ಛಾಯಾಚಿತ್ರ ಕ್ರಮಾಂಕ ೧
ಛಾಯಾಚಿತ್ರ ಕ್ರಮಾಂಕ ೨
ಛಾಯಾಚಿತ್ರ ಕ್ರಮಾಂಕ ೩
‘ರಾತ್ರಿಯ ಅಂಧಃಕಾರವನ್ನು ದೂರಗೊಳಿಸುವ, ಚರಾಚರ ಸೃಷ್ಟಿಯನ್ನು ಬೆಳಕಿನಿಂದ ಬೆಳಗಿಸುವ, ಹೊಸ ಆಸೆ, ಹೊಸ ಉತ್ಸಾಹವನ್ನು ನೀಡಿ ಕೇವಲ ಆಗಮನದಿಂದಲೇ ಎಲ್ಲರಲ್ಲಿಯೂ ಹೊಸಚೇತನವನ್ನು ಜಾಗೃತಗೊಳಿಸುವ ಸೂರ್ಯೋದಯ ! ಬೆಳಗಿನ ಪ್ರಸನ್ನ ವಾತಾವರಣದಲ್ಲಿ ಮನಸ್ಸು ಪ್ರಫುಲ್ಲಿತವಾಗುತ್ತದೆ. ಮಾರುತಿರಾಯನನ್ನೂ ಮೋಹಿಸಿದ, ಆ ಉದಯಿಸುವ ಸೂರ್ಯಬಿಂಬದ ದರ್ಶನವನ್ನು ಪಡೆಯುವುದು, ಸೂರ್ಯೋದಯದ ಸಮಯದಲ್ಲಿನ ಆ ವಾತಾವರಣವನ್ನು ಅನುಭವಿಸುವುದು, ಇದೊಂದು ಬೇರೆಯೇ ಅನುಭೂತಿಯಾಗಿರುತ್ತದೆ !
ಕೇವಲ ತನ್ನ ಅಸ್ತಿತ್ವದಿಂದ ಪೂರ್ಣ ಸೃಷ್ಟಿಯನ್ನು ಪ್ರಕಾಶಮಾನ ಗೊಳಿಸುವ ಸೂರ್ಯನಾರಾಯಣನ ದರ್ಶನವು ಸಾಕ್ಷಾತ್ ಶ್ರೀಮನ್ನಾರಾಯಣಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನೂ ಆಕರ್ಷಿಸುತ್ತದೆ.
೧. ಪ್ರತಿದಿನ ಸೂರ್ಯದರ್ಶನವನ್ನು ಪಡೆದು ಆ ಸಮಯದ ನೈಸರ್ಗಿಕ ಸೌಂದರ್ಯದ ವಿವಿಧ ವೈಶಿಷ್ಟ್ಯಗಳನ್ನು ಹಿಡಿದಿಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
‘ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಗಿಡಬಳ್ಳಿಗಳ ಮರೆಯಿಂದ ಕಾಣಿಸುವ ಸೂರ್ಯನ ದರ್ಶನವನ್ನು ಪಡೆಯುತ್ತಾರೆ. ಅವರು ಪ್ರತಿದಿನ ಸೂರ್ಯೋದಯದ ಸಮಯದ ವಿವಿಧ ಕ್ಷಣಚಿತ್ರ ಗಳನ್ನು ಬರೆದಿಟ್ಟು ಜೊತೆಯಲ್ಲಿರುವ ಸಾಧಕರಿಗೆ ತೋರಿಸುತ್ತಾರೆ ಮತ್ತು ಅದರ ಬಗ್ಗೆ ಹೇಳುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂರ್ಯೋದಯದ ಆ ಸುಂದರ ದೃಶ್ಯಕ್ಕೆ ‘ರಾಮನಾಥಿ ಸೂರ್ಯೋದಯ’ ಎಂದು ಹೇಳುತ್ತಾರೆ. ಉದಯಿಸುವ ಸೂರ್ಯನ ಆಕಾಶದಲ್ಲಿ ಹರಡಿದ ಕೇಸರಿ ಬಣ್ಣ, ಮರಗಳ ಹಿಂದೆ ಕಾಣುವ ತಿಳಿಗೆಂಪು ಸೂರ್ಯನ ಕಿರಣಗಳು, ಸೂರ್ಯೋದಯವಾದ ನಂತರ ವಾತಾವರಣದಲ್ಲಿನ ಇಬ್ಬನಿ ಕರಗಿ ಎಲ್ಲೆಡೆ ಪ್ರಕಾಶ ಹರಡುತ್ತದೆ. ಆಗ ಆ ಪ್ರಕಾಶಕಿರಣಗಳೂ ಸುಂದರವಾಗಿ ಕಾಣಿಸುತ್ತವೆ. ಗುರುದೇವರು ಪ್ರತಿದಿನ ಇದನ್ನೆಲ್ಲ ನಿರೀಕ್ಷಣೆ ಮಾಡುತ್ತಾರೆ.
ಕೆಲವೊಮ್ಮೆ ಸೂರ್ಯೋದಯವಾಗುತ್ತಿರುವಾಗ ಮರಗಳ ಎಲೆಗಳ ಮರೆÉಯಿಂದ ಸೂರ್ಯನ ಕಿರಣಗಳು ಇಣುಕಿ ನೋಡುತ್ತವೆ. ಮರೆÉಯಿಂದ ಬಂದಿರುವುದರಿಂದ ಕೆಲಮೊಮ್ಮೆ ಆ ದೃಶ್ಯವನ್ನು ನೋಡುವಾಗ, ಇಬ್ಬರು ಸೂರ್ಯರು ಉದಯಿಸಿದ್ದಾರೇನೋ, ಅನಿಸುತ್ತದೆ ! ಆ ೨ ಸೂರ್ಯಗಳ ಕಿರಣಗಳೂ ಕಾಣಿಸುತ್ತವೆ. ಅವು ಎಷ್ಟು ಸುಂದರ, ಒಂದೇ ತರಹ ಕಾಣಿಸುತ್ತವೆ ಎಂದರೆ, ಒಬ್ಬ ಚಿತ್ರಕಾರನು ಸುಂದರ ಕಲ್ಪನಾ ಚಿತ್ರವನ್ನೇ ಬಿಡಿಸಿದಂತಿದೆ ! (ಛಾಯಾಚಿತ್ರ ಕ್ರಮಾಂಕ ೧)
ಕೆಲವೊಮ್ಮೆ ಇದೇ ಸೂರ್ಯೋದಯವನ್ನು ವಿವಿಧ ದಿಶೆಯಿಂದ ನೋಡಿದರೆ ಅಕ್ಕಪಕ್ಕದಲ್ಲಿರುವ ೨ ಮರಗಳ ಕೊಂಬೆಗಳ ಮಧ್ಯದಿಂದ ಸೂರ್ಯನ ಕಿರಣಗಳು ಕಾಣಿಸುತ್ತವೆ. ಒಂದಕ್ಕೊಂದು ಜೋಡಿಸಿದ ಕೊಂಬೆಗಳು ಗುರುದೇವರಿಗೆ ದೇವಸ್ಥಾನದ ಕಮಾನಿನಂತೆ ಅನಿಸುತ್ತದೆ ! ಆ ದೃಶ್ಯವು ‘ಆ ದೇವಸ್ಥಾನದಲ್ಲಿಯೇ ಸೂರ್ಯೋದಯವಾಗುತ್ತಿದೆ’, ಎನ್ನುವಂತೆ ಕಾಣಿಸುತ್ತದೆ ! (ಛಾಯಾಚಿತ್ರ ಕ್ರಮಾಂಕ ೨)
ಸೂರ್ಯನಾರಾಯಣನೂ ಪ್ರಕಾಶಕಿರಣಗಳ ವಿವಿಧ ಲೀಲೆಗಳನ್ನು ಮಾಡಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರನ್ನು ಭೇಟಿಯಾಗಲು ಅವರ ಕೋಣೆಗೆ ಬರುತ್ತಾನೆ. ನಮಗೆ ಪ್ರತಿದಿನವೂ ‘ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಮತ್ತು ಸೂರ್ಯನಾರಾಯಣ ಇವರಿಬ್ಬರು ಪರಸ್ಪರರಲ್ಲಿ ದರ್ಶನವನ್ನು ಪಡೆಯಲು ಆತುರ ಪಡುತ್ತಿದ್ದಾರೆ’, ಎಂದು ಅನಿಸುತ್ತದೆ.’
೨. ಸೂರ್ಯೋದಯದ ಸಮಯದಲ್ಲಿನ ಸೃಷ್ಟಿ ಸೌಂದರ್ಯದ ಆನಂದವನ್ನು ಎಲ್ಲರಿಗೂ ಅನುಭವವಾಗಬೇಕೆಂದು ಆ ಕ್ಷಣಚಿತ್ರಗಳ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವುದು
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೌಂದರ್ಯ ದೃಷ್ಟಿಯಿಂದ ಸೂರ್ಯೋದಯದ ಸಮಯದಲ್ಲಿ ಅವರಿಗೆ ಯಾವ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಲು ಸಿಕ್ಕಿತೋ, ಅವುಗಳ ಅನೇಕ ಛಾಯಾಚಿತ್ರಗಳನ್ನು ಅವರು ತೆಗೆಸಿದರು. ‘ಈಶ್ವರನ ಚೈತನ್ಯದಿಂದ ತುಂಬಿರುವ ಸನಾತನದ ಆಶ್ರಮದ ಸುತ್ತಲಿನ ವಾತಾವರಣವೂ ದೈವೀಯಾಗಿದೆ. ಇಲ್ಲಿನ ನಿಸರ್ಗ ದಲ್ಲಿಯೂ ಒಂದು ಬೇರೆಯೇ ಸೌಂದರ್ಯವಿದೆ. ನಾವು ಆ ಸೌಂದರ್ಯದ ಆನಂದವನ್ನು ಹೇಗೆ ಪಡೆಯುತ್ತೇವೆಯೋ, ಅದೇ ರೀತಿ ಎಲ್ಲರಿಗೂ ಪಡೆಯಲು ಸಾಧ್ಯವಾಗಲಿ, ಎಂದು ಆ ವಾತಾವರಣದ ಚಿತ್ರೀಕರಣವನ್ನು ಮಾಡಿ ಇಡೋಣ. ಛಾಯಾಚಿತ್ರಗಳನ್ನು ತೆಗೆದು ಅವುಗಳನ್ನು ಎಲ್ಲರಿಗೂ ತೋರಿಸೋಣ’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಹೇಳುತ್ತಾರೆ. ಆದ್ದರಿಂದ ಅವರು ಒಂದು ತಿಂಗಳ ವರೆಗೆ ಸೂರ್ಯೋದಯದ ಅದೇ ದೃಶ್ಯದ ಅನೇಕ ಛಾಯಾಚಿತ್ರಗಳನ್ನು ಸಾಧಕರಿಂದ ತೆಗೆಸಿದÀರು. ಅವರು ನಮಗೆ ನಿಸರ್ಗವನ್ನು ತೋರಿಸುವಾಗ ಆ ದೃಶ್ಯದ ಆನಂದವನ್ನು ಸ್ವತಃ ಪಡೆದರು ಮತ್ತು ಸಾಧಕರಿಗೂ ಅದನ್ನು ಅನುಭವಿಸಲು ಸಾಧ್ಯವಾಗಬೇಕೆಂದು ಅದನ್ನು ಶ್ರಮಪಟ್ಟು ಹಿಡಿದಿಟ್ಟರು (ಚಿತ್ರೀಕರಣ ಮಾಡಿಸಿಕೊಂಡರು)
೩. ಜೇಡವು ಕಟ್ಟಿದ ಬಲೆಯ ಮೇಲೆ ಸೂರ್ಯನ ಕಿರಣಗಳು ಬಿದ್ದ ನಂತರ ಅದರಲ್ಲಿ ಏಳು ಬಣ್ಣಗಳು ಕಾಣುತ್ತಿರುವುದರಿಂದ ಅವುಗಳ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವುದು
ಒಂದು ದಿನ ರಾತ್ರಿ ಅವರ ಕೋಣೆಯ ಕಿಟಕಿಯಲ್ಲಿ ಜೇಡವು ಬಲೆಯನ್ನು ಕಟ್ಟಿತ್ತು. ಬೆಳಗ್ಗೆ ಸೂರ್ಯನ ಕಿರಣಗಳು ಅದರ ಮೇಲೆ ಬಿದ್ದಾಗ ಆ ಜೇಡರ ಬಲೆಯಲ್ಲಿ ಏಳು ಬಣ್ಣಗಳು ಕಾಣಿಸುವುದನ್ನು ಅವರು ನೋಡಿದರು. ಅದರ ಛಾಯಾಚಿತ್ರವನ್ನೂ ತೆಗೆಯಲು ಹೇಳಿದರು. (ಛಾಯಾಚಿತ್ರ ಕ್ರಮಾಂಕ ೩)
‘ಅವರು ಸಾಧಕರಿಗೆ, ‘ಅದರ ಛಾಯಾಚಿತ್ರಗಳು ಸರಿಯಾಗಿ ಬರುವವರೆಗೂ, ಕಿಟಕಿಯಲ್ಲಿನ ಆ ಜೇಡರ ಬಲೆಯನ್ನು ತೆಗೆಯ ಬಾರದು’, ಎಂದು ಹೇಳಿದರು. ‘ವಾಸ್ತವದಲ್ಲಿ ಜೇಡರ ಬಲೆ ಒಳ್ಳೆಯದಲ್ಲ’, ಎಂಬುದು ನಮ್ಮ ಮನಸ್ಸಿನ ವಿಚಾರವಾಗಿದೆ. ಜೇಡವು ಬಲೆಯನ್ನು ಕಟ್ಟಿದ್ದು ನೋಡಿದಾಗ, ನಾವು ಪೊರಕೆಯಿಂದ ತೆಗೆದು ಹಾಕುತ್ತೇವೆ; ಆದರೆ ಅದು ಆಕಸ್ಮಿಕವಾಗಿ ಬಂದಿರುವ ಜೇಡರ ಬಲೆಯಲ್ಲಿಯೂ ಏನಾದರೂ ಸುಂದರವಾಗಿ ಕಾಣಿಸುತ್ತಿದೆ, ಎಂದು ಅದನ್ನು ಬರೆದಿಡುವವರು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಷ್ಟು ಅದಕ್ಕೆ ಮಹತ್ವವನ್ನು ನೀಡುವ ಗುರುದೇವರು ಏಕೈಕರಾಗಿದ್ದಾರೆ ! ಇದೇ ರೀತಿ ಅವರು ನಿರಂತರ ಸೃಷ್ಟಿಯಲ್ಲಿನ ಸೌಂದರ್ಯವನ್ನು ಹಿಡಿದಿಟ್ಟು ಮತ್ತು ಆ ಬಗ್ಗೆ ಸಾಧಕರಿಗೂ ಹೇಳಿ ಅವರಿಗೆ ಸೃಷ್ಟಿಯ ಸೌಂದರ್ಯವನ್ನು ನೋಡಲು ಕಲಿಸುತ್ತಾರೆ !
ಭಗವಂತನು ಸರ್ವವ್ಯಾಪಿಯಾಗಿದ್ದಾನೆ. ಚರಾಚರ ಜೀವ ಸೃಷ್ಟಿಯ ಮೇಲೆ, ಸಜೀವ-ನಿರ್ಜೀವ ಎಲ್ಲರ ಮೇಲೆ ಅವನ ಕೃಪಾಕಟಾಕ್ಷವಿರುತ್ತದೆ. ಅವನು ಎಲ್ಲೆಡೆಯಲ್ಲಿನ ಒಳ್ಳೆಯ-ಕೆಟ್ಟ ಬದಲಾವಣೆಗಳನ್ನು ಗಮನಿಸುತ್ತಾನೆ, ಇದು ಶ್ರೀಮನ್ನಾರಾಯಣ ಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಒಡನಾಟದಲ್ಲಿ ನಮಗೆ ಅನೇಕ ಬಾರಿ ಅನುಭವಿಸಲು ಸಿಗುತ್ತದೆ. ಚರಾಚರ ಸೃಷ್ಟಿಯಲ್ಲಿನ ಸೌಂದರ್ಯವನ್ನು ಅನುಭವಿಸಲು ಕಲಿಸಿ ಸಾಧಕರ ಜೀವನವನ್ನೂ ಸುಂದರಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ !’
– ಶ್ರೀ. ಅತುಲ ಬಧಾಲೆ ಮತ್ತು ಶ್ರೀ. ಅಮಿತ ಡಗವಾರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೧.೨೦೨೩)