ಜನಸಂಖ್ಯೆಯ ಪರಿಣಾಮ !

ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಅಧಿಕಾರ ವನ್ನು ತೋರಿಸುತ್ತಾರೆ’, ಎಂದು ಹೇಳಲಾಗುತ್ತದೆ; ಆದರೆ ಈ ನಿಯಮ ಅಥವಾ ಧೋರಣೆ ಎಲ್ಲ ಕಡೆ ಅನ್ವಯ ವಾಗುವುದಿಲ್ಲ, ಎಂಬ ಅನೇಕ ಉದಾಹರಣೆಗಳು ಈ ಜಗತ್ತಿನಲ್ಲಿವೆ. ಅದರಲ್ಲಿಯೂ ‘ಇಂತಹ ಉದಾಹರಣೆಗಳನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನೋಡಬಹುದು’, ಎಂದು ಯಾರಾದರೂ ಹೇಳಿದರೆ, ಅದು ತಪ್ಪಾಗಲಿಕ್ಕಿಲ್ಲ. ಮುಷ್ಟಿಯಷ್ಟು ಬ್ರಿಟಿಷರು ಸುಮಾರು ೨೦೦ ವರ್ಷಗಳ ಕಾಲ ಭಾರತವನ್ನು ಆಳಿದರು. ಸಂಖ್ಯಾಬಲದಲ್ಲಿ ಅವರು ಕಡಿಮೆಯಿದ್ದರೂ, ಬುದ್ಧಿಬಲದಲ್ಲಿ ಅವರು ತುಂಬಾ ಬಲಿಷ್ಠರಾಗಿದ್ದರು, ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ‘ಬ್ರಿಟಿಷÀರು ದೇಶವನ್ನು ಬಿಟ್ಟು ಹೋದಾಗ ಅವರ ಸಂಖ್ಯೆ ೫೦ ಸಾವಿರಕ್ಕಿಂತ ಹೆಚ್ಚಿರಲಿಲ್ಲ’, ಎಂದು ಹೇಳಲಾಗುತ್ತದೆ, ಅಂದರೆ ಆಗ (೧೯೪೭ ರಲ್ಲಿ) ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗಿದ್ದ ಭಾರತದ ಜನಸಂಖ್ಯೆ ಸುಮಾರು ೩೦ ಕೋಟಿಯಷ್ಟಿತ್ತು. ಇಂತಹ ದೇಶವನ್ನು ೫೦ ಸಾವಿರ ಬ್ರಿಟಿಷರು ಆಳುತ್ತಿದ್ದರು, ಎಂದು ಹೇಳಿದರೆ ಆಶ್ಚರ್ಯವೆನಿಸುತ್ತದೆ. ಇದರ ಬಗ್ಗೆ ಭಾರತದ ಬಹುಸಂಖ್ಯಾತರಾಗಿರುವ ಹಿಂದೂಗಳು ಯಾವತ್ತೂ ಚಿಂತನೆ ಮಾಡಿಲ್ಲ, ಎಂಬುದು ಎರಡನೆಯ ಆಶ್ಚರ್ಯವಾಗಿದೆ ! ಅದರಲ್ಲಿಯೂ ಕೆಲವು ರಾಜಕಾರಣಿಗಳು ಇದನ್ನು ಚಿಂತನೆ ಮಾಡಿ ಬ್ರಿಟಿಷÀರ ನೀತಿಯನ್ನೇ ಅನುಸರಿಸಿ ಭಾರತವನ್ನು ಆಳುತ್ತಿದ್ದಾರೆ, ಎಂಬುದನ್ನು ನಾವು ಕಳೆದ ೭೬ ವರ್ಷಗಳಿಂದ ನೋಡುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ವಿನ್ಸ್ಟನ್‌ ಚರ್ಚಿಲ್‌ ಇವರು ಬ್ರಿಟನ್‌ನ ಪ್ರಧಾನಮಂತ್ರಿಯಾಗಿದ್ದರು. ಅವರು ಹೇಳಿದ್ದರು, ‘ಭಾರತ ಒಂದು ದೇಶವಾಗಿರದೆ, ಅದು ದೊಡ್ಡ ಜನಸಂಖ್ಯೆ ಇರುವ ಒಂದು ಸಮೂಹವಾಗಿದೆ.’ ಚರ್ಚಿಲ್‌ ಇವರು ಹೇಳುವುದರ ತಾತ್ಪರ್ಯವೆಂದರೆ, ದೊಡ್ಡ ಜನಸಂಖ್ಯೆ ಇದ್ದರೂ ಭಾರತೀಯರಲ್ಲಿ ರಾಜ್ಯವನ್ನು ಆಳುವ ಕ್ಷಮತೆ ಇಲ್ಲ. ಚರ್ಚಿಲ್‌ ಇವರ ಹೇಳಿಕೆ ಸುಳ್ಳಾದರೂ ಸ್ವಲ್ಪ ಪ್ರಮಾಣದಲ್ಲಿ ಅದು ಬ್ರಿಟಿಷರ ಆಡಳಿತವನ್ನು ತುಲನೆ ಮಾಡಿದರೆ, ಸತ್ಯವೆನಿಸುವುದು’, ಎಂದು ಹೇಳಿದರೆ, ತಪ್ಪಾಗಲಿಕ್ಕಿಲ್ಲ. ಹೀಗೆ ಹೇಳುವ ಉದ್ದೇಶವೇನೆಂದರೆ, ದೊಡ್ಡ ಜನಸಂಖ್ಯೆ ಇದ್ದರೆ ಯಾವಾಗಲೂ ಅದರ ಕೈಮೇಲಾಗುತ್ತದೆ, ಎಂದು ಹೇಳುವ ಹಾಗಿಲ್ಲ. ಇಂದು ಕೂಡಾ ಭಾರತದಲ್ಲಿ ಹಿಂದೂ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಡಳಿತದವರೂ ಹಿಂದೂಗಳಾಗಿದ್ದಾರೆ, ಆಡಳಿತಾಧಿಕಾರಿಗಳು, ಪೊಲೀಸ್, ಸೈನಿಕರು, ಎಲ್ಲರೂ ಹಿಂದೂ ಆಗಿದ್ದಾರೆ; ಆದರೆ ಭಾರತ ‘ಹಿಂದೂ ರಾಷ್ಟ್ರ’ ವಾಗಿಲ್ಲ. ಭಾರತದಲ್ಲಿ ಹಿಂದೂಗಳಿಗೆ ಅವರ ಧರ್ಮದ ಆಧಾರ ದಲ್ಲಿ ಯಾವುದೇ ಅಧಿಕಾರವಿಲ್ಲ. ತದ್ವಿರುದ್ಧ ಅಲ್ಪಸಂಖ್ಯಾತರಿಗೆ ಅದರಲ್ಲಿಯೂ ಹೆಚ್ಚಾಗಿ ಮುಸಲ್ಮಾನರಿಗೆ ಅತೀ ಹೆಚ್ಚು ಅಧಿಕಾರ, ಸೌಲಭ್ಯ, ಯೋಜನೆಗಳಿವೆ ಹಾಗೂ ಬಹುಸಂಖ್ಯಾತ ಹಿಂದೂ ರಾಜಕಾರಣಿಗಳು ಈ ಮುಸಲ್ಮಾನ ಸಮಾಜವನ್ನು ಓಲೈಸಲು ಹಗಲಿರುಳು ಶ್ರಮಿಸುತ್ತಾರೆ. ಆದ್ದರಿಂದ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಪ್ರತಿವರ್ಷ ಕುಸಿಯುತ್ತಿದೆ, ಆದರೆ ಮುಸಲ್ಮಾನರ ಜನಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ, ಎನ್ನುವ ಮಾಹಿತಿ ಒಂದು ಅಂತಾರಾಷ್ಟ್ರೀಯ ವರದಿಯ ಮೂಲಕ ತಿಳಿದುಬಂದಿದೆ. ಈ ವರದಿಗನುಸಾರ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೮ ರಷ್ಟು ಕುಸಿದಿದೆ ಹಾಗೂ ಮುಸಲ್ಮಾನರು ಶೇ. ೪೩.೨ ರಷ್ಟು ಹೆಚ್ಚಾಗಿದ್ದಾರೆ. ೧೯೫೦ ರಲ್ಲಿ ಹಿಂದೂಗಳ ಸಂಖ್ಯೆ ಶೇ. ೮೪.೮೮ ರಷ್ಟಿತ್ತು, ಅದು ೨೦೧೫ ರಲ್ಲಿ ಕಡಿಮೆಯಾಗಿ ೭೮.೦೬ ರಷ್ಟಾಯಿತು. ಅದೇ ಅವಧಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೯.೮೪ ರಷ್ಟು ಹೆಚ್ಚಾಗಿ ಅದು ಶೇ. ೧೪.೦೯ ರಷ್ಟಾಯಿತು.

ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು !

ಇಂದಿನ ಸ್ಥಿತಿಯಲ್ಲಿಯೇ ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಮುಸಲ್ಮಾನರ ಜನಸಂಖ್ಯೆ ಹೀಗೆಯೇ ಹೆಚ್ಚುತ್ತಾ ಹೋದರೆ ಮುಂಬರುವ ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರಾದರೆ, ಅದರಿಂದ ಮುಂದೆ ಅವರ ವಂಶಸಂಹಾರವಾದರೆ ಆಶ್ಚರ್ಯವೆನಿಸಲಿಕ್ಕಿಲ್ಲ. ಅದರಲ್ಲಿಯೂ ಮುಸಲ್ಮಾನರು ಬಹುಸಂಖ್ಯಾತರಾಗುವ ಅವಶ್ಯಕತೆಯಿಲ್ಲ. ಈಗ ಸುಮಾರು ಶೇ. ೧೪ ರಷ್ಟು ಮುಸಲ್ಮಾನರು ಅಂದರೆ ಸುಮಾರು ೨೫ ಕೋಟಿ ಮುಸಲ್ಮಾನರು ಹಿಂದೂಗಳನ್ನು ಮಣಿಸುತ್ತಿದ್ದಾರೆ. ಇದರಲ್ಲಿ ಇನ್ನೂ ಶೇ. ೧೦ ರಿಂದ ೧೫ ರಷ್ಟು ಹೆಚ್ಚಾದರೂ ಅವರು ಹಿಂದೂಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಆ ಮೇಲೆ ಏನಾಗುವುದೊ, ಅದು ಕೇವಲ ಇತಿಹಾಸದ ಪುನರಾವೃತ್ತಿ ಆಗಿರುವುದು. ಬ್ರಿಟಿಷರು ಬುದ್ಧಿಶಕ್ತಿಯಿಂದ ಸಂಖ್ಯೆಯಲ್ಲಿ ಅತೀ ಕಡಿಮೆ ಇರುವಾಗಲೂ ಜಗತ್ತನ್ನು ಆಳಿದರು, ಮುಸಲ್ಮಾನರು ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಖಡ್ಗಬಲದಿಂದ ಜಗತ್ತಿನ ಅನೇಕ ದೇಶಗಳನ್ನು ಆಳಿದರು ಹಾಗೂ ಆ ದೇಶಗಳನ್ನು ಮುಸಲ್ಮಾನ ಬಹುಸಂಖ್ಯಾತವನ್ನಾಗಿಸಿದರು. ಇದು ಈ ಎರಡು ಸಮುದಾಯದಲ್ಲಿನ ವ್ಯತ್ಯಾಸವಾಗಿದೆ. ಇವರಿಬ್ಬರೂ ಭಾರತವನ್ನು ಆಳಿದರು. ಭಾರತದಲ್ಲಿನ ಲಕ್ಷಗಟ್ಟಲೆ ಹಿಂದೂಗಳನ್ನು ಮುಸಲ್ಮಾನರು ಮತಾಂತರಿಸಿದರು ಹಾಗೂ ಅದರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಿರ್ಮಾಣವಾಯಿತು. ಕಾಶ್ಮೀರ ಕೇವಲ ಭಾರತದ ಸೈನ್ಯಬಲದಿಂದಾಗಿ ಭಾರತದಲ್ಲಿ ಉಳಿದುಕೊಂಡಿದೆ. ಅದರ ಅರ್ಧ ಭಾಗವನ್ನು ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿದೆ. ಭಾರತದ ವಿರುದ್ಧದ ಸ್ಥಿತಿ ಪಾಕಿಸ್ತಾನದ್ದಾಗಿದೆ. ೧೯೪೭ ರಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಶೇ. ೧೨ ರಷ್ಟಿತ್ತು, ಇಂದು ಅದು ಶೇ. ೧.೮ ರಷ್ಟಾಗಿದೆ. ಬಾಂಗ್ಲಾದೇಶದಲ್ಲಿ ೧೯೭೧ ರಲ್ಲಿ ಶೇ. ೨೨ ರಷ್ಟು ಹಿಂದೂಗಳಿದ್ದರು, ಈಗ ಅದು ಶೇ. ೮ ರಷ್ಟಾಗಿದೆ. ಮುಸಲ್ಮಾನರು ಬಹುಸಂಖ್ಯಾತರಾದರೆ ಏನಾಗುತ್ತದೆ ? ಎಂಬುದು ಈ ಎರಡು ಉದಾಹರಣೆಯಿಂದ ಅರಿವಾಗುತ್ತದೆ.

ಹಿಂದೂ ರಾಜಕಾರಣಿಗಳು ಕಠೋರರಾಗಬೇಕು !

ಭಾರತದಲ್ಲಿ ಸಮಾನ ನಾಗರಿಕ ಕಾನೂನು ಇಲ್ಲದ ಕಾರಣ ಹಿಂದೂ ಮತ್ತು ಮುಸಲ್ಮಾನರಿಗೆ ಬೇರೆ ಬೇರೆ ಕಾನೂನುಗಳಿವೆ. ಇದರ ಪರಿಣಾಮದಿಂದಾಗಿ ಹಿಂದೂಗಳು ಏಕಪತ್ನಿ ಹಾಗೂ ೨ ಸಂತಾನಕ್ಕೆ ಸೀಮಿತವಾಗಿದ್ದಾರೆ. ತದ್ವಿರುದ್ಧ ಮುಸಲ್ಮಾನರು ಒಂದಕ್ಕಿಂತ ಹೆಚ್ಚು ವಿವಾಹವಾಗುತ್ತಾರೆ ಹಾಗೂ ಅನೇಕ ಮಕ್ಕಳಿಗೆ ಜನ್ಮ ನೀಡುತ್ತಾರೆ. ಅದರ ಜೊತೆಗೆ ಹಿಂದೂ ಯುವತಿಯರನ್ನು ಮೋಸದ ಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರಿಸುತ್ತಾರೆ ಹಾಗೂ ಅವರ ಮೂಲಕವೂ ಮಕ್ಕಳಿಗೆ ಜನ್ಮ ನೀಡುತ್ತಾರೆ. ಇದರಿಂದ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿದೆ, ಆದರೆ ಹಿಂದೂಗಳ ಸಂಖ್ಯೆ ಕುಸಿಯುತ್ತಿದೆ. ಈಗಿನ ಲೆಕ್ಕಾಚಾರವೇ ಅಂತಿಮವಲ್ಲ. ೧೯೨೧ ರ ಜನಗಣನೆ ಇದುವರೆಗೆ ಆಗಿಲ್ಲ. ಆದು ಆದನಂತರ ಹಿಂದೂಗಳ ಇಂದಿನ ಜನಸಂಖ್ಯೆ ಸ್ಪಷ್ಟವಾಗ ಬಹುದು ಹಾಗೂ ಅದರಲ್ಲಿ ಹಿಂದೂ ಶೇ. ೭೮ ಕ್ಕಿಂತಲೂ ಕಡಿಮೆಯಾಗಿರಬಹುದು, ಎಂಬುದರಲ್ಲಿ ಸಂಶಯವಿಲ್ಲ, ಅದೇ ವೇಳೆಗೆ ಮುಸಲ್ಮಾನರು ಶೇ. ೧೪ ಕ್ಕಿಂತ ಹೆಚ್ಚಾಗಿರುತ್ತಾರೆ, ಎಂಬುದು ಕೂಡ ಅಷ್ಟೇ ಸತ್ಯವಾಗಿರುವುದು. ಭಾರತವನ್ನು ಇಸ್ಲಾಮೀ ಕರಣ ಮಾಡುವುದೇ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಕನಸಾಗಿದೆ. ೨೦೪೭ ರ ವರೆಗೆ ಅವರಿಗೆ ಭಾರತವನ್ನು ಇಸ್ಲಾಮೀಕರಣ ಮಾಡಲಿಕ್ಕಿದೆ ಹಾಗೂ ಈ ಕನಸನ್ನು ನೆನಸನ್ನಾಗಿಸಲು ಅವರು ‘ಜನಸಂಖ್ಯೆ’ಯನ್ನು ಒಂದು ಶಸ್ತ್ರವನ್ನಾಗಿ ಉಪಯೋಗಿಸುತ್ತಿದ್ದಾರೆ. ಅದರ ಪರಿಣಾಮ ಕಾಣಿಸುತ್ತಿದೆ, ಎಂಬುದನ್ನು ನಿರಾಕರಿಸುವ ಹಾಗಿಲ್ಲ. ಈ ಶಸ್ತ್ರವನ್ನು ನಿರುಪಯುಕ್ತಗೊಳಿಸಲು ಹಿಂದೂಗಳು ಜಾಗೃತರಾಗಿ ಸಂಘಟಿತರಾಗುವ ಅವಶ್ಯಕತೆಯಿದೆ. ಕೇವಲ ಹಿಂದೂಗಳಲ್ಲ, ವಿಶೇಷವಾಗಿ ಹಿಂದೂ ರಾಜಕಾರಣಿಗಳು ಜಾಗೃತರಾಗುವ ಅವಶ್ಯಕತೆಯಿದೆ. ಹಿಂದೂಗಳ ಜನಸಂಖ್ಯೆಯ ಕುಸಿತದಿಂದಾಗುವ ಪತನವನ್ನು ತಡೆಗಟ್ಟಲು ಯುದ್ಧ ಸಾರಬೇಕಾಗಿದೆ. ಇದರ ಅರ್ಥ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸುವುದಲ್ಲ, ಮಸಲ್ಮಾನರ ಜನಸಂಖ್ಯೆ ಹೆಚ್ಚಾಗದಂತೆ ನಿರ್ಬಂಧ ಹೇರಿ ಅವರಲ್ಲಿನ ಕಟ್ಟರತೆಯನ್ನು ನಾಶಗೊಳಿಸಬೇಕು. ಅದಕ್ಕಾಗಿ ಧರ್ಮನಿರಪೇಕ್ಷತೆ ಯನ್ನು ಬದಿಗೊತ್ತಬೇಕಾಗುತ್ತದೆ, ಎಂಬುದೂ ವಾಸ್ತವಿಕವಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಿದರೆ ಮಾತ್ರ ಇದು ಸಾಧ್ಯವಾಗುವುದು. ‘ಹಿಂದೂ ರಾಷ್ಟ್ರ ಬಂದನಂತರ ಮುಸಲ್ಮಾನರು ಮತ್ತು ಕ್ರೈಸ್ತರು ಏನಾಗುವರು ?’, ಎನ್ನುವ ಪ್ರಶ್ನೆ ಕೇಳುವವರು ‘ಧರ್ಮನಿರಪೇಕ್ಷ ದೇಶದಲ್ಲಿ ಹಿಂದೂಗಳಿಗೆ ಏನಾಗುತ್ತಿದೆ ?’ ಎಂಬ ವಿಷಯದಲ್ಲಿ ಮಾತನಾಡುವುದಿಲ್ಲ, ಎಂಬುದನ್ನು ಗಮನ ದಲ್ಲಿಡಬೇಕು. ಚೀನಾದ ಅನುಕರಣೆಯಲ್ಲ, ಅದರ ಮಾದರಿಯಲ್ಲಿ ಕಠೋರ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸಲಿಕ್ಕಿಲ್ಲ.