ಊರಿನ ಕೇಂದ್ರ ಸ್ಥಾನ – ದೇವಸ್ಥಾನ !

ದೇವಸ್ಥಾನಗಳು ಊರಿನ ಕೇಂದ್ರಸ್ಥಾನವಾಗಿರುತ್ತಿದ್ದವು. ದೇವಸ್ಥಾನವನ್ನು ನಾನು ಒಂದು ಸಾಮಾಜಿಕ ಸಂಸ್ಥೆಯೆಂದು ತಿಳಿಯತ್ತೇನೆ. ಕೆಲವು ದೇವಸ್ಥಾನಗಳಲ್ಲಿ ಒಂದು ಗೋಲಾಕಾರದ ಕಲ್ಲು ಇರುತ್ತದೆ. ಅದರ ಹೆಸರು ರಂಗಶಿಲೆ. ಅಲ್ಲಿ ನೀವು ದೇವರಿಗೆ ನರ್ತನೆ, ಕೀರ್ತನ, ಭಜನೆ ಅರ್ಪಣೆ ಮಾಡುತ್ತೀರಿ. ನೃತ್ಯ ಕಲಿತ ನಂತರ ‘ಅರಂಗೇಟ್ರಮ್’ (ಎಲ್ಲರ ಮುಂದೆ ಪ್ರಸ್ತುತಪಡಿಸುವುದು) ಮಾಡಲಾಗುತ್ತದೆ, ದಕ್ಷಿಣದಲ್ಲಿ ಅದನ್ನು ದೇವಸ್ಥಾನಗಳಲ್ಲಿ ಮಾಡುವ ಪದ್ಧತಿಯಿದೆ. ಇದು ಎಲ್ಲಿಂದ ಬರುತ್ತದೆ ? ಈಗಲೂ ಕೆಲವು ಮಕ್ಕಳು ದೇವಸ್ಥಾನಗಳಿಗೆ ಹೋಗಿ ನೃತ್ಯ ಕಲಿಯುತ್ತಾರೆ. ದೇವಸ್ಥಾನಗಳ ಸುತ್ತಲೂ ಸಂತೆ ಸೇರುತ್ತಿತ್ತು. ಸುತ್ತಮುತ್ತಲಿನ ಹಳ್ಳಿಯ ಜನರು ಅಲ್ಲಿಗೆ ಬರುತ್ತಾರೆ. ಅಲ್ಲಿ ವಸ್ತುವಿನಿಮಯದ ಜೊತೆಗೆ ವಿಚಾರ ವಿನಿಮಯವೂ ನಡೆಯುತ್ತಿತ್ತು. ಜನರು ಸತ್ಯಪ್ರಮಾಣ ಮಾಡಲು ದೇವಸ್ಥಾನಕ್ಕೆ ಬರುತ್ತಿದ್ದರು. ಆಗ ನಗರದ ಹಾಗೂ ಹಳ್ಳಿಯ ಜನರ ಪೂರ್ಣ ಜೀವನ ದೇವಸ್ಥಾನವನ್ನೇ ಅವಲಂಬಿಸಿರುತ್ತಿತ್ತು.

– ಡಾ. ಗೋ.ಬಂ.ದೇಗಲೂರಕರ್, ಪುರಾತತ್ತ್ವಶಾಸ್ತ್ರ ಮತ್ತು ಮೂರ್ತಿಶಾಸ್ತ್ರದ ಅಭ್ಯಾಸಕರು