ಕಲಶ ದರ್ಶನ ಮತ್ತು ಕಲಶದ ಮಹತ್ವ !

‘ದೇವಸ್ಥಾನವೆಂದರೆ ಭಗವಂತನ ವಿಶ್ವರೂಪ ದರ್ಶನ !’ ಇದನ್ನು ಆಕಾಶದೊಂದಿಗೆ ತೆಗೆದುಕೊಳ್ಳಬೇಕಾಗುತ್ತದೆ. ಆಕಾಶವೂ ವಾಸ್ತು ನಿರ್ಮಿತಿಯ ಒಂದು  ಅವಿಭಾಜ್ಯ ಅಂಗವಾಗಿದೆ. ಖಜುರಾಹೋದಲ್ಲಿನ ದೇವಸ್ಥಾನಗಳು, ಭುವನೇಶ್ವರದ ಲಿಂಗರಾಜ ದೇವಸ್ಥಾನ, ತೇಜೋಮಹಾಲಯ (ತಾಜಮಹಲ್) ಇಂತಹ ದೇವಸ್ಥಾನಗಳನ್ನು ಆಕಾಶದ ಹಿನ್ನೆಲೆಯಲ್ಲಿಯೇ ನೋಡಬೇಕು. ‘ಖಂ ಬ್ರಹ್ಮ’ ಇದರ ಅರ್ಥ ‘ಆಕಾಶವು ಬ್ರಹ್ಮವಾಗಿದೆ.’

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

ಕಲಶದ ಆಧ್ಯಾತ್ಮಿಕ ಅರ್ಥ !

೧. ಕಲಶದ ಜ್ಯೋತಿರ್ಮಯ ಸ್ವರೂಪದ ಎಲ್ಲಕ್ಕಿಂತ ಮೇಲಿನ ಭಾಗ ‘ಹಿರಣ್ಯಗರ್ಭ’ ಎಂಬ ಹೆಸರಿನ ತೇಜಸ್ವಿ ಆತ್ಮಜ್ಯೋತಿ ನಿರ್ಮಾಣವಾಯಿತು. ಅದನ್ನು ಕಲಶದ ಎಲ್ಲಕ್ಕಿಂತ ಮೇಲಿನ ಭಾಗದಲ್ಲಿನ ಜ್ಯೋತಿರ್ಮಯ ರೂಪದಲ್ಲಿ ತೋರಿಸಲಾಗುತ್ತದೆ. ಆತ್ಮವು ಪ್ರಕಾಶಸ್ವರೂಪ, ಜ್ಯೋತಿರ್ಮಯ ಸ್ವರೂಪವಾಗಿರುವುದರಿಂದ ದೇವಸ್ಥಾನದ ಕಲಶವು ಜ್ಯೋತಿಯ ಆಕಾರದ ಮತ್ತು ಸುವರ್ಣದ್ದಾಗಿರುತ್ತದೆ.

ಶ್ರೀ. ಸಂಜಯ ಮುಳ್ಯೆ

೨. ಅಷ್ಟಧಾ ಪ್ರಕೃತಿಯ ಪ್ರತೀಕವಾಗಿರುವ ‘ಆಮಲಕ’ ಎಂಬ ಹೆಸರಿನ ಭಾಗ

ಆ ಕಳಸದ ಕೆಳಗೆ ‘ಆಮಲಕ’ ಎಂಬ ಹೆಸರಿನ ಭಾಗವಿರುತ್ತದೆ. ಆಮಲಕವೆಂದರೆ ನೆಲ್ಲ್ಲಿಕಾಯಿ. ಗುಳಂಬವನ್ನು ಸರಿಯಾಗಿ ನಿರೀಕ್ಷಣೆ ಮಾಡಿದರೆ ಗಮನಕ್ಕೆ ಬರುವುದೇನೆಂದರೆ, ಪೂರ್ಣ ನೆಲ್ಲ್ಲಿಕಾಯಿ ಕಾಣಿಸುತ್ತಿದ್ದರೂ, ಅದಕ್ಕೆ ಎಸಳುಗಳಿರುತ್ತವೆ. ಅವುಗಳನ್ನು ಬಿಡಿಸಲು ಬರುತ್ತದೆ. ಅದೇ ರೀತಿ ಆತ್ಮಜ್ಯೋತಿ-ವಿಶ್ವಾತ್ಮಕ ಅಹಂಕಾರವು ಅಷ್ಟಧಾ ಪ್ರಕೃತಿಯಿಂದ ಕೂಡಿರುತ್ತದೆ. ಆಮಲಕವು ಆ ಅಷ್ಟಧಾ ಪ್ರಕೃತಿಯ ಪ್ರತೀಕವಾಗಿದೆ. ಅನಂತರ ಸ್ಥೂಲ, ಭೂತ ಸೃಷ್ಟಿಯು ನಿರ್ಮಾಣವಾಗತೊಡಗುತ್ತದೆ. ಭೌತಿಕ ಸೃಷ್ಟಿಯ ಆರಂಭವು ಆಕಾಶದಿಂದಾಗುತ್ತದೆ.

೩. ಆಮಲಕದ ಕೆಳಗೆ ಆಕಾಶದ ಪ್ರತೀಕವಾಗಿರುವ  ಗುಮ್ಮಟ ಇರುತ್ತದೆ.

೪. ಗುಮ್ಮಟದ ಕೆಳಗಿನ ಚೌಕಾಕಾರದ ಗರ್ಭಗುಡಿಯು ಸ್ಥಿರತೆಯ, ಅಂದರೆ ಪೃಥ್ವಿಯ ಪ್ರತೀಕವಾಗಿದೆ. ಈ ರೀತಿ ಆತ್ಮತತ್ತ್ವವು ಪೃಥ್ವಿತತ್ತ್ವದ ವರೆಗೆ ಅವತರಿಸುತ್ತದೆ. – ಶ್ರೀ. ಸಂಜಯ ಮುಳ್ಯೆ, ರತ್ನಾಗಿರಿ.

ದೇವಸ್ಥಾನದ ಕಲಶದಲ್ಲಿ ಹತ್ತೂ ದಿಕ್ಕುಗಳ ಲಹರಿಗಳನ್ನು ಗ್ರಹಿಸುವ ಕ್ಷಮತೆಯಿದೆ. ದೇವಸ್ಥಾನದ ಕಳಸವು ಆಕಾಶತತ್ತ್ವಕ್ಕೆ ಸಂಬಂಧಿಸಿದ ಬ್ರಹ್ಮಾಂಡದಲ್ಲಿನ ದೇವರ ತತ್ತ್ವದ ಲಹರಿಗಳನ್ನು ಗ್ರಹಿಸಿ ಅವಶ್ಯಕತೆಗನುಸಾರ ಎಲ್ಲ ದಿಕ್ಕುಗಳಿಗೆ ಪ್ರಕ್ಷೇಪಿಸಬಹುದು. ದೇವಸ್ಥಾನದ ಕಲಶದಿಂದ ಕಾರಂಜಿಯಂತೆ ಪ್ರಕ್ಷೇಪಿಸುವ ಸಾತ್ತ್ವಿಕ ಲಹರಿಗಳಿಂದ ಊರಿನ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗುತ್ತದೆ, ಹಾಗೆಯೇ ಈ ಲಹರಿಗಳಿಂದ ಹತ್ತು ದಿಕ್ಕುಗಳಿಂದ ಪ್ರವೇಶಿಸುವ ಕೆಟ್ಟ ಶಕ್ತಿಗಳಿಂದ ಊರಿನ ರಕ್ಷಣೆಯಾಗುತ್ತದೆ.

ದೇವಸ್ಥಾನದ ಕಳಸವು ಈಶ್ವರನಿಂದ ಬರುವ ನಿರ್ಗುಣ ತತ್ತ್ವವನ್ನು ದೇವತೆಯ ಮೂರ್ತಿಯಿಂದ ಪ್ರತ್ಯಕ್ಷ ಸಗುಣದಿಂದ ಕಾರ್ಯವನ್ನು ಮಾಡಲು ಪ್ರಕ್ಷೇಪಿಸುವ ಲಹರಿಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಹರಡುತ್ತದೆ. ಆದ್ದರಿಂದ ಈ ಲಹರಿಗಳ ವ್ಯಾಪ್ತಿ ಮತ್ತು ಪರಿಣಾಮವು ದೇವಸ್ಥಾನದ ಕ್ಷೇತ್ರದಲ್ಲಿ ಹೆಚ್ಚು ಸಮಯ ಉಳಿಯುತ್ತದೆ. ಈ ಕಾರಣದಿಂದ ಕೆಲವು ಮೀಟರ್‌ ದೂರದಿಂದಲೇ ನಮಗೆ ದೇವಸ್ಥಾನದಲ್ಲಿನ ಜಾಗೃತ ದೇವತೆಯಿಂದ ಮತ್ತು ಕಲಶದಿಂದ ಪ್ರಕ್ಷೇಪಿಸುವ ಸಾತ್ತ್ವಿಕ ಲಹರಿಗಳ ಅಸ್ತಿತ್ವದ ಅರಿವಾಗುತ್ತದೆ. ದೇವಸ್ಥಾನದ ಕಲಶವು ಮೂರ್ತಿಯಿಂದ ೧೫೦ ಅಡಿ ಎತ್ತರವಾಗಿದ್ದರೆ ಕಳಸದ ಈ ತುದಿಯ ಕೇಂದ್ರಬಿಂದುವಿಗೆ ಈಶ್ವರನ ನಿರ್ಗುಣ ಲಹರಿಗಳು ಸಗುಣ ಲಹರಿಗಳಲ್ಲಿ ರೂಪಾಂತರಗೊಳ್ಳುತ್ತವೆ. ಚಿನ್ನದಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆ ಅತ್ಯಧಿಕ ಇರುವುದರಿಂದ ಸಾಧ್ಯವಾದಷ್ಟು ಕಳಸವು ಚಿನ್ನದ್ದಾಗಿರಬೇಕು.

– ಓರ್ವ ವಿದ್ವಾಂಸರು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಓರ್ವ ವಿದ್ವಾಂಸರು’ ಇವರ ಮಾಧ್ಯಮದಿಂದ ಬರವಣಿಗೆಯನ್ನು ಮಾಡುತ್ತಾರೆ.) ೨೧.೧೧.೨೦೦೪, ಬೆಳಗ್ಗೆ ೧೦.೩೨)

ಮಿಂಚನ್ನು ದೂರ ತಳ್ಳುವಹಲಗೆಯನ್ನು ಕಳಸದಲ್ಲಿ ಕೂರಿಸಲಾಗುತ್ತದೆ !

ದೇವಸ್ಥಾನದ ಮೇಲೆ ಮಿಂಚು ಬೀಳದಂತೆ ರಕ್ಷಣೆಯಾಗಲು ಈ ತಾಮ್ರದ ಕಲಶದಲ್ಲಿ ‘ಕರುಂಗಾಳಿ’ ಎಂಬ ವಿಶಿಷ್ಟ ರೀತಿಯ ವನಸ್ಪತಿಯ ಹಲಗೆÉಯನ್ನು ಕೂರಿಸಲಾಗುತ್ತಿತ್ತು. ಅತ್ಯಂತ ವಿರಳ ವಾಗಿರುವ ಈ ವೃಕ್ಷವು ಮಿಂಚನ್ನು ದೂರ ತಳ್ಳುತ್ತದೆ. ಈ ಮರವು ಎತ್ತರದ ಪರ್ವತದ ಮೇಲಿನ ಅರಣ್ಯದಲ್ಲಿ ಕಂಡುಬರುತ್ತದೆ. ಇಂತಹ ಕಲಶದ ಮೇಲೆ ಕುಂಭಾಭಿಷೇಕವನ್ನು ಮಾಡಲಾಗುತ್ತಿತ್ತು.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಈರೋಡ, ತಮಿಳುನಾಡು. (೪.೨.೨೦೧೬, ಬೆಳಗ್ಗೆ ೯.೧೮)