ಗಾಜಿನ ಬಳೆಗಳ ಲಾಭಗಳು
ಅ. ‘ಬಳೆಗಳಿಂದ ನಿರ್ಮಾಣವಾಗುವ ನಾದಲಹರಿ ಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ-ಶಸ್ತ್ರಾಸ್ತ್ರಗಳ ಮೂಲಕ (ಮಾರಕ ಶಕ್ತಿಯ ಮೂಲಕ) ಇಂದ್ರಿಯಗಳ ರಕ್ಷಣೆಯಾಗಿ ಆಯಾ ಇಂದ್ರಿಯಗಳ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.’
ಆ. ಬಳೆಗಳಿಂದ ಸ್ತ್ರೀಯರಲ್ಲಿರುವ ಕ್ರಿಯಾಶಕ್ತಿಯು ಜಾಗೃತವಾಗಿ ಸ್ತ್ರೀಯರ ದೇಹಕೋಶಗಳ ಶುದ್ಧಿಯಾಗುತ್ತದೆ, ಕೆಟ್ಟ ಶಕ್ತಿಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ ಮತ್ತು ವಾಸ್ತುಶುದ್ಧಿಯಾಗುತ್ತದೆ.
ಇ. ಬಳೆಗಳ ಚಲನವಲನದಿಂದ ರಜೋಗುಣವು ನಿರ್ಮಾಣವಾಗುತ್ತದೆ. ಈ ರಜೋಗುಣವು ಸ್ತ್ರೀಯರ ದೇಹದಲ್ಲಿನ ಆದಿಶಕ್ತಿಯ ತತ್ತ್ವವನ್ನು ಕಾರ್ಯ ನಿರತಗೊಳಿಸಲು ಪೂರಕವಾಗಿರುತ್ತದೆ. ಬಳೆಗಳಲ್ಲಿ ರುವ ಕ್ರಿಯಾಲಹರಿಗಳು ಒಂದಾಗುವುದರಿಂದ ಅವು ಕ್ರಿಯಾಶಕ್ತಿಯ ಲಹರಿಗಳಿಂದ ತುಂಬಿಕೊಳ್ಳುತ್ತವೆ.
ಈ. ಜಾಗೃತವಾದ ಶಕ್ತಿತತ್ತ್ವದಿಂದ ಸ್ತ್ರೀಯರ ಪ್ರಾಣಮಯ ಮತ್ತು ಮನೋಮಯ ಕೋಶಗಳ ಶುದ್ಧಿಯಾಗಲು ಸಹಾಯವಾಗುತ್ತದೆ.
ಉ. ಕ್ರಿಯಾಶಕ್ತಿಯ ಲಹರಿಗಳು ದೇಹಕ್ಕೆ ಸ್ಪರ್ಶವಾಗುವುದರಿಂದ ಜೀವದ ಸೂರ್ಯನಾಡಿಯು ಕಾರ್ಯನಿರತವಾಗಿ ಶಕ್ತಿಲಹರಿಗಳು ವಾಯು ಮಂಡಲದಲ್ಲಿ ಪ್ರಕ್ಷೇಪಿಸುತ್ತವೆ.
ಊ. ಬಳೆಗಳಿಂದ ಪ್ರಕ್ಷೇಪಿತವಾಗುವ ಕ್ರಿಯಾಶಕ್ತಿಯ ಲಹರಿಗಳಿಂದ ಜೀವದ ಸುತ್ತಲೂ ರಜೋಲಹರಿಗಳ ಗತಿಮಾನ ಕವಚವು ನಿರ್ಮಾಣವಾಗುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆಯಾಗುತ್ತದೆ.
ಋ. ಆದಿಶಕ್ತಿಯ ಲಹರಿಗಳು ವಾಸ್ತುವಿನಲ್ಲಿ ಹರಡುವುದರಿಂದ ವಾಸ್ತುವಿನಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾಸ್ತುವಿನ ಶುದ್ಧಿಯಾಗುತ್ತದೆ, ಇದರಿಂದಾಗಿ ಬಳೆಗಳ ಆಘಾತದಾಯಕ ನಾದಕ್ಕೆ ಕೆಟ್ಟ ಶಕ್ತಿಗಳು ಹೆದರುತ್ತವೆ.
ನಾದವನ್ನು ನಿರ್ಮಿಸುವ ಬಳೆಗಳಿಂದ ಮೇಲಿನ ಲಾಭಗಳಾಗುತ್ತವೆ. ಆದುದರಿಂದ ನಾದ ಲಹರಿಗಳನ್ನು ನಿರ್ಮಾಣ ಮಾಡದಿರುವ ಪ್ಲಾಸ್ಟಿಕ್ ಬಳೆಗಳನ್ನು ಉಪಯೋಗಿಸಬಾರದು.
(ಆಧಾರ : ಸನಾತನ ನಿರ್ಮಿತ ‘ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು’ (ಆಭರಣಗಳ ಬಗೆಗಿನ ಶಾಸ್ತ್ರ ಮತ್ತು ಸೂಕ್ಷ್ಮದಲ್ಲಿನ ಪ್ರಯೋಗ !)
ಉಂಗುರದ ಉಪಯೋಗ
ಸಂರಕ್ಷಣೆ : ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ.
ಅ. ಉಂಗುರವು ಬೆರಳುಗಳನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸುತ್ತದೆ.
ಆ. ಅಭಿಮಂತ್ರಿಸಿದ ಉಂಗುರವನ್ನು ಬೆರಳಿನಲ್ಲಿ ಧರಿಸುವುದರಿಂದ ಪಿಶಾಚಿಗಳ ಬಾಧೆಯಾಗುವುದಿಲ್ಲ.
ಕಾಲ್ಗೆಜ್ಜೆಗಳ ಮಹತ್ವ ಮತ್ತು ಲಾಭಗಳು
ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲುಗಳ ರಕ್ಷಣೆಯಾಗುತ್ತದೆ
ಅ. ‘ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿತವಾಗುತ್ತವೆ. ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ತೇಜತತ್ತ್ವ ಮತ್ತು ಸಾತ್ತ್ವಿಕ ನಾದಲಹರಿಗಳಿಂದಾಗಿ, ಪಾತಾಳ ಮತ್ತು ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲ್ಗೆಜ್ಜೆಗಳನ್ನು ಧರಿಸುವ ಜೀವದ ರಕ್ಷಣೆಯಾಗುತ್ತದೆ.’ – ಕು. ಮಧುರಾ ಭೋಸಲೆ
ಆ. ‘ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ನಾದದಿಂದ ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ಈಶ್ವರೀ ತತ್ತ್ವವು ಸ್ತ್ರೀಯರೆಡೆಗೆ ಆಕರ್ಷಿತವಾಗುತ್ತದೆ. ಇದರಿಂದ ಪಾತಾಳದಿಂದಾಗುವ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಸ್ತ್ರೀಯರ ರಕ್ಷಣೆಯಾಗಲು ಸಹಾಯವಾಗುತ್ತದೆ.’
– ಶ್ರೀ. ನಿಷಾದ ದೇಶಮುಖ