PIL Against Dargah in Agra: ಫತೆಹಪುರ್ ಸಿಕ್ರಿಯಲ್ಲಿ ದರ್ಗಾದ ಸ್ಥಾನದಲ್ಲಿ ಮಾ ಕಾಮಾಖ್ಯಾ ದೇವಿಯ ದೇವಸ್ಥಾನ ಇತ್ತು !

ಆಗ್ರಾ (ಉತ್ತರ ಪ್ರದೇಶ) ಇಲ್ಲಿಯ ನ್ಯಾಯಾಲಯದಲ್ಲಿ ದಾವೆ !

ಆಗ್ರಾ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಆಗ್ರಾದ ವಿಶ್ವ ಪ್ರಸಿದ್ಧ ತಾಜಮಹಲ್ ಇದು ಮೂಲತಃ ಹಿಂದೂಗಳ ‘ತೇಜೋ ಮಹಾಲಯ’ ಹೆಸರಿನ ದೇವಸ್ಥಾನವಾಗಿದೆ. ಈಗ ಆಗ್ರಾದಿಂದ ೩೫ ಕಿಲೋಮೀಟರ್ ಅಂತರದಲ್ಲಿರುವ ಫತೆಹಪುರ ಸಿಕ್ರಿಯ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಶೇಖ್ ಸಲೀಂ ಚಿಶ್ತಿ ದರ್ಗಾವು ಮೂಲತಃ ಮಾ ಕಾಮಾಖ್ಯ ದೇವಿಯ ದೇವಸ್ಥಾನ ಇರುವುದಾಗಿ ಅರ್ಜಿಯ ಮೂಲಕ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಮಾಡಲಾಗಿದೆ. ನ್ಯಾಯಾಲಯವು ಈ ಅರ್ಜಿಯ ಬಗ್ಗೆ ಗಮನಹರಿಸಿ ನೋಟಿಸ್ ವಿಧಿಸುವಂತೆ ಆದೇಶ ನೀಡಿದೆ. ಮೇ ೯ ರಂದು ನ್ಯಾಯವಾದಿ ಅಜಯ ಪ್ರತಾಪ ಸಿಂಹ ಇವರು ನ್ಯಾಯಾಲಯದಲ್ಲಿ ಈ ದಾವೆ ದಾಖಲಿಸಿದ್ದಾರೆ.

ಅರ್ಜಿಯಲ್ಲಿ ಮಾತಾ ಕಾಮಾಖ್ಯ ಆಸ್ಥಾನ, ಆರ್ಯ ಸಂಸ್ಕೃತಿ ರಕ್ಷಣಾ ಟ್ರಸ್ಟ್, ಯೋಗೇಶ್ವರ ಶ್ರೀ ಕೃಷ್ಣ ಕಲ್ಚರಲ್ ರಿಸರ್ಚ್ ಟ್ರಸ್ಟ್, ಕ್ಷತ್ರಿಯ ಶಕ್ತಿಪೀಠ ವಿಕಾಸ ಟ್ರಸ್ಟ್ ಮತ್ತು ನ್ಯಾಯವಾದಿ ಅಜಯ ಪ್ರತಾಪ ವಾದಿಸುವವರಿದ್ದಾರೆ. ಈ ಪ್ರಕರಣದಲ್ಲಿ ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ವ್ಯವಸ್ಥಾಪಕ ಸಮಿತಿ ದರ್ಗಾ ಸಲೀಮ ಚಿಶ್ತಿ ಮತ್ತು ವ್ಯವಸ್ಥಾಪಕ ಸಮಿತಿ ಜಾಮಾ ಮಸೀದಿ ಇವರನ್ನು ಪ್ರತಿ ವಾದಿಯಾಗಿ ಮಾಡಲಾಗಿದೆ.

ದೇವಸ್ಥಾನದ ಐತಿಹಾಸಿಕ ದಾಖಲೆ !

ನ್ಯಾಯವಾದಿ ಅಜಯ ಪ್ರತಾಪ ಸಿಂಹ ಇವರು ಮಾತನಾಡಿ,

೧. ಸಲೀಂ ಚಿಶ್ತಿ ದರ್ಗಾದ ಸಂದರ್ಭದಲ್ಲಿ ದೂರು ನೀಡಿದ್ದಾರೆ. ಫತೆಹಪುರ ಸಿಕ್ರಿಯ ದರ್ಗಾವು ಮಾ ಕಾಮಖ್ಯ ದೇವಿಯ ಮೂಲ ಗರ್ಭಗುಡಿಯಾಗಿದೆ ಮತ್ತು ಜಾಮ ಮಸೀದಿ ಪರಿಸರದಲ್ಲಿ ಈ ಮೂಲ ದೇವಸ್ಥಾನದ ಪರಿಸರವಿದೆ. ಸಿಕರವಾರಾದ ಕುಲದೇವತೆ ಮಾ ಕಾಮಾಖ್ಯ ದೇವಿಯ ದೇವಸ್ಥಾನ ಇಲ್ಲಿಯೇ ಇತ್ತು. ರಾವಧಮ ದೇವ ಇವರು ಖಾನವಾದ ಯುದ್ಧದ ಸಮಯದಲ್ಲಿ ಇಲ್ಲಿಯ ರಾಜರಾಗಿದ್ದರು. ಅವರ ಇತಿಹಾಸದಲ್ಲಿ ಇದರ ಉಲ್ಲೇಖ ಸಿಗುತ್ತದೆ.

೨. ‘ಬಾಬರನಾಮ’ದಲ್ಲಿ ಪತ್ತೆಹಪುರ ಸಿಕ್ರಿಯ ಕೋಟೆಯ ಬಾಗಿಲಿನ ನೈರುತ್ಯ ಭಾಗದಲ್ಲಿನ ಒಂದು ಅಷ್ಟಕೋನ ಆಕಾರದ ಬಾವಿ ಇದೆ ಮತ್ತು ಪಶ್ಚಿಮ ಪುರ್ವಕ್ಕೆ ಒಂದು ಬಡ ಮನೆ ಇದೆ. ಬಾಬರನು ‘ಬಾಬರನಾಮಾ’ದಲ್ಲಿ ಇದನ್ನು ಕಟ್ಟಿರುವುದು ಉಲ್ಲೇಖವಿದೆ. ಅಷ್ಟಕೋನ ಬಾವಿ ಇದು ಹಿಂದೂ ವಾಸ್ತು ಕಲೆಯಾಗಿದೆ.

೩. ಪಾಶ್ಚಿಮಾತ್ಯ ಇತಿಹಾಸ ತಜ್ಞ ಈ.ವಿ. ಹಾವೇಲ್ ಇವರು ಅವರ ಪುಸ್ತಕದಲ್ಲಿ, ಜಾಮ ಮಸೀದಿಯ ಛಾವಣಿ ಮತ್ತು ಕಂಬಗಳು ಶುದ್ಧ ಹಿಂದೂ ಕಲಾಕೃತಿ ಆಗಿದೆ ಎಂದು ಬರೆದಿದ್ದಾರೆ.

೪. ‘ಭಾರತೀಯ ಪುರಾತತ್ವ ಇಲಾಖೆ’ಯ ಆಗ್ರಾದ ಮಾಜಿ ಅಧಿಕಾರಿ ಡಾ. ಡಿ.ವಿ. ಶರ್ಮಾ ಇವರು ವೀರ ಛಾವೆಲಿ ಟಿಲಾಗಾಗಿ ಈ ಭಾಗದಲ್ಲಿ ಉತ್ಖಲನ ಮಾಡಿದ್ದರು. ಉತ್ಖಲನದ ಸಮಯದಲ್ಲಿ ಅವರಿಗೆ ಸರಸ್ವತಿ ಮತ್ತು ಜೈನ ಶಿಲ್ಪದ ಮೂರ್ತಿಗಳು ಸಿಕ್ಕಿದ್ದವು. ಈ ಆಧಾರದಲ್ಲಿ ಡಾ. ಶರ್ಮಾ ಇವರು ‘ಫತೆಹಪುರ್ ಸಿಕ್ರಿ ನ್ಯೂ ಡಿಸ್ಕವರಿ’ಯ ‘ಪುರಾತತ್ವ’ ಹೆಸರಿನ ಪುಸ್ತಕ ಬರೆದಿದ್ದಾರೆ. ಜಾಮಾ ಮಸೀದ ಇದು ಹಿಂದೂ ಸ್ತಂಬಗಳ ಮೇಲೆ ಕಟ್ಟಿರುವುದಾಗಿ ಪುಸ್ತಕದ ಪುಟ ಸಂಖ್ಯೆ ೮೬ ರಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.