ಆಭರಣಗಳ ಮಹತ್ವ

೧.  ‘ಆಭರಣ’ ಎಂಬ ಶಬ್ದದ ಉತ್ಪತ್ತಿ ಮತ್ತು ಅರ್ಥ

ಆಭರಣವೆಂದರೆ ಆಭೂಷಣ. ‘ಆಭೂಷಣ’ ಶಬ್ದಕ್ಕೆ ಸಂಬಂಧಿಸಿದ ‘ಆಭರಣ’ ಎಂಬ ಶಬ್ದವು ‘ಭೃ’ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು’ ಎಂದಾಗಿದೆ.

ಋಗ್ವೇದಕ್ಕನುಸಾರ : ಋಗ್ವೇದದಲ್ಲಿ ‘ಆಭೂಷಣ’ ಎಂಬ ಶಬ್ದವನ್ನು ‘ಶಕ್ತಿದಾತ್ರಿ (ಶಕ್ತಿದಾಯಕ) ವಸ್ತುವನ್ನು ತರುವುದು’ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ.

ಅಥರ್ವವೇದಕ್ಕನುಸಾರ : ಅಥರ್ವವೇದದಲ್ಲಿ ‘ಆಭೂಷಣ’ ಎಂಬ ಶಬ್ದವನ್ನು ಮಂತ್ರಸಾಮರ್ಥ್ಯ ಅಥವಾ ಮಂತ್ರಶಕ್ತಿಯಿಂದ ತುಂಬಿದ ವಸ್ತು ಎಂಬ ಅರ್ಥದಲ್ಲಿ  ನೀಡಲಾಗಿದೆ. ಈಶ್ವರನು ಮನುಷ್ಯನಿಗೆ ನೀಡಿದ ಸ್ಥೂಲರೂಪವನ್ನು ಹೊರಗಿನಿಂದ ಅಲಂಕರಿಸುವ ಮಾಧ್ಯಮವೆಂದರೆ ಆಭರಣ. ತೇಜದ ಸಗುಣ ಕಲಾತ್ಮಕ ದರ್ಶನವೆಂದರೆ ಆಭರಣ.