ಬದಾಯು (ಉತ್ತರಪ್ರದೇಶ) ಇಲ್ಲಿನ ಜಾಮಾ ಮಸೀದಿಯ ಸ್ಥಳದಲ್ಲಿ ನೀಲಕಂಠ ಮಹಾದೇವ ದೇವಸ್ಥಾನವಿತ್ತು !

ದಿವಾಣಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ

ಬದಾಯು (ಉತ್ತರಪ್ರದೇಶ) – ಇಲ್ಲಿನ ಜಾಮಾ ಮಸೀದಿ ಮೊದಲು ನೀಲಕಂಠ ಮಹಾದೇವ ದೇವಸ್ಥಾನವಾಗಿತ್ತು. ಈ ಕುರಿತು ಇಲ್ಲಿಯ ದಿವಾಣಿ ನ್ಯಾಯಾಲಯದ ಹಿರಿಯ ವಿಭಾಗೀಯ ತ್ವರಿತ ನ್ಯಾಯಾಲಯದಲ್ಲಿ ಹಿಂದೂ ಮಹಾಸಭೆಯು 2022 ರಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ನವೆಂಬರ್ 30 ರಂದು ಜಾಮಾ ಮಸೀದಿ ಸಮಿತಿಯು ನ್ಯಾಯಾಲಯದಲ್ಲಿ ತನ್ನ ವಾದವನ್ನು ಮಂಡಿಸಿದೆ. ಈಗ ಡಿಸೆಂಬರ 3 ರಂದು ಮುಂದಿನ ವಿಚಾರಣೆ ನಡೆಯಲಿದೆ.

1. ಜಾಮಾ ಮಸೀದಿಯ ವಕೀಲರಾದ ಅನ್ವರ ಆಲಂ ಇವರು, “ನಾವು ನ್ಯಾಯಾಲಯದಲ್ಲಿ, ಜಾಮಾ ಮಸೀದಿಯಿರುವ ಸ್ಥಳದಲ್ಲಿ ಯಾವುದೇ ದೇವಸ್ಥಾನವಿಲ್ಲ. ಹಿಂದೂ ಮಹಾಸಭೆಗೆ ಈ ಪ್ರಕರಣವನ್ನು ದಾಖಲಿಸಲು ಮೂಲದಲ್ಲಿ ಅಧಿಕಾರವೇ ಇಲ್ಲ. ಇಲ್ಲಿ ದೇವಸ್ಥಾನವನ್ನು ಬೀಳಿಸಿ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದು ಅವರ ಹೇಳಿಕೆಯಾಗಿದೆ. ಆದರೆ ಈ ಮಸೀದಿ 850 ವರ್ಷಗಳಷ್ಟು ಹಳೆಯದಾಗಿದೆ. ಅಂದರೆ ಅಲ್ಲಿ ದೇವಸ್ಥಾನ ಅಸ್ತಿತ್ವದಲ್ಲಿಲ್ಲ.” ಎಂದು ಹೇಳಿದೆ.

2. ಹಿಂದೂ ಮಹಾಸಭೆಯ ನ್ಯಾಯವಾದಿ ವಿವೇಕ ರಾಂದೇರ ಮಾತನಾಡಿ, “ನಾವು ನೀಲಕಂಠ ಮಹಾದೇವ ದೇವಸ್ಥಾನದಲ್ಲಿ ಪೂಜೆ ಮಾಡುವ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ. ಇದಕ್ಕಾಗಿ ಅರ್ಜಿಯನ್ನು ದಾಖಲಿಸಿದ್ದೇವೆ. ಈ ಪ್ರಕರಣದ ವಿಚಾರಣೆ ನಡೆಯಬೇಕೋ ಇಲ್ಲವೋ ಎಂಬುದರ ಬಗ್ಗೆ ವಾದ ನಡೆಯುತ್ತಿದೆ. ಸರಕಾರಿ ನ್ಯಾಯವಾದಿಗಳ ವಾದ ಪೂರ್ಣವಾಗಿದೆ. ಮುಸಲ್ಮಾನರು ತಮ್ಮ ವಾದವನ್ನು ಮಂಡಿಸಿದ್ದಾರೆ. ಚರ್ಚೆ ಮುಗಿದಿಲ್ಲ. ಮುಂದಿನ ದಿನಾಂಕ ಡಿಸೆಂಬರ್ 3 ರಂದು ಇದೆ. ಮುಸಲ್ಮಾನರ ಚರ್ಚೆ ಮುಗಿದ ಮೇಲೆ ನಾವು ವಿವರವಾದ ಉತ್ತರ ನೀಡಲಿದ್ದೇವೆ.” ಎಂದು ಹೇಳಿದರು.

3. ಅರ್ಜಿದಾರರು ಮತ್ತು ಹಿಂದೂ ಮಹಾಸಭೆಯ ರಾಜ್ಯ ಸಂಯೋಜಕ ಮುಕೇಶ ಪಟೇಲ ಮಾತನಾಡಿ, “ನಾವು ಸಂಪೂರ್ಣ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದೇವೆ. ದಿವಾಣಿ ನ್ಯಾಯಾಲಯದೊಂದಿಗೆ ಉಚ್ಚನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳೂ ನಮಗೆ ನ್ಯಾಯ ನೀಡುತ್ತವೆ.” ಎಂದು ನಾವು ಆಶಿಸುತ್ತಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನ ದಾಳಿಕೋರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಅಲ್ಲಿನ ಪ್ರದೇಶವನ್ನು ಮಸೀದಿಯಾಗಿ ಪರಿವರ್ತಿಸಿರುವ ಅನೇಕ ದಾಖಲೆಗಳಿವೆ. ಆದುದರಿಂದ ಈಗ ಕೇಂದ್ರ ಸರಕಾರವೇ ಭಾರತದಲ್ಲಿರುವ ಇಂತಹ ಎಲ್ಲ ಸ್ಥಳಗಳ ಸಮೀಕ್ಷೆ ಮಾಡುವಂತೆ ಅನುಮತಿ ನೀಡಿ ಹಿಂದೂಗಳಿಗೆ ನ್ಯಾಯವನ್ನು ನೀಡಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !