Hindu-Muslim Marriage Prohibited in Islam: ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯ ಮದುವೆ ಅಸಿಂಧು !

ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ನಿರ್ಣಯ

ಜಬಲಪುರ (ಮಧ್ಯಪ್ರದೇಶ) – ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ವಿವಾಹವು ಮುಸಲ್ಮಾನ ಕಾನೂನಿನ ಪ್ರಕಾರ, ಎಂದರೆ ‘ಮುಸ್ಲಿಂ ಪರ್ಸನಲ್ ಲಾ’ ಪ್ರಕಾರ ಸಕ್ರಮ ಎಂದು ಹೇಳಲು ಸಾಧ್ಯವಿಲ್ಲ, ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಹೇಳಿದೆ. ವಿಶೇಷ ವಿವಾಹ ಕಾನೂನಿನ ಅಡಿಯಲ್ಲಿ ಇತರ ಧರ್ಮದ ವಿವಾಹಗಳಿಗೆ ಪೊಲೀಸರ ರಕ್ಷಣೆ ನೀಡುವ ಬೇಡಿಕೆ ಕೂಡ ನ್ಯಾಯಾಲಯ ತಳ್ಳಿ ಹಾಕಿದೆ.

ವಿಶೇಷ ವಿವಾಹ ಕಾನೂನಿನ ಅಡಿಯಲ್ಲಿ ವಿವಾಹ ನೋಂದಣಿಯಾಗಿದ್ದರೂ ಕೂಡ ಈ ವಿವಾಹ ಕಾನೂನುಭದ್ಧವಾಗಿದೆ ಎಂದು ಹೇಳಲಾಗದು !

ಉಚ್ಚ ನ್ಯಾಯಾಲಯವು, ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯು ವಿಶೇಷ ವಿವಾಹ ಕಾನೂನಿನ ಅಡಿಯಲ್ಲಿ ವಿವಾಹ ಮಾಡಿಕೊಂಡಿದ್ದರೂ ಅದು ‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ (ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ) ಇದನ್ನು ಅಕ್ರಮ ವಿವಾಹ ಎಂದು ಹೇಳಲಾಗುವುದು. ಮುಸಲ್ಮಾನ ಕಾನೂನಿನ ಪ್ರಕಾರ ಮುಸಲ್ಮಾನ ಹುಡುಗನು ಮೂರ್ತಿ ಪೂಜೆ ಮಾಡುವ ಮತ್ತು ಅಗ್ನಿ ಪೂಜೆ ಮಾಡುವ ಹುಡುಗಿಯ ಜೊತೆಗೆ ಮಾಡಿ ಕೊಂಡಿರುವ ವಿವಾಹ ಕಾನೂನು ಬದ್ಧವಾಗಿ ಇರುವುದಿಲ್ಲ. ವಿವಾಹ ಏನಾದರೂ ವಿಶೇಷ ವಿವಾಹಕಾನೂನಿನ ಅಡಿಯಲ್ಲಿ ನೋಂದಣಿ ಆಗಿದ್ದರೂ ಕೂಡ ವಿವಾಹ ಕಾನೂನ ಬದ್ಧ ಎಂದು ಹೇಳಲು ಸಾಧ್ಯವಿಲ್ಲ.

ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿಯಲ್ಲಿ ಹಿಂದೂ ಹುಡುಗಿ ಮತ್ತು ಮುಸಲ್ಮಾನ ಹುಡುಗನು ಅವರ ವಿಶೇಷ ವಿವಾಹ ಕಾನೂನಿನ ಅಡಿಯಲ್ಲಿ ವಿವಾಹ ಮಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು. ‘ವಿವಾಹದ ನಂತರ ಕೂಡ ಅವರಿಬ್ಬರು ತಮ್ಮ ತಮ್ಮ ಧರ್ಮದ ಪಾಲನೆ ಮುಂದುವರಿಸುವರು. ಅವರು ಪರಸ್ಪರರ ಧರ್ಮ ಸ್ವೀಕರಿಸಲು ಇಚ್ಚಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಜೋಡಿಗಳಿಗೆ ಪೊಲೀಸ ರಕ್ಷಣೆ ನೀಡಬೇಕು, ಕಾರಣ ಅದು ವಿಶೇಷ ವಿವಾಹ ಕಾನೂನಿನ ಅಡಿಯಲ್ಲಿ ಅವರು ವಿವಾಹ ನೋಂದಣಿ ಮಾಡಿಸಲು ಸಾಧ್ಯವಾಗುವುದು.

ಪರ್ಸನಲ್ ಲಾ ಅಡಿಯಲ್ಲಿ ಎರಡು ಧರ್ಮದ ಜನರು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ; ಆದರೆ ವಿಶೇಷ ವಿವಾಹ ಕಾನೂನಿನ ಪ್ರಕಾರ ಅದು ಕಾನೂನ ಬದ್ಧವಾಗಿರುವುದು’, ಎಂದು ಅವರ ನ್ಯಾಯವಾದಿಗಳು ನ್ಯಾಯಾಲಯಕ್ಕೆ ಹೇಳಿದರು.

ಉಚ್ಚ ನ್ಯಾಯಾಲಯವು, ವೈಯಕ್ತಿಕ ಕಾನೂನಿನ ಪ್ರಕಾರ ಕಾನೂನ ಬದ್ಧವಾಗಿ ಇಲ್ಲದಿರುವ ವಿವಾಹ ವಿಶೇಷ ಕಾನೂನಿನ ಪ್ರಕಾರ ಕೂಡ ಕಾನೂನಭದ್ದ ಇರಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾನೂನಿನ ಕಲಂ ೪ ಪ್ರಕಾರ ಇಬ್ಬರಲ್ಲಿನ ಒಬ್ಬರು ಜೋಡಿದಾರನ ಧರ್ಮ ಸ್ವೀಕರಿಸಬೇಕು, ಆಗ ಮಾತ್ರ ವಿವಾಹ ಆಗಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

‘ಮುಸ್ಲಿಂ ಪರ್ಸನಲ್ ಲಾ’ ಪ್ರಕಾರ ವಿವಾಹ ಅಕ್ರಮ !

ಪೊಲೀಸ ಮತ್ತು ಕಿರಿಯ ನ್ಯಾಯಾಲಯವು ಈ ಆದೇಶದ ಪ್ರಕಾರ ಪ್ರಕರಣವನ್ನು ನೋಡಬೇಕೆಂದು ಹಿಂದೂಗಳ ಅಪೇಕ್ಷೆ !