ಅಮೇರಿಕಾ: ಹಿಂದೂ ದೇವಸ್ಥಾನಗಳ ಕಟ್ಟಡ ಕಾಮಗಾರಿ ತಡೆಯುವುದಕ್ಕಾಗಿ ನಿಯಮ ಬದಲಾವಣೆ !

ಈ ಹಿಂದೆ ದೇವಾಲಯ ನಿರ್ಮಾಣಕ್ಕೆ ನೀಡಲಾಗಿದ್ದ ಅನುಮತಿಯ ನಿಯಮಗಳನ್ನು ಬದಲಾಯಿಸುವ ಮೂಲಕ ರದ್ದು !

ವಾಷಿಂಗ್ಟನ್ (ಅಮೇರಿಕಾ) – ಭಾರತದ ಹಾಗೂ ಸಂಪೂರ್ಣ ಜಗತ್ತಿಗೆ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಉಪದೇಶ ನೀಡುವ ಅಮೇರಿಕಾ ಸ್ವಂತ ದೇಶದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಮಾತ್ರ ಪಾಕಿಸ್ತಾನದಂತೆ ವರ್ತಿಸುತ್ತಿದೆ. ಯಾವ ರೀತಿ ಪಾಕಿಸ್ತಾನವು ಇಸ್ಲಾಮಾಬಾದಿನಲ್ಲಿ ಹಿಂದೂ ದೇವಸ್ಥಾನ ಕಟ್ಟಲು ಅನುಮತಿ ನೀಡಿಲ್ಲವೋ ಅದೇ ರೀತಿ ಅಮೇರಿಕಾದಲ್ಲಿನ ಲಾಸ್ ವೇಗಾಸ್ ನಲ್ಲಿನ ಹೆಂಡರಸನ್ ನಗರದಲ್ಲಿ ಹಿಂದೂಗಳಿಗೆ ದೇವಸ್ಥಾನ ಕಟ್ಟಲು ನೀಡಿರುವ ಅನುಮತಿಯನ್ನು ಸರಕಾರ ಹಿಂಪಡೆದಿದೆ. ಅನುಮತಿ ನೀಡಿದ ನಂತರ ದೇವಸ್ಥಾನದ ಕಟ್ಟಡ ಕಾಮಗಾರಿ ಆರಂಭವಾಗಿತ್ತು ; ಆದರೆ ಒಂದೇ ವರ್ಷದಲ್ಲಿ ಸ್ಥಳಿಯ ನಗರ ಪರಿಷತ್ತಿನಿಂದ ಈ ಅನುಮತಿಯನ್ನು ಹಿಂಪಡೆಯಲಾಗಿದೆ. ಅದಕ್ಕಾಗಿ ಪರಿಷತ್ತು ತನ್ನ ನಿಯಮಗಳನ್ನು ಬದಲಾಯಿಸಿತು. ಈಗ ಅಲ್ಲಿಯ ಹಿಂದೂಗಳು ಮತ್ತೆ ಅನುಮತಿಗಾಗಿ ಪ್ರಯತ್ನಿಸುತ್ತಿದ್ದಾರೆ.

ದೇವಸ್ಥಾನದಿಂದ ಗ್ರಾಮೀಣ ಸಂವರ್ಧನೆಗೆ ಹಾನಿ ಉಂಟಾಗುತ್ತದೆ ಎಂದು ಹೇಳಿ ದೇವಸ್ಥಾನಕ್ಕೆ ವಿರೋಧ !

‘ಆನಂದ ಉತ್ಸವ’ ಎಂಬ ಹೆಸರಿನ ಈ ಹಿಂದೂ ದೇವಸ್ಥಾನವು ಹೆಂಡರಸನ್ ನಲ್ಲಿನ ಗ್ರಾಮೀಣ ಪ್ರದೇಶದ ೫ ಎಕರೆ ಜಾಗದಲ್ಲಿ ಕಟ್ಟಲು ನಿರ್ಧರಿಸಲಾಗಿತ್ತು. ಆದರೆ ಸ್ಥಳೀಯ ನಿವಾಸಿಗಳ ವಿರೋಧದ ಆಧಾರ ನೀಡುತ್ತಾ ನಗರ ಪರಿಷತ್ತು ೨೦೨೨ ರಲ್ಲಿ ಅನುಮತಿಯನ್ನು ಹಿಂಪಡೆಯಿತು. ಅಮೇರಿಕನ್ ಹಿಂದೂ ಅಸೋಸಿಯೇಷನ್ ನ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ. ಸತೀಶ್ ಭಟನಾಗರ ಅವರು ಈ ಬಗ್ಗೆ ಮಾತನಾಡಿ, ಹೆಂಡರಸನ್ ಇದು ಹಿಂದುಗಳಿಗಾಗಿ ಮಹತ್ವದ ಸ್ಥಾನವಾಗಿದೆ. ಭಟನಾಗರ ಮತ್ತು ಬಾಬಾ ಅನಲ್ ಅವರು ಈ ಜಾಗವನ್ನು ನಾಲ್ಕು ಲಕ್ಷ ಡಾಲರ್ ಗಿಂತಲೂ (೩ ಕೋಟಿ ೩೨ ಲಕ್ಷ ರೂಪಾಯಿಗಿಂತಲೂ ಹೆಚ್ಚು) ಹೆಚ್ಚು ಬೆಲೆ ನೀಡಿ ಖರೀದಿಸಿದ್ದರು.

ಹೆಂಡರಸನ್ ನಲ್ಲಿನ ಸಮರಲಿನ್ ಪ್ರದೇಶದಲ್ಲಿ ಒಂದು ಹಿಂದೂ ದೇವಸ್ಥಾನ ಇರುವುದರಿಂದ ನಮ್ಮ ನಗರದ ಇತರ ಭಾಗದಲ್ಲಿಯೂ ಕೂಡ ಹಿಂದುಗಳಿಗಾಗಿ ದೇವಸ್ಥಾನ ಬೇಕಿತ್ತು. ಹಿಂದೂ ಸಮಿತಿಯುಲ್ಲಿ ಸುಮಾರು ೧ ಲಕ್ಷ ಸದಸ್ಯರಿದ್ದಾರೆ. ಆಗಸ್ಟ್ ೨೦೨೨ ರಲ್ಲಿ ದೇವಸ್ಥಾನಕ್ಕೆ ಅನುಮತಿ ನೀಡಲಾದ ನಂತರ ಸ್ಥಳೀಯ ನಿವಾಸಿಗಳು ಅದೇ ವರ್ಷ ಅಕ್ಟೋಬರ್ ನಲ್ಲಿ ಈ ಅನುಮತಿಗೆ ಸವಾಲು ಒಡ್ಡಿದರು. ಈ ದೇವಸ್ಥಾನದಿಂದ ಗ್ರಾಮೀಣ ಸಂವರ್ಧನೆಗೆ ಹಾನಿ ಉಂಟಾಗುವುದು ಎಂದು ದಾವೆ ಹೂಡಿದರು. ಆದರೆ ಅದೇ ಪರಿಸರದಲ್ಲಿ ೩ ಚರ್ಚುಗಳು ಮೊದಲಿಂದಲೇ ಅಸ್ತಿತ್ವದಲ್ಲಿವೆ, ಎಂದು ಭಟನಾಗರ ಮಾಹಿತಿ ನೀಡಿದರು.

ಆಕ್ಷೇಪದ ನಂತರ ಮಂದಿರ ಸಮಿತಿಯಿಂದ ಅನೇಕ ಬದಲಾವಣೆ

ಈ ವಿರೋಧದ ನಂತರ ಸ್ಥಳೀಯ ನಿವಾಸಿಗಳ ಆತಂಕವನ್ನು ಗಮನಕ್ಕೆ ತೆಗೆದುಕೊಂಡು ಮಂದಿರ ಸಮಿತಿಯು ಮಂದಿರದ ಎತ್ತರ ಮತ್ತು ವಾಹನ ನಿಲುಗಡೆಗೆ ಜಾಗ ಇದಕ್ಕೆ ಸಂಬಂಧಪಟ್ಟ ಕೆಲವು ಬದಲಾವಣೆಗಳನ್ನು ಮಾಡಿತು. ಕಟ್ಟಡದ ನಿರ್ಮಾಣವನ್ನು ಇನ್ನಷ್ಟು ಕಡಿಮೆ ಮಾಡಲಾಯಿತು. ಅದರ ನಂತರ ನಗರ ಪರಿಷತ್ತು ನಿವಾಸಿಗಳ ಸವಾಲನ್ನು ೪:೧ ಮತದಿಂದ ತಳ್ಳಿ ಹಾಕಿದ್ದು ಅಮೆರಿಕನ್ ಹಿಂದೂ ಅಸೋಸಿಯೇಷನ್ ಗೆ ಒಂದು ವರ್ಷಕ್ಕಾಗಿ ಶರತ್ತು ವಿಧಿಸಿ ಅನುಮತಿ ನೀಡಿತು. ದೇವಸ್ಥಾನ ಸಮಿತಿ ಕೂಡ ದೇವಸ್ಥಾನದ ಕಟ್ಟಡ ಕಾಮಗಾರಿ ಆರಂಭಿಸಿತ್ತು ; ಆದರೆ ಅನುಮತಿಯ ಅವಧಿ ಮುಗಿಯುವ ಒಂದು ತಿಂಗಳ ಮೊದಲೇ ನಗರ ಪರಿಷತ್ತು ತನ್ನ ನಿಯಮಗಳನ್ನು ಬದಲಾಯಿಸಿತು. ಅದರ ನಂತರ ಈ ಪರಿಸರದಲ್ಲಿ ಧಾರ್ಮಿಕ ಕಟ್ಟಡಗಳ ಮೇಲೆ ನಿಷೇಧ ಹೇರಲಾಯಿತು.

ಬಾಬಾ ಅನಲ್ ಅವರು ಈ ಬಗ್ಗೆ ಮಾತನಾಡಿ, ಇಂಜಿನಿಯರ್ ಗಳ ಕೆಲಸ ಮುಗಿಯುವ ಹಂತದಲ್ಲಿತ್ತು. ದಾಖಲೆಗಳ ಪೂರ್ತಿಗಾಗಿ ಈಗ ಅನಾವಶ್ಯಕ ಅಡಚಣೆಗಳನ್ನು ತಂದೊಡ್ಡಲಾಗುತ್ತಿದೆ. ಅನುಮತಿ ಹೆಚ್ಚಿಸಲು ಅಮೇರಿಕನ್ ಹಿಂದೂ ಅಸೋಸಿಯೇಷನ್ ಆಗ್ರಹಕ್ಕೆ ಹೆಂಡರಸನ್ ನಗರ ಪರಿಷತ್ತು ನಿರಾಕರಿಸಿದೆ, ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ಅಮೇರಿಕಾ ಭಾರತದ ಸ್ನೇಹಿತನಾಗಲು ಯಾವತ್ತೂ ಸಾಧ್ಯವಿಲ್ಲ, ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಮೇರಿಕಾ ಒಂದು ವಿಶ್ವಾಸಘಾತಕ, ಸ್ವಾರ್ಥಿ ಮತ್ತು ಅವಕಾಶ ಸಾಧಕ ದೇಶವಾಗಿದೆ ಎಂಬುದನ್ನು ಭಾರತೀಯರು ಯಾವತ್ತೂ ಗಮನದಲ್ಲಿಡಬೇಕು !