ಆಭರಣಗಳನ್ನು ಪೆಟ್ಟಿಗೆಯಲ್ಲಿಡುವುದರಿಂದ ಅರಿವಾದ ಅಂಶಗಳು

ಆಭರಣಗಳನ್ನು ಪೆಟ್ಟಿಗೆಯಲ್ಲಿ ಇಟ್ಟ ಮೇಲೆ ನನ್ನ ಶರೀರದ ಮೇಲೆ ಅವುಗಳ ಪರಿಣಾಮವಾಗತೊಡಗಿತು ಆಭರಣಗಳನ್ನು ಪೆಟ್ಟಿಗೆಯಲ್ಲಿಟ್ಟಿದ್ದರಿಂದ ಅವುಗಳಲ್ಲಿರುವ ಕಪ್ಪು ಶಕ್ತಿಯು ಕಡಿಮೆಯಾಯಿತು ಮತ್ತು ಅವುಗಳ ಪರಿಣಾಮವು ಆಭರಣಗಳನ್ನು ಧರಿಸುವ ಸ್ಥಳಗಳ ಮೇಲೆಯೂ ಆಗತೊಡಗಿತು, ಅಲ್ಲದೇ ಶರೀರದ ಇತರ ಭಾಗಗಳಲ್ಲಿಯೂ ಆಧ್ಯಾತ್ಮಿಕ ಉಪಚಾರವಾಗುತ್ತಿರುವುದರ ಅರಿವಾಯಿತು. (ಇತರ ಸಮಯದಲ್ಲಿ ಆಭರಣಗಳನ್ನು ತೆಗೆದು ಪೆಟ್ಟಿಗೆ ಯಲ್ಲಿಡದೆ ಹೊರಗಿಡುತ್ತಿದ್ದಾಗ ನನ್ನ ಮೇಲಿರುವ ಕಪ್ಪು ಶಕ್ತಿಯ ಆವರಣದಲ್ಲಿ ಹೆಚ್ಚಳವಾಗಿ ತೊಂದರೆಯು ಹೆಚ್ಚಾಗುವುದರ ಅರಿವಾಗುತ್ತಿತ್ತು.)

ಬೆಂಡೋಲೆಗಳು (ಕಿವಿಗಳಲ್ಲಿ ಧರಿಸುವ ಆಭರಣ)

೧. ಬೆಂಡೋಲೆಗಳನ್ನು ಪೆಟ್ಟಿಗೆಯಲ್ಲಿಡುವಾಗ ನನಗೆ ಬೆಂಡೋಲೆಗಳ ಮೇಲೆ ಬಂದಿರುವ ಕಪ್ಪು ಶಕ್ತಿಯ ಆವರಣವು ಕಾಣಿಸಿತು ಮತ್ತು ನನ್ನ ತಲೆಯ ನರಗಳು ಬಿಗಿಗೊಂಡವು ಮತ್ತು ಸ್ವಲ್ಪ ಸಮಯ ಬಿಗಿಯಾಗಿಯೇ ಇದ್ದವು.

೨. ಅನಾಹತಚಕ್ರದ ಸ್ಥಳದಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಗಿ ಅಲ್ಲಿ ಆಧ್ಯಾತ್ಮಿಕ ಉಪಚಾರವಾಗುತ್ತಿರುವುದರ ಅರಿವಾಯಿತು. ಹಾಗೆಯೇ ಗಂಟಲಿನಲ್ಲಿ ಮತ್ತು ಬೆನ್ನೆಲುಬುಗಳಲ್ಲಿ ಹಗುರವೆನಿಸಿತು.

೩. ಪೆಟ್ಟಿಗೆಯಲ್ಲಿನ ಪ್ರಕಾಶವು ಬೆಂಡೋಲೆಗಳ ಸುತ್ತಲೂ ಹೊಗೆಯ ರೂಪದಲ್ಲಿ ಗೋಲಾಕಾರವಾಗಿ ತಿರುಗುತ್ತಿರುವುದರ ಮತ್ತು ಅವುಗಳ ಎಲ್ಲ ರಂಧ್ರಗಳಲ್ಲಿ ಹರಡುತ್ತಿರುವುದರ ಅರಿವಾಯಿತು. ಇದರಿಂದ ಬೆಂಡೋಲೆಗಳಲ್ಲಿನ ಕಪ್ಪು ಶಕ್ತಿಯು ನಾಶವಾಗುತ್ತಿತ್ತು.

ಚಿನ್ನದ ಸರ (ಕೊರಳಿನಲ್ಲಿ ಧರಿಸುವ ಆಭರಣ)

೧. ಚಿನ್ನದ ಸರವನ್ನು ಕುತ್ತಿಗೆಯಿಂದ ತೆಗೆದ ಮೇಲೆ ನನಗೆ ಅದರ ಮೇಲೆ ಅಲ್ಲಲ್ಲಿ ಕಪ್ಪು ಶಕ್ತಿಯ ಆವರಣವು ಬಂದಿರುವುದು ಕಾಣಿಸಿತು.

೨. ಚಿನ್ನದ ಸರವನ್ನು ಪೆಟ್ಟಿಗೆಯಲ್ಲಿಡುವ ವಿಚಾರವು ನನ್ನ ಮನಸ್ಸಿನಲ್ಲಿ ಬಂದಾಗ ‘ಪೆಟ್ಟಿಗೆಯ ಒಂದು ಬದಿಯಲ್ಲಿಟ್ಟಿರುವ ಸರದ ಕಡೆಗೆ ಪೆಟ್ಟಿಗೆಯಲ್ಲಿನ ಒಳ್ಳೆಯ ಶಕ್ತಿಯು ಹರಡಿ ಸರದಲ್ಲಿನ ಕಪ್ಪು ಶಕ್ತಿಯು ನಾಶವಾಗುತ್ತಿದೆ’ ಎಂದು ಅರಿವಾಯಿತು.

೩. ಚಿನ್ನದ ಸರವನ್ನು ಪೆಟ್ಟಿಗೆಯಲ್ಲಿಡುವಾಗ ನನ್ನ ಉಸಿರಾಟವು ಸರಾಗವಾಗಿ ಆಗತೊಡಗಿತು ಮತ್ತು ಅನಾಹತಚಕ್ರದಲ್ಲಿ ಉಪಚಾರವಾಗುತ್ತಿರುವುದರ ಅರಿವಾಯಿತು. ಸರವನ್ನು ಹಾಕಿ ಕೊಳ್ಳುವ ಸ್ಥಳದಲ್ಲಿರುವ ಕಪ್ಪು ಶಕ್ತಿಯು ಕಡಿಮೆಯಾಗುತ್ತಿರುವುದರ ಅರಿವಾಗಿ ಅಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಯಿತು.

೪. ಅನಾಹತಚಕ್ರದಿಂದ ಕಪ್ಪು ಶಕ್ತಿಯು ಕಪ್ಪು ಮೋಡಗಳ ರೂಪದಲ್ಲಿ ಹೊರಗೆ ಹೋಗುತ್ತಿರುವುದರ ಅರಿವಾಯಿತು. ಶರೀರ ದಲ್ಲಿನ ಜೀವಕೋಶಗಳಲ್ಲಿನ ಕಪ್ಪು ಶಕ್ತಿಯು ಕಡಿಮೆ ಯಾದುದರಿಂದ ಬಿಗಿ ಗೊಂಡಿದ್ದ ಜೀವಕೋಶಗಳು ಸಡಿಲವಾದವು, ಇದರಿಂದ ನನಗೆ ಆಯಾಸವಾಗತೊಡಗಿತು; ಅಲ್ಲದೇ ಶರೀರವು ನೋಯಿಸ ತೊಡಗಿತು. ಶರೀರದಲ್ಲಿನ ಎಲುಬುಗಳ ಮೇಲೆಯೂ ಪರಿಣಾಮ ವಾಗುತ್ತಿರುವುದರಿಂದ ಹೀಗಾಗುತ್ತಿದೆ ಎಂದು ಅರಿವಾಯಿತು.

೫. ಮನಸ್ಸಿನಲ್ಲಿರುವ ವಿಚಾರಗಳು ಕಡಿಮೆಯಾಗಿ ಮನಸ್ಸು ಶುದ್ಧವಾಗುತ್ತಿದೆ ಎಂದು ಅರಿವಾಯಿತು.

ಉಂಗುರ

ಉಂಗುರವನ್ನು ಪೆಟ್ಟಿಗೆಯಲ್ಲಿಡುವಾಗ ಉಂಗುರದ ಸುತ್ತಲೂ ಕಪ್ಪು ಶಕ್ತಿಯ ಆವರಣವು ಕಾಣಿಸಿತು ಮತ್ತು ಪೆಟ್ಟಿಗೆಯು ಬಿಳಿ ಪ್ರಕಾಶದಿಂದ ತುಂಬಿಕೊಂಡಿರುವುದು ಕಾಣಿಸಿತು. ಆಗ ಉಂಗುರವನ್ನು ಬಿಳಿ ಪ್ರಕಾಶದಲ್ಲಿ ಮುಳುಗಿಸಿದಂತೆ ಆಯಿತು ಮತ್ತು ಅದು ಬಿಳಿ ಪ್ರಕಾಶದ ರೂಪದಲ್ಲಿರುವ ದೈವೀ ಶಕ್ತಿಯಿಂದ ತುಂಬುತ್ತಿರುವುದರ ಅರಿವಾಯಿತು. ಆ ಸಮಯ ದಲ್ಲಿ ನನ್ನ ತಲೆಯ ಮೇಲಿನ ನರಗಳು ಬಿಗಿಗೊಂಡವು ಮತ್ತು ಮೂಗಿನ ಮೇಲಿದ್ದ ಒತ್ತಡವು ಕಡಿಮೆಯಾಗಿ ನನ್ನ ಉಸಿರಾಟವು ಸರಾಗವಾಗಿ ಆಗತೊಡಗಿತು. ಹೊಟ್ಟೆಯ ಎರಡೂ ಬದಿಗಳಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಗತೊಡಗಿತು. ನನಗೆ ತೊಂದರೆ ಕೊಡುವ ಮಾಂತ್ರಿಕನ ಶಕ್ತಿಯ ಪ್ರಭಾವ ಕಡಿಮೆಯಾಗುತ್ತಿರುವುದರ ಅರಿವಾಯಿತು. ಉಂಗುರವನ್ನು ಪೆಟ್ಟಿಗೆಯಲ್ಲಿ ಟ್ಟಾಗ ತಲೆಯ ಮೇಲೆ ಒಂದು ರೀತಿಯ ಶೀತಲತೆಯ ಅರಿವಾಗತೊಡಗಿತು.

– ಕು. ರಜನಿ (ಸನಾತನ ನಿರ್ಮಿತ ಗ್ರಂಥ ‘ಸ್ತ್ರೀ-ಪುರುಷರ ಆಭರಣಗಳು’)