ಕಳೆದ ೧೦ ವರ್ಷಗಳಿಂದ ನಡೆಯುತ್ತಿದ್ದ ಡಾ. ನರೇಂದ್ರ ದಾಭೋಲಕರ್ ಹತ್ಯೆ ಪ್ರಕರಣದ ಖಟ್ಲೆಯ ನಿರ್ಣಯ ಅಂತಿಮವಾಗಿ ಘೋಷಣೆ ಆಗಿ ಮೂವರು ಹಿಂದುತ್ವನಿಷ್ಠರ ನಿರ್ದೋಷತ್ವ ಸಿದ್ಧವಾಯಿತು. ಸಚಿನ ಅಂದೂರೆ ಮತ್ತು ಶರದ ಕಳಸಕರ್ ಈ ೨ ಹಿಂದುತ್ವನಿಷ್ಠರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೂ ಉಚ್ಚ ನ್ಯಾಯಾಲಯದಲ್ಲಿ ಅವರಿಗೂ ನ್ಯಾಯ ಸಿಗುವುದು, ಎಂಬ ನಮಗೆ ಪೂರ್ಣ ವಿಶ್ವಾಸವಿದೆ. ‘ಅಂತಿಮ ವಿಜಯಶ್ರೀ ಸತ್ಯವನ್ನೇ ಆಕರ್ಷಿಸುತ್ತದೆ’, ಎಂಬುದು ಆಗ ಸಿದ್ಧವಾಗುವುದು, ಎಂಬುದರಲ್ಲಿ ನಮಗೆ ಕಿಂಚಿತ್ತೂ ಸಂದೇಹವಿಲ್ಲ. ಸನಾತನದ ಸಾಧಕರು ಮತ್ತು ಹಿಂದುತ್ವನಿಷ್ಠರನ್ನು ಈ ಹತ್ಯೆ ಪ್ರಕರಣದಲ್ಲಿ ವಿನಾಕಾರಣ ಸಿಲುಕಿಸಿದಾಗ ಸನಾತನ ಸಂಸ್ಥೆ ಹಾಗೂ ಸಾಧಕರು ಒಂದು ಸುದೀರ್ಘ ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಯಿತು; ಆದರೆ ಸನಾತನ ಸಂಸ್ಥೆಯ ಹಾಗೆಯೆ ಸಂಸ್ಥೆಯ ಸಾಧಕರು ಮತ್ತು ಹಿಂದುತ್ವನಿಷ್ಠರು ಸೀತಾಮಾತೆಯ ಹಾಗೆ ನಿಷ್ಕಳಂಕ ಆಗಿರುವುದರಿಂದ ಅವರು ಈ ಅಗ್ನಿಪರೀಕ್ಷೆಯಿಂದ ಹೊರಗೆ ಬಂದರು, ಹಾಗೆಯೆ ಇಬ್ಬರು ಹಿಂದುತ್ವನಿಷ್ಠರೂ ಹೊರಗೆ ಬರುವರು ಹಾಗೂ ಅವರ ಬೆಂಬಲಕ್ಕೆ ಸನಾತನ ಸಂಸ್ಥೆ ದೃಢವಾಗಿ ನಿಲ್ಲುವುದು; ಏಕೆಂದರೆ ಈ ಹೋರಾಟ ಕೇವಲ ಸನಾತನ ಸಂಸ್ಥೆಗೆ ಸೀಮಿತವಾಗಿಲ್ಲ, ಇದು ಹಿಂದುತ್ವವನ್ನು ಅವಮಾನಿಸಿ, ಹಿಂದೂಗಳಿಗೆ ‘ಕೇಸರಿ ಭಯೋತ್ಪಾದಕರು’ ಎಂದು ಹಣೆಪಟ್ಟಿ ಕಟ್ಟುವ ಅಂತಾರಾಷ್ಟ್ರೀಯ ಷಡ್ಯಂತ್ರದ ಒಂದು ಭಾಗವಾಗಿದೆ. ಪ್ರಗತಿಪರರ ಹತ್ಯೆಯ ನಂತರ ನಿರ್ಮಾಣವಾದ ಸಂಘರ್ಷವು ನೇರವಾಗಿ ‘ನಗರ ನಕ್ಸಲರು ಮತ್ತು ಸಾಮ್ಯವಾದಿಗಳ ವಿರುದ್ಧ ಹಿಂದುತ್ವನಿಷ್ಠ’, ಎಂದೇ ಪ್ರಚಲಿತವಾಗಿದೆ. ಅದೇ ರೀತಿ ಇದು
ದೇಶದ್ರೋಹಿಗಳ ವಿರುದ್ಧ ರಾಷ್ಟ್ರಪ್ರೇಮಿಗಳ ಹಾಗೂ ಧರ್ಮಪ್ರೇಮಿ ಗಳ ಹೋರಾಟವಾಗಿದೆ. ಡಾ. ದಾಭೋಲಕರ್ ಹತ್ಯೆಯ ಪ್ರಕರಣದ ಮೂಲಕ ಸನಾತನ ಸಂಸ್ಥೆಯನ್ನು ‘ಕೇಸರಿ ಭಯೋತ್ಪಾದಕರು’ ಎಂದು ಹೇಳುತ್ತಾ ಪದೇ ಪದೇ ಪ್ರಶ್ನಿಸಲಾಯಿತು… ಪ್ರಸಾರಮಾಧ್ಯಮಗಳು ಅನೇಕ ವರ್ಷ ‘ಮಿಡಿಯಾ ಟ್ರಾಯಲ್’ (ಪ್ರಸಾರಮಾಧ್ಯಮಗಳು ನ್ಯಾಯಾಧೀಶರ ಪಾತ್ರವಹಿಸಿ ಮಾಡುವ ವಾರ್ತಾಸಂಕಲನ) ನಡೆಸಿ ಅದನ್ನು ಆರೋಪಿಯ ಕಟಕಟೆಯಲ್ಲಿ ನಿಲ್ಲಿಸಲಾಯಿತು. ಈಶ್ವರನಿಷ್ಠ ಹಾಗೂ ನಿರ್ದೋಷಿ ಸಂಸ್ಥೆಯ ಸಾಧಕರಿಗೆ ಅನಾವಶ್ಯಕ ಶಾರೀರಿಕ, ಮಾನಸಿಕ, ಆರ್ಥಿಕ ಹಿಂಸೆ ನೀಡಿ ಅವರನ್ನು ಅವಮಾನಿಸಲಾಯಿತು, ಆ ಎಲ್ಲ ಸಂಘರ್ಷಗಳಿಗೆ ಈಗ ಸ್ವಲ್ಪ ಪ್ರಮಾಣದಲ್ಲಿಯಾದರೂ ಇಂದಿನ ಸಿ.ಬಿ.ಐ. ನ್ಯಾಯಾಲಯದ ನಿರ್ಣಯದ ನಂತರ ತೆರೆ ಬಿದ್ದಿದೆ. ಪ್ರಸಾರ ಮಾಧ್ಯಮಗಳಿಗೆ ಮೊದಲೆ ಕಲ್ಪನೆ ನೀಡಿ ಪೊಲೀಸರು ಆಶ್ರಮದ ಮೇಲೆ ದಾಳಿ ಮಾಡಿದರು. ಅನೇಕ ವರ್ಷಗಳ ವರೆಗೆ ‘ಯಾವುದೇ ಕ್ಷಣದಲ್ಲಿ ಪೊಲೀಸರು ಆಶ್ರಮಕ್ಕೆ ಬರಬಹುದು’, ಎನ್ನುವ ಸ್ಥಿತಿ ಇತ್ತು. ದಾಭೋಲಕರ್ ಹತ್ಯೆಯ ನಂತರ ಅನೇಕ ವೇಳೆ ಪ್ರಸಾರ ಮಾಧ್ಯಮದವರು ಸನಾತನದ ಆಶ್ರಮಕ್ಕೆ ಅನಿರೀಕ್ಷಿತವಾಗಿ ಒಟ್ಟಾಗುವುದು ಹಾಗೂ ಏನಾದರೂ ವಿಷಯ ತಿಳಿಯುವ ಮೊದಲೇ ವಾರ್ತಾವಾಹಿನಿಗಳಲ್ಲಿ ‘ಬ್ರೇಕಿಂಗ್ ನ್ಯೂಸ್’ ಆರಂಭವಾಗುವುದು. ಇವೆಲ್ಲ ಸಂಘರ್ಷಗಳು ಸನಾತನ ಸಂಸ್ಥೆಯ ಸಾಧಕರನ್ನು ಸಿದ್ಧಪಡಿಸುವ, ಬಹಳಷ್ಟು ಕಲಿಸುವ, ಅಂದರೆ ಅವರಿಂದ ಸಾಧನೆ ಮಾಡಿಸಿಕೊಳ್ಳುವುದಾಗಿತ್ತು; ಆದ್ದರಿಂದಲೆ ಸನಾತನಕ್ಕೆ ಎಷ್ಟೇ ಕಷ್ಟಗಳು ಬಂದರೂ, ಸಾಧಕರು ಭಯಭೀತರಾಗುವ ಅಥವಾ ತುಂಬಾ ಚಿಂತೆಗೀಡಾಗುವಂತಹ ಪ್ರಸಂಗ ಉದ್ಭವಿಸಲಿಲ್ಲ. ಸಾಧಕರ ಈಶ್ವರನಿಷ್ಠೆ ಹಾಗೂ ಗುರುಗಳ ಮೇಲಿನ ಶ್ರದ್ಧೆ ಅವರನ್ನು ಇದರಿಂದ ಪಾರು ಮಾಡಿತು. ನೌಕರಿ, ವ್ಯವಸಾಯವನ್ನು ನಿರ್ವಹಿಸುತ್ತಾ ಸನಾತನದ ಧರ್ಮಪ್ರಚಾರದ ಕಾರ್ಯ ಮಾಡುವ ಸಾಧಕರು ಸಮಾಜದಲ್ಲಿನ ಜನರ ಪ್ರಶ್ನೆಗಳಿಗೆ ಹಾಗೂ ಪ್ರಶ್ನಾರ್ಥಕ ದೃಷ್ಟಿಯನ್ನು ಎದುರಿಸಬೇಕಾಯಿತು; ಆದರೆ ಈಶ್ವರನ ಮೇಲಿನ ಶ್ರದ್ಧೆಯಿಂದಲೆ ಅವರಿಗೆ ಈ ಎಲ್ಲ ಸಂಘರ್ಷಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಯಿತು. ಈ ಸಮಯದಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ಸಿನ ಸರಕಾರ ಇತ್ತು ಹಾಗೂ ಹಿಂದೂದ್ವೇಷಿ ರಾಜಕಾರಣಿಗಳ ಪ್ರಭಾವದಿಂದ ಅವರು ಸನಾತನದ ಮೇಲೆ ನಿರ್ಬಂಧ ಹೇರಲು ತುಂಬಾ ಪ್ರಯತ್ನಿಸಿದರು; ಆದರೆ ವಾಸ್ತವದಲ್ಲಿ, ವಿಪಕ್ಷದಲ್ಲಿನ ಅನೇಕ ಶಾಸಕರಿಗೆ ‘ಸನಾತನದ ಕಾರ್ಯ ಚೆನ್ನಾಗಿದೆ’, ಎಂಬುದು ತಿಳಿದಿತ್ತು. ಚಿನ್ನದ ಮೇಲೆ ಹೇಗೆ ಯಾವುದರ ಪರಿಣಾಮವೂ ಆಗುವುದಿಲ್ಲ ಅಥವಾ ಸತ್ಯಕ್ಕೆ ಜಯ ಎನ್ನುವ ಹಾಗೆ ಸನಾತನ ಸಂಸ್ಥೆಯು ಸ್ವಯಂ ಈಶ್ವರನ ಆಶೀರ್ವಾದದಿಂದ ನಡೆಯುತ್ತಿರುವುದರಿಂದ ಅದರ ವಿರುದ್ಧ ಎಷ್ಟೇ ಆರೋಪ-ಪ್ರತ್ಯಾರೋಪಗಳು ಬಂದರೂ, ನಿರ್ಬಂಧದ ಹರಟೆ ಹೊಡೆದರೂ, ಅದರ ಸಾಧಕರನ್ನು ಸೆರೆಮನೆಗೆ ತಳ್ಳಿದರೂ ಅವರು ಈ ಅಗ್ನಿಪರೀಕ್ಷೆಯಿಂದ ಬೆಂದು ಎಲ್ಲ ತರಹದ ಕಷ್ಟನಷ್ಟಗಳನ್ನು ಸಹಿಸಿಕೊಂಡು ಹೊರಗೆ ಬಂದು ಇನ್ನೂ ಹೆಚ್ಚು ಹೊಳೆಯುತ್ತಾ ಸ್ಥಾಪನೆಯ ‘ರಜತ ಮಹೋತ್ಸವ’ವನ್ನು ಆಚರಿಸುತ್ತಿದ್ದಾರೆ.
ದಾರಿ ತಪ್ಪಿದ ತನಿಖಾದಳದ ಟೊಳ್ಳುತನ !
ದಾಭೋಲಕರ್ ಹತ್ಯೆಯ ಪ್ರಕರಣದಲ್ಲಿ ತನಿಖಾ ದಳ ಮಾಡಿದ ಅನೇಕ ಕಪಟನಾಟಕಗಳನ್ನು ಒಂದೊಂದೆ ಸಂಪೂರ್ಣ ಸಮಾಜಕ್ಕೆ ತಲಪಿಸಿದರೆ, ಈ ತಥಾಕಥಿತ ಹೆಸರಾಂತ ತನಿಖಾ ದಳದ ಮೇಲಿನ ವಿಶ್ವಾಸ ಸಂಪೂರ್ಣ ಮಣ್ಣುಪಾಲಾಗುವುದೆಂಬುದರಲ್ಲಿ ಸಂಶಯವಿಲ್ಲ; ಬಹುಶಃ ಭಾರತದಲ್ಲಿನ ಇನ್ನಿತರ ಖಟ್ಲೆಗಳಲ್ಲಿ ಏನಾಗುತ್ತಿರಬಹುದು, ಎಂಬುದೂ ಇದರಿಂದ ಕಲ್ಪನೆ ಬರಬಹುದು. ಯಾವುದಾದರೂ ಒಂದು ದೊಡ್ಡ ಧಾರಾವಾಹಿಯಲ್ಲಿ ಇಂತಹ ಅನೇಕ ಉಪಕಥೆಗಳಿರುತ್ತವೆ, ಅಂತಹ ಅನೇಕ ಉಪಕಥೆಗಳು ಪೊಲೀಸರ ಈ ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರ್ಮಾಣವಾದವು. ಪೊಲೀಸರು ಯಾರದ್ದೋ ಒತ್ತಡಕ್ಕೆ ಬಲಿಯಾಗಿ ಎಷ್ಟು ಸುಳ್ಳು ಹೇಳಬಹುದು ಹಾಗೂ ಜನರನ್ನು ಹುಚ್ಚರನ್ನಾಗಿ ಮಾಡಬಹುದು, ಎಂಬುದಕ್ಕೆ ಈ ಖಟ್ಲೆಯಷ್ಟು ಒಳ್ಳೆಯ ಉದಾಹರಣೆ ಇನ್ನೊಂದಿರಲಿಕ್ಕಿಲ್ಲ. ಒಂದು ಸುಳ್ಳನ್ನು ಜೀರ್ಣಿಸಿಕೊಳ್ಳಲು ಇನ್ನೊಂದು ಸುಳ್ಳನ್ನು ಹುಟ್ಟು ಹಾಕುವುದು, ಅದನ್ನು ಅಡಗಿಸಲು ಮೂರನೇ ಸುಳ್ಳು, ಹೀಗೆ ಮಾಡಿ ತನಿಖಾ ದಳವು ನಿರ್ದೋಷಿ ಆರೋಪಿಗಳ ಜೀವನದೊಂದಿಗೆ ಆಟವಾಡಿತು; ಮಾತ್ರವಲ್ಲ, ಕೋಟಿಗಟ್ಟಲೆ ಹಿಂದೂಗಳ ಭಾವನೆಯೊಂದಿಗೂ ಆಟವಾಡಿತು; ಏಕೆಂದರೆ ಹಿಂದೂಗಳಿಗೆ ಭಯೋತ್ಪಾದಕರೆಂದು ಹಣೆಪಟ್ಟಿ ಹಚ್ಚಲು ಇವೆಲ್ಲ ಪ್ರಯತ್ನಗಳು ನಡೆದಿದ್ದವು. ದಾಬೋಲಕರ್ ಪ್ರಕರಣದಲ್ಲಿ ಕಲ್ವಾದ (ಮುಂಬಯಿ) ಹಿನ್ನೀರಿನಲ್ಲಿ ಎಸೆದಿರುವ ಪಿಸ್ತೂಲನ್ನು ೫ ವರ್ಷಗಳ ನಂತರ ಹುಡುಕುವುದು, ಅದನ್ನು ಸ್ಕಾಟ್‌ಲೇಂಡ್‌ಗೆ ಕಳುಹಿಸುವೆವು ಎಂದು ಸುಳ್ಳು ಹೇಳುವುದು, ೬ ತಿಂಗಳ ನಂತರ ಅದನ್ನು ಕಳುಹಿಸಲೆ ಇಲ್ಲ ಎಂದು ಹೇಳುವುದು, ಪದೇ ಪದೇ ಸುಳ್ಳು ಸಾಕ್ಷಿದಾರರನ್ನು ಮುಂದೆ ತರುವುದು; ದಾಭೋಲಕರ್ ಮತ್ತು ಪಾನ್ಸರೆ ಕುಟುಂಬದವರ ಒತ್ತಡದಿಂದಾಗಿ ೫ ವರ್ಷ ಖಟ್ಲೆಯನ್ನು ನಡೆಸಲು ಬಿಡದಿರುವುದು, ಕೇಂದ್ರೀಯ ತನಿಖಾ ದಳ ತಾನೇ ಮಾಡಿದ ಅನೇಕ ದಾವೆಗಳನ್ನು ನಂತರ ಅಳಿಸಿ ತಾನೇ ಹಿಡಿದಿರುವ ಆರೋಪಿಗಳನ್ನು ಬಿಟ್ಟುಬಿಡುವುದು, ತನಿಖಾ ಸಂಸ್ಥೆಗಳೂ ಮತ್ತು ಸಾಕ್ಷಿದಾರರು ಬೇರೆ ಬೇರೆ ವ್ಯಕ್ತಿಗಳನ್ನು ಹಂತಕರೆಂದು ಆರೋಪಿಸುವುದು, ಹಂತಕರು ಮತ್ತು ಶಸ್ತ್ರಗಳು ಬದಲಾಗುತ್ತಿರುವುದು; ದಾಭೋಲಕರ್ ಇವರ ಮೇಲಿನ ವಿವಿಧ ಆರೋಪಗಳಿಗೆ ಸಂಬಂಧಿಸಿ ಯಾವುದೇ ದಿಕ್ಕಿನಿಂದ ತನಿಖೆ ಮುಂದುವರಿಸದಿರುವುದು, ಸಿ.ಬಿ.ಐ. ಪ್ರತ್ಯಕ್ಷ ಯಾವುದೇ ಸಾಕ್ಷಿಯನ್ನು ಮುಂದೆ ತರದಿರುವುದು, ಇಂತಹ ದೊಡ್ಡದಾದ ಒಂದು ಗ್ರಂಥ ಆಗುವಷ್ಟು ಸುಳ್ಳುಗಳ ಕಂತೆಯನ್ನು ತೋರಿಸುವ ಅನೇಕ ಅಂಶಗಳು ಮುಂದೆ ಬಂದವು. ಸಮಾಜದಲ್ಲಿನ ವಿವಿಧ ಕ್ಷೇತ್ರ ಗಳಲ್ಲಿನ ತಜ್ಞರಿಗೂ ಅದು ಅರಿವಾಯಿತು ಹಾಗೂ ಅವರು ತಾವೇ ಮುಂದಾಳತ್ವ ವಹಿಸಿ ಅದನ್ನು ಮಂಡಿಸಿದರು. ತನಿಖಾ ದಳ ಸನಾತನದ ಸಾಧಕರ ಮೇಲೆ ಮಾತ್ರವಲ್ಲ, ಹಿಂದೂಗಳಿಗೂ ಘೋರ ಅನ್ಯಾಯ ಮಾಡಿ ದೊಡ್ಡ ಪಾಪಕರ್ಮ ಮಾಡಿದೆ.
ನಿಜವಾದ ಆರೋಪಿ ಯಾರು ?
‘ಅಂ.ನಿ.ಸ.’ದ ನ್ಯಾಸದ ಹಗರಣವನ್ನು ಹೊರಗೆ ತರಲಾಗಿತ್ತು, ಆ ನ್ಯಾಸದಲ್ಲಿನ ಪದಾಧಿಕಾರಿಗಳ ಪೈಕಿ ಪವಾರ ಕುಟುಂಬದ ಸದಸ್ಯ ಪ್ರತಾಪ ಪವಾರ ಒಬ್ಬರಾಗಿದ್ದರು. ಅವರ ಸಂಬಂಧಿಕರಾಗಿರುವ ಸಂಸದೆ ಸುಪ್ರಿಯಾ ಸುಳೆ ಇವರು ೨೦೧೬ ರಲ್ಲಿ ಸನಾತನ ಸಂಸ್ಥೆಯನ್ನು ನಿಷೇಧಿಸುವ ವಿಷಯವನ್ನು ರಾಜ್ಯಸಭೆಯ ಭಾಷಣದಲ್ಲಿ ಹೇಳಿದ್ದರು. ಇವೆಲ್ಲ ವಿಷಯಗಳು ಸನಾತನ ಸಂಸ್ಥೆಯ ವಿಷಯಕ್ಕೆ ಸಂಬಂಧಿಸಿದ್ದವು. ೨೦೧೫ ರಲ್ಲಿ ಸನಾತನ ಸಂಸ್ಥೆಯ ಅಂದಿನ ವಕ್ತಾರ ‘ಅಭಯ ವರ್ತಕರಿಗೆ ಗುಂಡು ಹೊಡೆಯಿರಿ’, ಎನ್ನುವ ಕರಪತ್ರಗಳನ್ನು ಭಾರತ ಪಾಟಣಕರ್ ಇವರು ಹಂಚಿದ್ದರು. ಇದು ನೇರವಾದ ಭಯೋತ್ಪಾದನೆ ಆಗಿರಲಿಲ್ಲವೆ ? ‘ಅಂನಿಸ’ದ ಒಬ್ಬ ಕಾರ್ಯಕರ್ತ ನಕ್ಸಲವಾದಿ ಆಗಿದ್ದನು, ಅವನ ಬಗ್ಗೆ ದಾಭೋಲಕರರು ಸ್ಪಷ್ಟೀಕರಣ ನೀಡಿದ್ದರು. ಈ ಪ್ರಕರಣ ನಡೆಯುತ್ತಿರುವಾಗ ಮಹಾಭಾರತದಲ್ಲಿ ಶ್ರೀಕೃಷ್ಣ ಹೇಳಿರುವ ವಚನವನ್ನು ಆಧರಿಸಿ ಸನಾತನದ ‘ಕ್ಷಾತ್ರಧರ್ಮ’ ಈ ಗ್ರಂಥದ ಮೇಲೆ ಹಾಸ್ಯಾಸ್ಪದ ಆಕ್ಷೇಪ ತೆಗೆದುಕೊಳ್ಳಲಾಯಿತು. ಇದೆಷ್ಟು ಘೋರ ವಿರೋಧಾಭಾಸವಾಗಿತ್ತು !
‘ಅಂನಿಸ’ದ ಒಟ್ಟು ೯ ಆರ್ಥಿಕ ಹಗರಣಗಳನ್ನು ಹೊರಗೆ ತರಲಾಗಿತ್ತು, ಕೊನೆಗೆ ದಾಭೋಲಕರರ ಜೇಬಿನಲ್ಲಿ ರಷ್ಯಾದ ಸಿಮ್‌ಕಾರ್ಡ್ ಸಿಕ್ಕಿತು, ಇದರತ್ತ ತನಿಖಾ ದಳ ಯಾವಾಗ ಅವಲೋಕಿಸುವುದು ?
ಸನಾತನದ ಧರ್ಮಯೋಧ ಸಾಧಕರು !
ಧರ್ಮಯುದ್ಧದಲ್ಲಿ ಅಂತಿಮ ವಿಜಯದ ಮೊದಲು ಪ್ರತಿಯೊಬ್ಬ ಧರ್ಮಯೋಧನೂ ಸಂಘರ್ಷ ಮಾಡಲೇ ಬೇಕಾಗುತ್ತದೆ. ಈ ವಿಜಯವೆಂದರೆ ಅದರ ಒಂದು ಹಂತವಾಗಿದೆ. ಸನಾತನದ ಈ ಕಷ್ಟಕಾಲದಲ್ಲಿ ಈಶ್ವರನಿಷ್ಠೆ ಮತ್ತು ನಮ್ರತೆಯಿಂದ ಸಾಧಕರು ಎಲ್ಲಿಯೂ ಅವರ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ, ಎಲ್ಲಿಯೂ ಅವರ ನಿಷ್ಠೆಯೂ ಕಡಿಮೆಯಾಗಲಿಲ್ಲ. ಇಷ್ಟರ ವರೆಗೆ ಸನಾತನದ ನೂರಾರು ಆಂದೋಲನಗಳು, ಪ್ರಸಾರ ಮೆರವಣಿಗೆಗಳು ಇತ್ಯಾದಿ ಗಳಾಗಿವೆ. ಇವುಗಳಲ್ಲಿ ಎಲ್ಲಿಯೂ ಆಕ್ರಮಣಕಾರಿಯಾಗಲಿಲ್ಲ, ಎಲ್ಲಿಯೂ ಘರ್ಷಣೆಯಾಗಿಲ್ಲ, ತದ್ವಿರುದ್ಧ ಸನಾತನ ಸಂಸ್ಥೆಯು ಪೊಲೀಸ್ ವ್ಯವಸ್ಥೆಯಲ್ಲಿ ದೊಡ್ಡ ವಿಶ್ವಾಸವನ್ನು ಸಂಪಾದಿಸಿದೆ. ಪೊಲೀಸರು ಸನಾತನದ ನೂರಾರು ಸಾಧಕರ ವಿಚಾರಣೆಯನ್ನೂ ಮಾಡಿದರು; ಆದರೆ ಒಬ್ಬ ಪೊಲೀಸಾದರೂ ಸನಾತನದ ಸಾಧಕರು ಮಾತನಾಡುವಾಗ ಮೇರೆ ಮೀರಿದರು, ಎಂದು ಹೇಳಬಹುದೇ ?
ನೂರಾರು ಪೊಲೀಸರು ಸನಾತನದ ಸಾಧಕರನ್ನು ಸಮೀಪದಿಂದ ನೋಡಿದ್ದಾರೆ; ಅವರಿಗೆ ಇವರು ಗೂಂಡಾ ಅಥವಾ ಭಯೋತ್ಪಾದಕ ರೆಂದು ಅನಿಸಿರಬಹುದೇ ? ‘ಅದರೂ ಸನಾತನ ಭಯೋತ್ಪಾದಕ ಸಂಘಟನೆ ಆಗಿರುವುದರಿಂದ ಅದಕ್ಕೆ ನಿರ್ಬಂಧ ಹೇರಬೇಕು’, ಎನ್ನುವ ರಾಜಕೀಯ ಮುಖಂಡರ, ಪ್ರಗತಿಪರರ ಮತ್ತು ಮಾಧ್ಯಮಗಳು ಹರಡಿಸಿದ ಸುಳ್ಳು ಕಥೆಗಳ ಅಥವಾ ‘ಮಿಡಿಯಾ ಟ್ರಾಯಲ್’ಗಳ ವಿಷಯದಲ್ಲಿ ಅವರು ಏನೂ ಹೇಳದೆ, ಅವರು ಒತ್ತಡದಲ್ಲಿ ಸಿಲುಕಿದರು. ಆದರೆ ಸನಾತನದ ಸಾಧಕರ ಯಾವುದೇ ವೈಯಕ್ತಿಕ ಹೋರಾಟವಿರಲಿಲ್ಲ, ಅದು ವ್ಯಾಪಕವಾಗಿರುವ ಧರ್ಮಕ್ಕಾಗಿ ನೀಡಿರುವ ಹೋರಾಟವಾಗಿತ್ತು. ಕೇಸರಿ ಭಯೋತ್ಪಾದನೆಯನ್ನು ಸಿದ್ಧಪಡಿಸುವ ರಾಷ್ಟ್ರದ ಶತ್ರು ಹಾಗೂ ರಾಜಕಾರಣಿಗಳ ದ್ವೇಷಯುಕ್ತ ನಿಲುವನ್ನು ಹಮ್ಮಿಕೊಳ್ಳಲು ಸನಾತನ ಸಂಸ್ಥೆಯನ್ನು ಗುರಿಪಡಿಸಲಾಯಿತು; ಆದರೆ ವ್ಯಾಪಕ ಧರ್ಮಕಾರ್ಯ ಹಾಗೂ ನಕ್ಸಲರ ವಿರುದ್ಧದ ವ್ಯಾಪಕ ರಾಷ್ಟ್ರ ಕಾರ್ಯದಿಂದ ಸಾಧಕರು ಈ ದೊಡ್ಡ ಅವಧಿಯಲ್ಲಿನ ಸಂಘರ್ಷವನ್ನು ಈಶ್ವರನ ಮೇಲೆ ಶ್ರದ್ಧೆಯಿಟ್ಟು ಎದುರಿಸಿದರು ಹಾಗೂ ಈಶ್ವರ ಅವರಿಗೆ ಶ್ರದ್ಧೆ ಮತ್ತು ಸಹನೆಯ ಫಲವನ್ನು ನೀಡಿದನು.