Indian Culture And Its Importance: ಹಿಂದುತ್ವನಿಷ್ಠ ‘ಪ್ರಾಚ್ಯಂಮ ಸ್ಟುಡಿಯೋಸ್’ ನ ‘ಶಾಶ್ವತ ಸಂಸ್ಕೃತಿ’ ಹೆಸರಿನ ಸಾಕ್ಷ್ಯ ಚಿತ್ರದ ಪ್ರಸಾರ

  • ಅನೇಕ ಸಂಸ್ಕೃತಿ ಅಳಿಸಿ ಹೋಗಿದ ನಂತರ ಕೂಡ ಪ್ರಾಚೀನ ಹಿಂದು ಸಂಸ್ಕೃತಿ ಹೇಗೆ ಉಳಿದಿದೆ ಇದರ ಸುಂದರ ವರ್ಣನೆ ಮಾಡುವ ಸಾಕ್ಷ್ಯ ಚಿತ್ರ !

  • ಕೇಂದ್ರ ಶಿಕ್ಷಣ ಸಚಿವಾಲಯದ ಸಹಯೋಗದಲ್ಲಿ ಚಟುವಟಿಕೆ !

ಸೌಜನ್ಯ: Prachyam

ವಾರಾಣಸಿ (ಉತ್ತರಪ್ರದೇಶ) – ಪ್ರಸಿದ್ಧ ‘ಪ್ರಾಚ್ಯಂಮ ಸ್ಟುಡಿಯೋಸ್’ ಈ ಹಿಂದುತ್ವನಿಷ್ಠ ಸಂಸ್ಥೆಯಿಂದ ‘ಶಾಶ್ವತ ಸಂಸ್ಕೃತಿ’ (ಇಂಟರ್ನಲ್ ಸಿವಿಲೈಜೇಷನ್) ಹೆಸರಿನ ಸಾಕ್ಷ್ಯ ಚಿತ್ರವನ್ನು ಮೇ ೨೮ ರಂದು ಸಂಜೆ ಪ್ರಸಾರವಾಯಿತು. ಈ ಸಾಕ್ಷ್ಯ ಚಿತ್ರದಲ್ಲಿ ದಕ್ಷಿಣ ಭಾರತದಲ್ಲಿನ ಆಳವಾದ ‘ಭಾರತೀಯ ಜ್ಞಾನ ವ್ಯವಸ್ಥೆ’ಯ (ಇಂಡಿಯನ್ ನಾಲೆಜ್ ಸಿಸ್ಟಮ್) ಮಹತ್ವ ವಿವರಿಸುತ್ತದೆ. ಅನೇಕ ಸಂಸ್ಕೃತಿ ಅಳಿಸಿ ಹೋಗಿದ್ದರು ಕೂಡ ಪ್ರಾಚೀನ ಹಿಂದೂ ಸಂಸ್ಕೃತಿ ಹೇಗೆ ಉಳಿದಿದೆ, ಇದರ ಸುಂದರ ವರ್ಣನೆ ಮತ್ತು ಅದು ಕೂಡ ‘ಭಾರತೀಯ’ ಪದ್ಧತಿಯಿಂದ ಈ ಸಾಕ್ಷ್ಯ ಚಿತ್ರದಲ್ಲಿ ಮಾಡಲಾಗಿದೆ. ಈ ಸಾಕ್ಷ್ಯ ಚಿತ್ರ ನೋಡಿ ಯಾವುದೇ ತಾರ್ಕಿಕ ವ್ಯಕ್ತಿಗು ಭಾರತೀಯ ಜ್ಞಾನಪರಂಪರೆಯ ಬಗ್ಗೆ ಆಶ್ಚರ್ಯ ಅನಿಸುವುದು.

ಈ ಸಾಕ್ಷಿ ಚಿತ್ರದ ಬಗ್ಗೆ ಸನಾತನ ಪ್ರಭಾತದ ಪ್ರತಿನಿಧಿಯೊಂದಿಗೆ ಮಾತನಾಡುವಾಗ ‘ಪ್ರಾಚ್ಯಮ್’ನ ಮುಖ್ಯ ಕಾರ್ಯಕಾರಿ ಅಧಿಕಾರಿ ಶ್ರೀ. ಪ್ರವೀಣ ಚತುರ್ವೇದಿ ಇವರು, ಈ ಸಾಕ್ಷ್ಯ ಚಿತ್ರ ಅತ್ಯಂತ ಪ್ರಭಾವಿಯಾಗಿದ್ದು ಇದರ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇವುಗಳಿಗೆ ಭಾರತೀಯ ದೃಷ್ಟಿಕೋನದಿಂದ ಜಗತ್ತಿನ ಎದುರು ಇಡುವ ಪ್ರಯತ್ನ ಮಾಡಲಾಗಿದೆ. ಸುಮಾರು ಅರ್ಧ ಗಂಟೆಯ ಈ ಇಂಗ್ಲೀಷ್ ಸಾಕ್ಷ್ಯ ಚಿತ್ರ ‘ಪ್ರಾಚ್ಯಮ’ಯಿಂದ ಭಾರತ ಸರಕಾರದ ಶಿಕ್ಷಣ ಸಚಿವಾಲಯದ ಸಹಯೋಗದೊಂದಿಗೆ ಪ್ರಸಾರ ಮಾಡಿದೆ ಎಂದು ಹೇಳಿದರು.

ಸಾಕ್ಷ್ಯ ಚಿತ್ರದ ಸಂದರ್ಭದಲ್ಲಿನ ಮುಖ್ಯ ಅಂಶಗಳು !

೧. ಈ ಸಾಕ್ಷ್ಯ ಚಿತ್ರ ತಯಾರಿಸುವುದಕ್ಕಾಗಿ ೧ ವರ್ಷದ ಸಮಯ ಬೇಕಾಯಿತು.

೨. ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ಈ ರಾಜ್ಯದಲ್ಲಿ ತಿರುಗಾಡಿ ಭಾರತದ ಆಳವಾದ ಸಂಸ್ಕೃತಿಯ ಗುರುತುಗಳಿಗೆ ಭೇಟಿ !

೩. ಪ್ರಾ. ಬೀ. ಮಹಾದೇವನ್, ಪ್ರಾ. ನಿಲೇಶ ಓಕ ಇವರಂತಹ ಗಣ್ಯರು, ಭರತನಾಟ್ಯಂ ಕಲಾವಿದರು, ಸಾಂಪ್ರದಾಯಿಕ ಚಿತ್ರಕಾರರು, ‘ಕಲಾರಿಪಟ್ಟು’ನ ಅಭ್ಯಾಸಕರು, ಪ್ರಾಚೀನ ಧಾತುಶಾಸ್ತ್ರಜ್ಞರು, ಕಾಂಸ್ಯ ಮತ್ತು ಗ್ರಾನೆಟ್ ಮೂರ್ತಿ ಶಿಲ್ಪ ಕಾರರು, ಆಯುರ್ವೇದ ತಜ್ಞರು ಮತ್ತು ವಾಸ್ತು ವಿಶಾರದರ ಭೇಟಿ !

೪. ಭಾರತೀಯ ಜ್ಞಾನದ ಸಂರಕ್ಷಣೆ ಮತ್ತು ಪ್ರಸಾರ ತಿಳಿದುಕೊಳ್ಳುವುದಕ್ಕಾಗಿ ಭಾರತದ ‘ಗುರು ಶಿಷ್ಯ ಪರಂಪರೆ’ ನೋಡುವುದಕ್ಕಾಗಿ ವೈದಿಕ ಶಾಲೆಗಳು ಮತ್ತು ಪಾಠಶಾಲೆಗಳ ಭೇಟಿ !

೫. ‘ಸಾಂಸ್ಕೃತಿಕ ಅಂತರ್ದೃಷ್ಟಿ’ ತಿಳಿದುಕೊಳ್ಳುವುದಕ್ಕಾಗಿ ಆದಿ ಶಂಕರಾಚಾರ್ಯರ ಮನೆ ‘ಚಿನ್ಮಯ ಮಿಷನ್’ನ ಗೌರಿ ಮಾಹುಲಿಕರ ಇವರ ಜೊತೆಗೆ ಚರ್ಚೆ !

೬. ಸಂಸ್ಕೃತದ ಮಹತ್ವ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅದರ ಪಾತ್ರ ಇದರ ಕುರಿತಾದ ವ್ಯಾಖ್ಯೆ !

ಸಾಕ್ಷ್ಯ ಚಿತ್ರದ ತಿರುಳು

ಹಿಂದೂ ಸಂಸ್ಕೃತಿಯು ಯುಗಯುಗಗಳಿಂದ ಮಾನವ ಸಮಾಜವನ್ನು ಬಲಪಡಿಸಿದೆ. ಪ್ರಾಚೀನ ಭಾರತೀಯರು ಜ್ಞಾನ ವ್ಯವಸ್ಥೆಯನ್ನು ಇಷ್ಟೊಂದು ಉನ್ನತ ಮಟ್ಟದಲ್ಲಿ ಪರಿಷ್ಕೃತ ಗೊಳಿಸಿದ್ದಾರೆ ಎಂದರೆ, ಜ್ಞಾನದ ಪ್ರಕ್ರಿಯೆಯಲ್ಲಿ ಪ್ರಭುತ್ವ ಪಡೆದು ಅದು ಸಮಾಜದ ದೃಷ್ಟಿಯಿಂದ ಲಾಭದಾಯಕ ತಜ್ಞರನ್ನು ನಿರ್ಮಾಣ ಮಾಡಬಹುದು. ಇದರಿಂದ ಸಾವಿರಾರು ವರ್ಷ ಜ್ಞಾನದ ಹಸ್ತಾಂತರ ಮತ್ತು ಸಂರಕ್ಷಣೆ ನಡೆಯುತ್ತಿದೆ. ಇದರಿಂದ ಒಂದು ಎಲ್ಲಕ್ಕಿಂತ ಸಮೃದ್ಧ ಸಭ್ಯತೆ ನಿರ್ಮಾಣವಾಗಿದೆ. ಇದರಲ್ಲಿ ವಾಸ್ತು ಕಲೆ, ಸಂಸ್ಕೃತಿ, ಪಾಕಕೃತಿ, ಸಾಹಿತ್ಯ ಮತ್ತು ಅರ್ಥ ಮುಂತಾದ ಶಾಸ್ತ್ರದ ಸಮಾವೇಶವಾಗಿದ್ದೂ ಇದರಿಂದ ಭಾರತ ೧೮ ನೆಯ ಶತಮಾನದವರೆಗೆ ಜಗತ್ತಿನಲ್ಲಿನ ಎಲ್ಲಕ್ಕಿಂತ ಶ್ರೀಮಂತ ದೇಶವಾಗಿತ್ತು.