ಪರಾತ್ಪರ ಗುರು ಡಾ. ಆಠವಲೆಯವರು ದೂರವಾಣಿಯಲ್ಲಿ ಮಾತಾಡುವಾಗ ವಿವಿಧ ಉದಾಹರಣೆ ಮತ್ತು ಪ್ರಸಂಗಗಳನ್ನು ಹೇಳಿ ಅವುಗಳಿಂದ ಕಲಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೨೫/೩೩ ನೇ ಸಂಚಿಕೆಯ ಲೇಖನದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಂಗದಿಂದ ‘ಅಹಂಭಾವದಿಂದ ಮಾಡಿದ ಒಳ್ಳೆಯ ಕೃತಿಯೂ ಭಗವಂತನಿಗೆ ಇಷ್ಟವಾಗುವುದಿಲ್ಲ’, ಎಂದು ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಬಿಂಬಿತವಾಗುವುದು’, ಈ ಬಗ್ಗೆ ಓದಿದೆವು. ಈ ವಾರದ ಲೇಖನದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರ ಪ್ರತಿಯೊಂದು ಕೃತಿಯಿಂದ ಅಥವಾ ಅವರ ಸಾಮಾನ್ಯ ಮಾತುಗಳಿಂದಲೂ ಬಹಳ ಕಲಿಯಲು ಸಿಗುತ್ತದೆ. ನನ್ನ ಕ್ಷಮತೆ ಕಡಿಮೆ ಇದ್ದುದರಿಂದ ನನಗೆ ಅದನ್ನು ಪೂರ್ತಿ ಕಲಿಯಲು ಸಾಧ್ಯವಾಗದಿದ್ದರೂ, ಸ್ವಲ್ಪ ಮಟ್ಟಿಗೆ ಏನು ಕಲಿತಿದ್ದೇನೆಯೋ ಅದನ್ನು ಅವರ ಕೃಪೆಯಿಂದಲೇ ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೇನೆ.

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/112843.html

 

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ಪರಾತ್ಪರ ಗುರು ಡಾ. ಆಠವಲೆಯವರು ಭಾರತದಲ್ಲಿ, ಸನಾತನ ಸಂಸ್ಥೆಯ ಪ್ರಚಾರಕ್ಕೆ ಸಮಾಜ, ಸಂತರಿಂದ ಸಿಗುವ ಉತ್ತಮ ಪ್ರತಿಕ್ರಿಯೆ ಬಗ್ಗೆ ಹೇಳಿ ಪ್ರೋತ್ಸಾಹಿಸುವುದು

ನಾನು ಮೊದಲು ನನ್ನ ಸಾಧನೆಯಲ್ಲಿನ ಕೆಲವು ಪ್ರಶ್ನೆಗಳು ಮತ್ತು ಸಂದೇಹಗಳನ್ನು ಕೇಳಲು ಪರಾತ್ಪರ ಗುರುದೇವರಿಗೆ ದೂರವಾಣಿ ಕರೆ ಮಾಡುತ್ತಿದ್ದೆ. ನನ್ನ ಮಾತುಗಳು ಮುಗಿದ ನಂತರ ಅವರು ನನಗೆ ‘ಮಹಾರಾಷ್ಟ್ರದ ಇತರ ಜಿಲ್ಲೆಗಳು ಮತ್ತು ಭಾರತದ ಇತರ ರಾಜ್ಯಗಳಲ್ಲಿ ಸನಾತನ ಸಂಸ್ಥೆಯ ಕಾರ್ಯಕ್ಕೆ ಸಮಾಜ ಮತ್ತು ಸಂತರಿಂದ ಹೇಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ? ಎಂಬ ಬಗ್ಗೆ ಹೇಳುತ್ತಿದ್ದರು. ನಂತರ ಮುಂದೆ ಅವರು, ”ಭಗವಂತ ನಮಗೆ ಎಷ್ಟು ಸಹಾಯ ಮಾಡುತ್ತಿದ್ದಾನಲ್ಲಾ !’’, ಎನ್ನುತ್ತಿದ್ದರು.

೨. ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರಿಂದಾದ ಲಾಭ !

೨ ಅ. ಪ್ರಚಾರದ ಹೊಸ ಸಂಕಲ್ಪನೆಗಳು ತಿಳಿದು ಸೇವೆಯ ಉತ್ಸಾಹ ಹೆಚ್ಚಾಗುವುದು : ಸಾಧಕರು ಇತರ ಸ್ಥಳಗಳಲ್ಲಿ ಮಾಡುತ್ತಿರುವ ಪ್ರಚಾರದ ಹೊಸ ಸಂಕಲ್ಪನೆಗಳು ಕಲಿಯಲು ಸಿಗುತ್ತಿದ್ದವು. ನನಗೆ ಸೇವೆಯನ್ನು ಮಾಡಲು ಬಹಳ ಉತ್ಸಾಹ ಬರುತ್ತಿತ್ತು.

೨ ಆ. ಎಲ್ಲೆಡೆಯ ಸಾಧಕರು ಮಾಡುತ್ತಿರುವ ಪ್ರಯತ್ನ ತಿಳಿದುದರಿಂದ ಸಾಧಕರ ಬಗ್ಗೆ ಗೌರವ ಹೆಚ್ಚಾಗಿ ವ್ಯಾಪಕತೆ ಹೆಚ್ಚಾಗುವುದು : ‘ಎಲ್ಲೆಡೆಯ ಸಾಧಕರು ಹೇಗೆ ಪ್ರಯತ್ನಿಸುತ್ತಿದ್ದಾರೆ ?’, ಎಂಬುದು ತಿಳಿಯತೊಡಗಿತು. ಆದುದರಿಂದ ಆ ಸಾಧಕರ ಬಗ್ಗೆ ನನ್ನಲ್ಲಿ ಗೌರವ ಮತ್ತು ಪ್ರೀತಿ ಮೂಡಿ ವ್ಯಾಪಕತೆ ಬಂದಿತು.

೨ ಇ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದನ್ನು ನೋಡಿ ನನಗೆ ‘ಸಾಧಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು’, ಎಂಬುದು ಕಲಿಯಲು ಸಿಕ್ಕಿತು : ‘ಪರಾತ್ಪರ ಗುರುದೇವರಿಗೆ ಸಾಧಕರು ಮಾಡುವ ಪ್ರತಿಯೊಂದು ವಿಷಯದ ಬಗ್ಗೆ ತುಂಬಾ ಒಳ್ಳೆಯದೆನಿಸುತ್ತಿತ್ತು ಮತ್ತು ಅವರು ಅದನ್ನು ಇತರರಿಗೆ ಹೇಳುತ್ತಿದ್ದರು’, ಇದನ್ನು ನೋಡಿ ‘ನಾನೂ ಸಹಸಾಧಕರ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಬೇಕು’, ಎಂದು ನನ್ನ ಗಮನಕ್ಕೆ ಬಂದಿತು.

೨ ಈ. ಕರ್ತೃತ್ವವನ್ನು ಈಶ್ವರನಿಗೆ ಅರ್ಪಿಸಲು ಕಲಿಯುವುದು : ಪ್ರತಿ ಬಾರಿ ಅವರ ‘ಭಗವಂತನು ನಮಗೆ ಎಷ್ಟು ಸಹಾಯ ಮಾಡುತ್ತಿದ್ದಾನಲ್ಲ !’, ಈ ವಾಕ್ಯವನ್ನು ಕೇಳಿ ‘ಪ್ರತಿಯೊಂದು ಕೃತಿಯ ಕರ್ತೃತ್ವವನ್ನು ಈಶ್ವರನಿಗೆ ಅರ್ಪಿಸಬೇಕು’, ಎಂಬುದು ನನ್ನ ಮನಸ್ಸಿನ ಮೇಲೆ ಅಂಕಿತವಾಯಿತು.

೩. ಕಲಿಯಲು ಸಿಕ್ಕಿದ ಅಂಶಗಳು

೩ ಅ. ‘ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಭಾವ, ಶ್ರದ್ಧೆ ಮತ್ತು ತಳಮಳ ಹೇಗಿರಬೇಕು ?’, ಎಂಬುದು ಕಲಿಯಲು ಸಾಧ್ಯವಾಗುವುದು

೩ ಅ ೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಲ್ಲಿನ ಭಾವ ! : ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಸೌ. ಬಿಂದಾ ಸಿಂಗಬಾಳ (ಈಗಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ) ಇವರು ಭಾವದ ಸ್ತರದಲ್ಲಿ ಸತ್ಸಂಗವನ್ನು ತೆಗೆದುಕೊಳ್ಳುತ್ತಾರೆ. ಅವರ ಗಮನ ಸದಾ ಕೃಷ್ಣನ ಕಡೆಗಿದ್ದರೂ ಕೃಷ್ಣನ ಕೃಪೆಯಿಂದ ಅವರು ಸತ್ಸಂಗದಲ್ಲಿ ಸಾಧಕರು ಹೇಳುತ್ತಿರುವ ಎಲ್ಲ ಅಂಶಗಳನ್ನು ಹೇಗೆ ಗ್ರಹಿಸುತ್ತಾರೆ ? ಮತ್ತು ಆ ಸಾಧಕರಿಗೆ ಒಳ್ಳೆಯ ದೃಷ್ಟಿಕೋನ ಹೇಗೆ ಕೊಡುತ್ತಾರೆ ?’, ಈ ಬಗ್ಗೆ ಗುರುದೇವರು ಹೇಳುತ್ತಿದ್ದರು.

೩ ಅ ೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಶ್ರದ್ಧೆ ! : ಸೌ. ಅಂಜಲಿಅಕ್ಕ (ಈಗಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಇವರಿಗೆ ಜ್ಞಾನ ಹೇಗೆ ಪ್ರಾಪ್ತವಾಗುತ್ತದೆ ? ಅವರ ಜ್ಞಾನದ ಮಟ್ಟ ಎಷ್ಟು ಅತ್ಯುಚ್ಚದ್ದಾಗಿದೆ ! ಆಧ್ಯಾತ್ಮಿಕ ತೊಂದರೆ ಆಗುತ್ತಿದ್ದರೂ ಅವರು ಸಮಷ್ಟಿಗಾಗಿ ಜ್ಞಾನವನ್ನು ಪಡೆಯುವ ಸೇವೆಯನ್ನು ಹೇಗೆ ಮಾಡುತ್ತಿದ್ದಾರೆ’, ಈ ಬಗ್ಗೆ ಗುರುದೇವರು ನನಗೆ ಹೇಳುತ್ತಿದ್ದರು ಮತ್ತು ಕೆಲವೊಮ್ಮೆ ಆ ಜ್ಞಾನದಲ್ಲಿನ ಅಮೂಲ್ಯ ಜ್ಞಾನದ ಬಗ್ಗೆಯೂ ಹೇಳುತ್ತಿದ್ದರು. ಇದನ್ನು ಕೇಳಿ ಆನಂದವಾಗುತ್ತಿತ್ತು.

೩ ಅ ೩. ಸದ್ಗುರು ಸ್ವಾತಿ ಖಾಡ್ಯೆ ಇವರಲ್ಲಿನ ಸೇವೆಯ ತಳಮಳ ! : ಕೆಲವೊಮ್ಮೆ ಗುರುದೇವರು ನನಗೆ ಸ್ವಾತಿಅಕ್ಕನವರ (ಈಗಿನ ಸದ್ಗುರು ಸ್ವಾತಿ ಖಾಡ್ಯೆ) ಬಗ್ಗೆ ಹೇಳುತ್ತಿದ್ದರು. ‘ಸ್ವಾತಿಅಕ್ಕನವರು ಗೋವಾದ ರಾಮನಾಥಿಯಲ್ಲಿನ ಆಶ್ರಮದಲ್ಲಿ ಅಡುಗೆಮನೆಗೆ ಸಂಬಂಧಿಸಿದ ಸೇವೆಯನ್ನು ಮಾಡುತ್ತಿದ್ದರು ಮತ್ತು ಅವರಿಗೆ ಪ್ರಚಾರದ ಬಗ್ಗೆ ಯಾವುದೇ ಅನುಭವವಿರಲಿಲ್ಲ. ಅವರ ಶಿಕ್ಷಣ ಬಹಳ ಕಡಿಮೆ ಇದ್ದರೂ, ಅವರು ಸಿಂಧುದುರ್ಗ ಜಿಲ್ಲೆಯಲ್ಲಿ ಒಳ್ಳೆಯ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರು ಸಾಧಕರಿಗೆ ಒಳ್ಳೆಯ ರೀತಿಯಲ್ಲಿ ಪ್ರೋತ್ಸಾಹ ನೀಡಿ ಗುರುಪೂರ್ಣಿಮೆಯ ಸಮಯದಲ್ಲಿ  ಬಹಳ ಪ್ರಶಂಸೆ ಮಾಡುತ್ತಿದ್ದರು.

೩ ಆ. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಉದಾಹರಣೆಗಳನ್ನು ಕೇಳಿ ತಳಮಳ ಹೆಚ್ಚಾಗುವುದು : ಪರಾತ್ಪರ ಗುರುದೇವರು ‘ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಭಾವದ ಸ್ತರದಲ್ಲಿ ಎಷ್ಟು ಒಳ್ಳೆಯ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ’, ಎಂದು ಹೇಳುವಾಗ ಕೆಲವೊಮ್ಮೆ ಸುಶ್ರೀ ಪೂನಮ್‌ ಸಾಳುಂಕೆ (ಈಗ ಆಧ್ಯಾತ್ಮಿಕ ಮಟ್ಟ ಶೇ. ೬೧) ಮತ್ತು ಇತರ ಸಾಧಕರ ಉದಾಹರಣೆ ಕೊಡುತ್ತಿದ್ದರು.

೩ ಇ. ಪರಾತ್ಪರ ಗುರು ಡಾ. ಆಠವಲೆಯವರು ಹೇಳುತ್ತಿರುವ ಸಾಧಕರಿಂದಾದ ತಪ್ಪುಗಳು ಮತ್ತು ಅದರಿಂದ ಸಾಧಕರ ಸಾಧನೆಯಲ್ಲಾಗುವ ಹಾನಿಯನ್ನು ಕೇಳಿ ತಪ್ಪುಗಳ ಬಗ್ಗೆ ಗಾಂಭೀರ್ಯ ಹೆಚ್ಚಾಗುವುದು : ಕೆಲವೊಮ್ಮೆ ಗುರುದೇವರು ‘ಪ್ರಸಾರದ ಮತ್ತು ಆಶ್ರಮದ ಸಾಧಕರಿಂದಾಗುವ ಗಂಭೀರ ತಪ್ಪುಗಳು ಮತ್ತು ಸಾಧಕರಲ್ಲಿರುವ ಅಯೋಗ್ಯ ದೃಷ್ಟಿಕೋನವನ್ನು ಹೇಳಿ ಅವರ ಸಾಧನೆಯಲ್ಲಿ ಹೇಗೆ ಹಾನಿಯಾಗುತ್ತಿದೆ’, ಈ ಬಗ್ಗೆ ಹೇಳುತ್ತಿದ್ದರು. ಆದುದರಿಂದ ನನ್ನ ತಪ್ಪುಗಳ ಕಡೆಗೆ ನೋಡುವ ದೃಷ್ಟಿಕೋನವು ಬದಲಾಗಿ ತಪ್ಪುಗಳ ಬಗ್ಗೆ ಜಾಗರೂಕತೆ ಮತ್ತು ಗಾಂಭೀರ್ಯ ಹೆಚ್ಚಾಗಲು ಸಹಾಯವಾಯಿತು.

೩ ಈ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಪೂರ್ತಿ ಸಮಾಧಾನವಾಗುವವರೆಗೆ ದೂರವಾಣಿಯಲ್ಲಿ ಮಾತನಾಡುವುದು : ದೂರವಾಣಿ ಕರೆಯನ್ನು ಮಾಡಿದಾಗ ‘ಅವರು ದೂರವಾಣಿ ಕರೆಯನ್ನು ಬಂದ್‌ ಮಾಡಲು ಗಡಿಬಿಡಿ ಮಾಡುತ್ತಿದ್ದಾರೆ ಎಂದು ನನಗೆ ಒಂದು ಸಲವೂ ಅನಿಸಲಿಲ್ಲ; ಇದರ ವಿರುದ್ಧ ಪ್ರತಿ ಬಾರಿ ಅವರು ‘ಇನ್ನೂ ಏನಾದರೂ ಹೇಳುವುದಿದ್ದರೆ ಹೇಳು’, ಎಂದು ನನಗೆ ಹೇಳುತ್ತಿದ್ದರು. ನನಗೆ ಏನೂ ಹೇಳುವುದು ಇಲ್ಲದೇ ಇದ್ದರೂ ಅವರು ಮೇಲಿನಂತಹ ಉದಾಹರಣೆಗಳನ್ನು ನೀಡಿ ನನ್ನೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದರು. ಇದರಿಂದ ನನ್ನ ಸಾಧನೆ ಮತ್ತು ಸೇವೆ ಮಾಡುವ ತಳಮಳ ಹೆಚ್ಚಾಗಲು ಬಹಳ ಸಹಾಯವಾಯಿತು. ನನ್ನಲ್ಲಿ ‘ನಾನೂ ಅವರಂತೆ ಪ್ರಯತ್ನಿಸಬೇಕು’, ಎಂಬ ಪ್ರೇರಣೆ ಜಾಗೃತವಾಗಿ ‘ನಾನು ಚೆನ್ನಾಗಿ ಪ್ರಯತ್ನ ಮಾಡುತ್ತಿದ್ದೇನೆ’, ಎಂಬ ಅಹಂನ ವಿಚಾರ ನಾಶವಾಗುತ್ತಿತ್ತು.

೪. ಅಂತರ್ಯಾಮಿಯಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಬಹಳಷ್ಟು ಬಾರಿ ನನಗೆ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವುದಿರುತ್ತಿತ್ತು. ಅವು ಮರೆತು ಹೋಗಬಾರದೆಂದು ನಾನುಬರೆದಿಟ್ಟುಕೊಳ್ಳುತ್ತಿದ್ದೆನು, ಆದರೂ ನಾನು ಅವುಗಳಲ್ಲಿನ ಒಂದೆರಡು ಅಂಶವನ್ನು ಕೇಳಲು ಮರೆಯುತ್ತಿದ್ದೆನು. ಆಗ ಪ.ಪೂ ಗುರುದೇವರು ನಿಖರವಾಗಿ ನನಗೆ ಆ ಅಂಶವನ್ನೇ ಹೇಳುತ್ತಿದ್ದರು. ಇದರಿಂದ ‘ಗುರುಗಳು ಅಂತರ್ಯಾಮಿಯಾಗಿರುತ್ತಾರೆ. ಅವರಿಗೆ ಎದುರಿರುವ ಸಾಧಕರ ಮನಸ್ಸಿನಲ್ಲಿನ ಎಲ್ಲ ಪ್ರಶ್ನೆಗಳು ತಿಳಿಯುತ್ತವೆ ಮತ್ತು ಅವರು ಅವುಗಳ ಉತ್ತರಗಳನ್ನು ನೀಡಿ ಸಾಧಕರನ್ನು ಸಮಾಧಾನ ಪಡಿಸುತ್ತಾರೆ’, ಎಂದು ನನ್ನ ಗಮನಕ್ಕೆ ಬಂದಿತು.

೫. ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ತೊಂದರೆಗಳ ಬಗ್ಗೆ ಸಕಾರಾತ್ಮಕತೆಯನ್ನು ನಿರ್ಮಿಸುವುದು ಮತ್ತು ತೊಂದರೆ ದೂರವಾಗುವುದು

ನಾನು ಕೆಲವೊಮ್ಮೆ ‘ನನಗೆ ಆಧ್ಯಾತ್ಮಿಕ ತೊಂದರೆಯಾಗುತ್ತಿದೆ’, ಎಂದು ಅವರಿಗೆ ಹೇಳಿದಾಗ ಅವರು ನನಗೆ ಇತರ ಸಾಧಕರಿಗಾಗುವ ತೀವ್ರ ತೊಂದರೆಗಳ ಬಗ್ಗೆ ಹೇಳುತ್ತಿದ್ದರು, ಹಾಗೆಯೇ ಅವರ ಸ್ವಂತದ ಪ್ರಾಣಶಕ್ತಿ ಬಹಳ ಕಡಿಮೆ ಇರುತ್ತದೆ ಮತ್ತು ‘ಎಷ್ಟೋ ಬಾರಿ ಅದು ಶೇ. ೩೦ ರ (ಟಿಪ್ಪಣಿ) ಹತ್ತಿರ ಇರುತ್ತದೆ’, ಎಂದು ಹೇಳಿ ಅವರು ”ದೇವರ ಕೃಪೆಯಿಂದಲೇ ನಾನು ಜೀವಂತ ಇದ್ದೇನೆ; ಇಲ್ಲವಾದರೆ ಇಷ್ಟು ಕಡಿಮೆ ಪ್ರಾಣಶಕ್ತಿ ಇರುವವರಿಗೆ ಏನೂ ಮಾಡಲು ಸಾಧ್ಯವಿಲ್ಲ. ದೇವರ ಕೃಪೆಯಿಂದಲೇ ನನಗೆ ದೈನಂದಿನ ಕೃತಿಗಳನ್ನಾದರೂ ಮಾಡಲು ಸಾಧ್ಯವಾಗುತ್ತಿದೆ’’, ಎಂದು ಹೇಳುತ್ತಿದ್ದರು. ಇದನ್ನು ಕೇಳಿ ‘ನನ್ನ ತೊಂದರೆ ಆ ತುಲನೆಯಲ್ಲಿ ಬಹಳ ಕಡಿಮೆ ಇದೆ’, ಎಂದೆನಿಸಿ ನನ್ನ ಮನಸ್ಸು ತಕ್ಷಣ ಸಕಾರಾತ್ಮಕವಾಗುತ್ತಿತ್ತು ಮತ್ತು ಅವರೊಂದಿಗೆ ಮಾತನಾಡುವಾಗ ತೊಂದರೆಯೂ ದೂರವಾಗಿರುತ್ತಿತ್ತು.

(ಟಿಪ್ಪಣಿ : ಪ್ರಾಣಶಕ್ತಿ ಶೇ. ೩೦ ಕ್ಕಿಂತ ಕಡಿಮೆಯಾದರೆ ಮನುಷ್ಯ ಸಾಯುತ್ತಾನೆ. ‘ಸಾಮಾನ್ಯ ವ್ಯಕ್ತಿಯ ಪ್ರಾಣಶಕ್ತಿ ಶೇ. ೧೦೦ ರಷ್ಟಿರುತ್ತದೆ’, ಎಂದು ಇಲ್ಲಿ ಪರಿಗಣಿಸಲಾಗಿದೆ.)

೬. ಪರಾತ್ಪರ ಗುರು ಡಾ. ಆಠವಲೆಯವರ ಸರ್ವಜ್ಞತೆ !

ಕೆಲವೊಮ್ಮೆ ನನ್ನಿಂದ ಯಾವುದಾದರೊಂದು ಕೃತಿ ಮಾಡುವುದು ಉಳಿದು ಹೋಗಿದ್ದರೆ ಅಥವಾ ಯಾವುದಾದರೊಂದು ತಪ್ಪು ಹೇಳುವುದು ಬಾಕಿ ಇದ್ದರೆ ನಾನು ಎಲ್ಲವನ್ನೂ ಹೇಳಿ ಮುಗಿಸಿದ ನಂತರ ಪ.ಪೂ. ಗುರುದೇವರು ನನಗೆ ಅದರ ಬಗ್ಗೆ ಕೇಳುತ್ತಿದ್ದರು ಮತ್ತು ನನ್ನ ತಪ್ಪನ್ನು ನನ್ನ ಗಮನಕ್ಕೆ ತಂದು ಕೊಡುತ್ತಿದ್ದರು. ಇದರಿಂದ ಅವರ ಸರ್ವಜ್ಞತೆ ಗಮನಕ್ಕೆ ಬರುತ್ತಿತ್ತು.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಿಗೆ ಅರ್ಪಿಸುತ್ತೇನೆ !’

ಇದಂ ನ ಮಮ | (ಈ ಬರವಣಿಗೆ ನನ್ನದಲ್ಲ !)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೬.೯.೨೦೨೩)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.