Hindus attacked in Bangladesh : ಬಾಂಗ್ಲಾದೇಶದಲ್ಲಿ ಹಿಂದೂ ಯುವಕನಿಂದ ಫೇಸಬುಕ್ ಪೋಸ್ಟ್ ಮೂಲಕ ಮೌಲ್ವಿಯನ್ನು ಅವಮಾನಿಸಲಾಗಿದೆ ಎಂದು ಹಿಂದೂಗಳ ಮೇಲೆ ದಾಳಿ

  • 130 ಮನೆಗಳು ಮತ್ತು 20 ಹಿಂದೂ ದೇವಸ್ಥಾನಗಳ ಹಾನಿ

  • 200 ಹಿಂದೂ ಕುಟುಂಬಗಳ ಪಲಾಯನ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಸುನಾಮಗಂಜ ಜಿಲ್ಲೆಯಲ್ಲಿ ಹಿಂದೂ ಯುವಕನೋರ್ವ ಫೇಸಬುಕ್‌ನಲ್ಲಿ ಅಗೌರವಿಸಿದ ಪೋಸ್ಟ್ ಹಾಕಿದ ಪರಿಣಾಮ ಮತಾಂಧ ಮುಸಲ್ಮಾನರು ಅನೇಕ ಹಿಂದೂಗಳ ಮನೆಗಳು ಮತ್ತು ದೇವಸ್ಥಾನಗಳನ್ನು ಧ್ವಂಸಗೊಳಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಚ್ಚುವರಿ ಪೋಲೀಸ್ ಮತ್ತು ಸೇನೆ ನಿಯೋಜಿಸಿದೆ. ಡಿಸೆಂಬರ್ 3 ರಂದು 21 ವರ್ಷದ ಆಕಾಶ ದಾಸ್ ಹೆಸರಿನ ಹಿಂದೂ ಯುವಕ ‘ಹೆಫಾಜತ್-ಎ-ಇಸ್ಲಾಮ್’ ಸಂಘಟನೆಯ ನಾಯಕ ಮಾಲ್ವಿ (ಇಸ್ಲಾಮಿಕ್ ಅಧ್ಯಯನಕಾರ) ಮುಫ್ತಿ ಮಾಮೂನುಲ್ ಹಕ್ ವಿರುದ್ಧ ಫೇಸಬುಕ್‌ನಲ್ಲಿ ಟೀಕಿಸಿದ್ದಾನೆ ಎಂದು ಆರೋಪಿಸಲಾಗಿದೆ. ದೊರಾಬಜಾರಿನಲ್ಲಿ ಮತಾಂಧ ಮುಸಲ್ಮಾನರ ಗುಂಪು 130 ಮನೆಗಳು ಮತ್ತು 20 ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದರು. ಇದರಿಂದ 200 ಹಿಂದೂ ಕುಟುಂಬಗಳು ಪಲಾಯನ ಮಾಡಿವೆ. ದಾಳಿಯ ಘಟನೆಗಳ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಘಟನೆ ಪೂರ್ವಯೋಜಿತವಾಗಿದೆ ಎಂದು ಪೋಲೀಸರಿಗೆ ಸಂದೇಹವಿದೆ. ಪೋಲೀಸರು ಆಕಾಶ ದಾಸನನ್ನು ಬಂಧಿಸಿದ್ದಾರೆ.

1. ಸುನಾಮಗಂಜ ನಗರದ ಕೇಂದ್ರೀಯ ಲೋಕನಾಥ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಖೋಕನ ರಾಯ್  ಮಾತನಾಡಿ, ಮುಸಲ್ಮಾನರು ಲೋಕನಾಥ ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾರೆ. ಹಾಗೂ 15 ಲಕ್ಷ ರೂಪಾಯಿಗಳಿಗಿಂತ ಅಧಿಕ ಮೌಲ್ಯಗಳ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಸುಮಾರು 100 ಮನೆಗಳಿಗೆ ಹಾನಿಯಾಗಿದೆ. ಉಪಜಿಲ್ಲೆ ಪೂಜಾ ಉದ್ಯಾಪನ ಪರಿಷತ್ತಿನ ಅಧ್ಯಕ್ಷ ಗುರು ಡೆ ಅವರ ಮನೆ ಮತ್ತು ಅಲ್ಲಿರುವ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಮುಸಲ್ಮಾನರು ಚಿನ್ನದ ಆಭರಣಗಳ ಅನೇಕ ಅಂಗಡಿಗಳನ್ನು ಮತ್ತು ಹಿಂದೂ ಅಂಗಡಿಗಳನ್ನೂ ಲೂಟಿ ಮಾಡಿದ್ದಾರೆ.

2. ಸುನಾಮಗಂಜದ ಈ ಘಟನೆಯ ನಂತರ ಹಿಂದೂಗಳು, “ಒಂದು ವೇಳೆ ಇದು ಒಬ್ಬ ವ್ಯಕ್ತಿಯ ತಪ್ಪು ಎಂದಾಗಿದ್ದರೆ, ಅದಕ್ಕಾಗಿ ಅವರು ಏಕೆ ಶಿಕ್ಷೆ ಅನುಭವಿಸಬೇಕಾಗುತ್ತಿದೆ ?” ಎಂದು ಪ್ರಶ್ನಿಸಿದ್ದಾನೆ.

ಸಂಪಾದಕೀಯ ನಿಲುವು

  • ಸಾಮಾಜಿಕ ಮಾಧ್ಯಮಗಳಲ್ಲಿ ತಥಾಕಥಿತ ಅವಮಾನ ಮಾಡಲಾಗಿದೆ ಎಂಬ ಸುಳ್ಳು ಆರೋಪ ಮಾಡುವ ಮೂಲಕ ಹಿಂದೂಗಳ ಮೇಲೆ ದಾಳಿ ನಡೆಸುವ ಘಟನೆ ಬಾಂಗ್ಲಾದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿವೆ. ಇದಕ್ಕೆ ‘ಸಾಮಾಜಿಕ ಮಾಧ್ಯಮ ಜಿಹಾದ್’ ಎಂದು ಯಾರಾದರೂ ಹೆಸರಿಸಿದರೆ ತಪ್ಪಾಗಲಾರದು!
  • ಬಾಂಗ್ಲಾದೇಶದಲ್ಲಿನ ಹಿಂದೂಗಳ ದಾತಾ ಆಗಿ ಭಾರತ ಅಥವಾ ಯಾವುದೇ ದೇಶದಲ್ಲಿ ಇಲ್ಲ ಎನ್ನುವುದನ್ನು  ಗಮನದಲ್ಲಿ ಇಟ್ಟುಕೊಂಡು ಈಗ ತಮ್ಮ ಪ್ರಾಣ ರಕ್ಷಿಸಲು ಹೋರಾಟ ಮಾಡಬೇಕು ಅಥವಾ ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕು ಎಂದೇ ಹೇಳಬೇಕಾಗುತ್ತದೆ !