ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಉಲ್ಲೇಖಿಸಿರುವ ಬಗ್ಗೆ ಅಮೇರಿಕಾ ಹಿಂದೂಗಳ ಆಕ್ರೋಶ
ನ್ಯೂಯಾರ್ಕ್ (ಅಮೆರಿಕಾ) – ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಉಲ್ಲೇಖಿಸಿದೆ. ಇದಕ್ಕೆ ಅಮೇರಿಕಾದಲ್ಲಿರುವ ಪ್ರತಿಷ್ಠಿತ ‘ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡಯಾಸ್ಪೊರಾ ಸ್ಟಡೀಸ್’ ಈ ತಜ್ಞರ ಸಂಸ್ಥೆಯು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಸಂಸ್ಥೆಯ ನಿಲುವು ಮತ್ತು ರಣನೀತಿ ವಿಭಾಗದ ಅಧ್ಯಕ್ಷರಾದ ಶ್ರೀ. ಖಂಡೇರಾವ್ ಕಾಂಡ ಇವರು ಮಾತನಾಡಿ, ` ಈ ವರದಿಯು ತಪ್ಪು ಸತ್ಯಗಳ ಆಧಾರದ ಮೇಲೆ ಮತ್ತು ಪಕ್ಷಪಾತದ ರೀತಿಯಲ್ಲಿ ಸಿದ್ಧ ಪಡಿಸಲಾಗಿದೆ. ‘ಹಿಂದೂ’ ಜಗತ್ತಿನ ಮೂರನೇ ಅತಿ ದೊಡ್ಡ ಧರ್ಮವಾಗಿದ್ದರೂ ಅದರ ಒಬ್ಬನೇ ಒಬ್ಬ ಪ್ರತಿನಿಧಿಯು ಈ ಆಯೋಗದಲ್ಲಿ ಇಲ್ಲ. ಇದು ಅತ್ಯಂತ ಅಯೋಗ್ಯವಾಗಿದೆ” ಅಮೇರಿಕಾದ ಈ ಆಯೋಗವು ಮೇ17ರಂದು ತನ್ನ ಮೂವರು ಹೊಸ ಸದಸ್ಯರ ನೇಮಕವನ್ನು ಘೋಷಿಸಿದೆ. ಅದರಲ್ಲಿ 2 ಕ್ರಿಶ್ಚಿಯನ್ನರು ಮತ್ತು 1 ಮುಸ್ಲಿಂ ಇದ್ದಾರೆ. 2 ಕ್ರಿಶ್ಚಿಯನ್ನರು ಮರು ನೇಮಕಗೊಂಡಿದ್ದಾರೆ. ಆಯೋಗದ ಮಾಜಿ ಆಯುಕ್ತರಾದ ಅಬ್ರಹಾಂ ಕೂಪರ್, ಡೇವಿಡ್ ಕರಿ, ಫ್ರೆಡೆರಿಕ್ ಡೇವಿ, ಮೊಹಮ್ಮದ್ ಮ್ಯಾಗಿಡ್, ನೂರಿ ಟರ್ಕೆಲ್ ಮತ್ತು ಫ್ರಾಂಕ್ ವೋಲ್ಫ್ ಅವರ ಅಧಿಕಾರಾವಧಿಯು ಮೇ14 ರಂದು ಕೊನೆಗೊಂಡಿತು.
ಭಾರತದಲ್ಲಿ ಚುನಾವಣೆಗಳು ನಡೆಯುತ್ತಿರುವಾಗ, ಈ ವರದಿ ಪ್ರಸಾರ ಮಾಡಿರುವುದು ಊಹೆಗೂ ನಿಲುಕದ್ದು- ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡಯಾಸ್ಪೊರಾ ಸ್ಟಡೀಸ್’
ಈ ವಿಷಯದಲ್ಲಿ ಖಂಡೇರಾವ್ ಕಾಂಡ ಅವರು ಹೀಗೆ ಹೇಳಿದರು.
1. ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವಾರ್ಷಿಕ ವರದಿಯು ಪಕ್ಷಪಾತಿಯಾಗಿದೆ. ವರದಿಯಲ್ಲಿ ಸಂಪೂರ್ಣ ಸತ್ಯವನ್ನು ಮಂಡಿಸಲಾಗಿಲ್ಲ. ಹಲವು ಸಂಗತಿಗಳನ್ನು ಮುಚ್ಚಿಡಲಾಗಿದೆ. ಇದು ಭಾರತ ವಿರೋಧಿ ವರದಿಯಾಗಿದೆ.
2. ವರದಿಯಲ್ಲಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಉಲ್ಲೇಖಿಸಲಾಗಿದೆ. ಭಾರತದಲ್ಲಿ ಅತಿ ದೊಡ್ಡ ಪ್ರಜಾಸತ್ತಾತ್ಮಕ ಪ್ರಕ್ರಿಯೆ (ಚುನಾವಣೆ) ನಡೆಯುತ್ತಿರುವಾಗ ಭಾರತದ ಸಂದರ್ಭದಲ್ಲಿ ಇಂತಹ ಶಿಫಾರಸ್ಸು ಮಾಡುವುದು ಊಹೆಗೂ ನಿಲುಕದ್ದು.
4. ವರದಿಗಳು ಒಂದು ನಿರ್ದಿಷ್ಟ ಧಾರ್ಮಿಕ ಸಿದ್ಧಾಂತದ ಅಂಶದ ಮೇಲೆ ಕೇಂದ್ರೀಕೃತವಾಗಿವೆ.
5. ಭಾರತದಲ್ಲಿ ಹಿಂದೂ-ಮುಸ್ಲಿಂ ಗಲಭೆಗಳ ಇತಿಹಾಸವಿದೆ; ಆದರೆ ಕಳೆದ ವರ್ಷ ಭಾರತದಲ್ಲಿ ಒಂದೇ ಒಂದು ಗಲಭೆ ನಡೆದಿರಲಿಲ್ಲ. ಈ ವರದಿಯಲ್ಲಿ ಮಾತ್ರ ಇದನ್ನು ದಾಖಲಿಸಿಲ್ಲ.
American Hindus anguished over designation of India as a country of ‘particular concern’ by the #USCIRF
🛑 Report of the US Commission on International Religious Freedom (USCIRF) is biased against India
• The reports of such American commissions on India only deserve to be… pic.twitter.com/SUX07g09G3
— Sanatan Prabhat (@SanatanPrabhat) May 19, 2024
17 ದೇಶಗಳ ಮೇಲೆ ‘ವಿಶೇಷ ಕಾಳಜಿಯ ದೇಶಗಳು’ ಎಂಬ ಮೊಹರು!
ಅಮೇರಿಕಾದ `ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ’ ಮೇ ಪ್ರಾರಂಭದಲ್ಲಿ ತನ್ನ ವಾರ್ಷಿಕ ವರದಿಯಲ್ಲಿ 17 ದೇಶಗಳನ್ನು ‘ವಿಶೇಷ ಕಾಳಜಿಯ ದೇಶಗಳು’ ಎಂದು ಘೋಷಿಸಿದೆ. ಈ ದೇಶಗಳ ಮೇಲೆ ಮಾನವಾಧಿಕಾರ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿರುವ ಆರೋಪವಿತ್ತು. ಈ ಪಟ್ಟಿಯಲ್ಲಿ ಮ್ಯಾನ್ಮಾರ್, ಚೀನಾ, ಕ್ಯೂಬಾ, ಎರಿಟ್ರಿಯಾ, ಇರಾನ್, ನಿಕರಾಗುವಾ, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಸೌದಿ ಅರೇಬಿಯಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್, ಹಾಗೆಯೇ ಅಫ್ಘಾನಿಸ್ತಾನ್, ಅಜೆರ್ಬೈಜಾನ್, ಭಾರತ, ನೈಜೀರಿಯಾ ಮತ್ತು ವಿಯೆಟ್ನಾಂ ದೇಶಗಳು ಸೇರಿವೆ.
ಸಂಪಾದಕೀಯ ನಿಲುವು
|