ದಕ್ಷಿಣ ಕಾಶ್ಮೀರದಲ್ಲಿನ 17 ದೇವಸ್ಥಾನಗಳ ಜೀರ್ಣೋದ್ಧಾರ

ಜಮ್ಮು-ಕಾಶ್ಮೀರ ಸರಕಾರದಿಂದ 17 ಕೋಟಿ ರೂಪಾಯಿ ಅನುದಾನ

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರ ಸರಕಾರವು ದಕ್ಷಿಣ ಕಾಶ್ಮೀರದಲ್ಲಿನ 17 ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆಯ ಕೆಲಸವನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ 17 ಕೋಟಿ ರೂಪಾಯಿ ಅನುದಾನವನ್ನು ಅನುಮೋದಿಸಲಾಗಿದೆ. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಹಾದಿ ಭಯೋತ್ಪಾದಕರು ನಡೆಸಿದ ಹಿಂಸಾಚಾರದಿಂದ ಹಾನಿಗೊಳಗಾಗಿರುವ ಮಂದಿರಗಳ ಜೀರ್ಣೋದ್ಧಾರ ಮಾಡಲಾಗುತ್ತದೆ. ಈ ಕಾರ್ಯಕ್ರಮದಿಂದ ನಿರಾಶ್ರಿತ ಕಾಶ್ಮೀರಿ ಹಿಂದೂಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಕಣಿವೆಯಲ್ಲಿರುವ ತಮ್ಮ ಧಾರ್ಮಿಕ ಸ್ಥಳಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಮಾಡುವಂತೆ ಕುರಿತು ಅನೇಕ ವರ್ಷಗಳಿಂದ ವಿನಂತಿಸುತ್ತಿದ್ದರು.

1. ಅನಂತನಾಗ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಇರುವ ದೇವಸ್ಥಾನಗಳಿಗೆ ಸರಕಾರವು ಈ ಮೊತ್ತವನ್ನು ಅನುಮೋದಿಸಿದೆ. ಈ ಸಹಾಯವನ್ನು ಪಡೆಯುವ ದೇವಸ್ಥಾನಗಳಲ್ಲಿ ಮಮಲೇಶ್ವರ ಮಂದಿರ, ಶಿವ ಭಗವತಿ ಮಂದಿರ, ಪಾಪರಣ ನಾಗ ಮಂದಿರ, ಕ್ಷೀರ ಭವಾನಿ ಮಂದಿರ ಮೊದಲಾದ ಪ್ರಮುಖ ಸ್ಥಳಗಳು ಸೇರಿದೆ. ಇದಲ್ಲದೆ ಖಿರಂನಲ್ಲಿನ ಮಾತಾ ರಾಗನ್ಯಾ ಭಗವತಿ ಮಂದಿರ, ಸಾಲಿಯಾದಲ್ಲಿ ಕಾರ್ಕೋಟಕ ನಾಗ ಮಂದಿರ, ತ್ರಾಲ್ ನಲ್ಲಿರುವ ಬನಮೀರ ಗಾವದ ಗುಫ್ಕರಾಲ ಮಂದಿರ, ದ್ರಂಗಬಲ ಪಂಪೋರನಲ್ಲಿರುವ ಶ್ರೀ ಶಿದೇಶ್ವರ ಮಂದಿರ, ಮೀಲ ಮಂದಿರ, ಅನಂತ ಮಂದಿರ, ಅವಂತಿಪೊರಾದಲ್ಲಿನ ಮಂದಿರ, ತ್ರಿಚಲದ ಮಂದಿರ, ಪುಲವಾಮಾದ ತಹಬ ಮಂದಿರ ಮುಂತಾದ ದೇವಸ್ಥಾನಗಳು ಸೇರಿವೆ.

2. ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಶಿಫಾರಸ್ಸುಗಳ ಆಧಾರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆ ಅಡಿಯಲ್ಲಿ ಪ್ರತಿಯೊಂದು ದೇವಸ್ಥಾನಕ್ಕೆ ಅದರ ರಚನಾತ್ಮಕ ಕಾರ್ಯಗಳ ಪ್ರಕಾರ ನಿಧಿಯನ್ನು ಬಿಡುಗಡೆ ಮಾಡಲಾಗುವುದು.