ತಿರುವನಂತಪುರಂ (ಕೇರಳ) – ಕಾನೂನು ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ನಡೆಸಿ ಆಕೆಯ ಹತ್ಯೆ ಮಾಡಿರುವ ಪ್ರಕರಣದಲ್ಲಿ ಕೇರಳ ಉಚ್ಚ ನ್ಯಾಯಾಲಯವು ಅಮೀರ್ ಉಲ್ ಇಸ್ಲಾಂ ಎಂಬವನಿಗೆ ಗಲ್ಲು ಶಿಕ್ಷೆ ವಿಧಿಸಿದೆ.
೨ ಏಪ್ರಿಲ್ ೨೦೧೬ ರಂದು ಎರ್ನಾಕುಲಂ ಗವರ್ಮೆಂಟ್ ಲಾ ಕಾಲೇಜ್ ನ ವಿದ್ಯಾರ್ಥಿನಿಯ ಮೃತ ದೇಹವು ಪೇರಂಬವೂರಿನ ಆಕೆಯ ಮನೆಯಲ್ಲಿ ಪತ್ತೆಯಾಗಿತ್ತು. ಈ ಘಟನೆಯ ನಂತರ ಆಕ್ರೋಶಿತ ಜನರು ಬೃಹತ್ ಪ್ರತಿಭಟನೆ ನಡೆಸಿದರು. ಸಂತ್ರಸ್ತೆಯು ದಲಿತ ವಿದ್ಯಾರ್ಥಿನಿ ಆಗಿರುವುದರಿಂದ ಜನರು ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಅಸ್ಸಾಮಿನ ಕಾರ್ಮಿಕನಾದ ಅಮೀರ್ ಉಲ್ ಇಸ್ಲಾಂ ಎಂಬವನನ್ನು ಬಂಧಿಸಲಾಗಿತ್ತು. ಇಸ್ಲಾಂ ಮದ್ಯದ ಅಮಲಿನಲ್ಲಿ ವಿದ್ಯಾರ್ಥಿನಿಯ ಮನೆಗೆ ನುಗ್ಗಿ ಆಕೆಯ ಮೇಲೆ ಬಲಾತ್ಕಾರ ಮಾಡಿ ನಂತರ ಆಕೆಯನ್ನು ಹತ್ಯೆ ಮಾಡಿದ್ದನು.
ಇಸ್ಲಾಂ ನಿಗೆ ೨೦೧೭ ರಲ್ಲಿ ಎರ್ನಾಕುಲಂ ಸೆಷನ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಈ ನಿರ್ಣಯದ ವಿರುದ್ಧ ಅವನು ಕೇರಳ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದನು. ಉಚ್ಚ ನ್ಯಾಯಾಲಯವು ಸೆಷನ್ ನ್ಯಾಯಾಲಯದ ತೀರ್ಪನ್ನು ಕಾಯಂಗೊಳಿಸಿತು.
#KeralaHighCourt upholds death sentence given by a sessions court to Muhammad Ameerul Islam for rape and murder of law student in #Kerala
The public believes that the President should not reduce such sentences out of mercy and that the execution should be carried out promptly.… pic.twitter.com/9r4i76LqU3
— Sanatan Prabhat (@SanatanPrabhat) May 21, 2024
ಸಂಪಾದಕೀಯ ನಿಲುವು
|