಟುವಟಿಕೆ ಕಂಡುಬಂದಿದೆ. ಈ ವಿಮಾನಗಳು ಚೀನಾದ ವಾಯುಪಡೆಯ ನೆಲೆಯಲ್ಲಿ ನಿಯೋಜಿಸಲಾಗಿದೆ. ಈ ನೆಲೆಯು ಭಾರತದ ಗಡಿಗೆ ಅತಿ ಹತ್ತಿರದಲ್ಲಿದೆ. ಈ ನಿಯೋಜನೆಯ ಹಿಂದಿನ ಚೀನಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಭಾರತವು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

‘ಜೆ-20’ ಚೀನಾದ ಮೊದಲ ಸ್ಟೆಲ್ತ್ ಯುದ್ಧ ವಿಮಾನವಾಗಿದೆ(ರಡಾರ್ ವ್ಯವಸ್ಥೆಯಿಂದ ಪತ್ತೆಹಚ್ಚಲಾಗದ). ಇದು ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ದೂರಗಾಮಿ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ವಿಮಾನಕ್ಕಿದೆ.