ನವದೆಹಲಿ – ಚುನಾವಣೆ ಬಾಂಡ್ ವ್ಯವಸ್ಥೆ ಸರಿಯಾಗಿ ತಿಳಿದುಕೊಳ್ಳಬೇಕು. ಈಗ ಬಾಂಡ್ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ; ಆದರೆ ಚುನಾವಣೆ ನಡೆಯುತ್ತಿದೆ. ಖರ್ಚು ಕೂಡ ಬೃಹತ್ ಪ್ರಮಾಣದಲ್ಲಿ ಆಗುತ್ತಿದೆ. ಇದೆಲ್ಲಾ ಹೇಗೆ ಸಾಧ್ಯ ? ಕಪ್ಪು ಹಣ ಬಿಟ್ಟರೆ ಇದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ. ಯಾವುದೇ ಪರ್ಯಾಯ ನೀಡುವ ಮೊದಲೇ ಚುನಾವಣೆಯ ಬಾಂಡ್ ಪರ್ಯಾಯ ನಿಂತಿದೆ. ಮುಂದೊಂದು ದಿನ ಸರ್ವೋಚ್ಚ ನ್ಯಾಯಾಲಯ ಇದರ ಕುರಿತು ಪುನರ್ವಿಚಾರ ಮಾಡಬೇಕಾಗುತ್ತದೆ ಎಂದು, ಕೇಂದ್ರ ಗೃಹ ಸಚಿವ ಅಮಿತ ಶಾ ಅವರು, ಒಂದು ಹಿಂದಿ ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಚುನಾವಣೆ ಎಲೆಕ್ಟ್ರೋ ಬಾಂಡ್ ಸರ್ವೋಚ್ಚ ನ್ಯಾಯಾಲಯವು ರದ್ದಪಡಿಸಿದ ಪ್ರಶ್ನೆಯ ಬಗ್ಗೆ ಉತ್ತರ ನೀಡಿದರು .
Interview to @ABPNews. Watch live! https://t.co/Gak2XEbTGs
— Amit Shah (Modi Ka Parivar) (@AmitShah) April 30, 2024
೧. ಒಂದು ದೇಶ ಒಂದು ಚುನಾವಣೆ ಈ ನೀತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ೬೦ ರ ದಶಕದವರೆಗೆ ಒಂದು ದೇಶ, ಒಂದು ಚುನಾವಣೆ ನೀತಿ ಅಸ್ತಿತ್ವದಲ್ಲಿ ಇತ್ತು. ಇಂದಿರಾ ಗಾಂಧಿ ಅವರು ಸಾಮೂಹಿಕವಾಗಿ ವಿರೋಧಕರ ಸರಕಾರಗಳನ್ನು ಕೆಡವಿದರು. ಅಂದಿನಿಂದ ಚುನಾವಣೆಯ ವೇಳಾಪಟ್ಟಿ ಬದಲಾಯಿತು. ಈಗ ಕಾನೂನು ರೂಪಿಸಿ ಈ ಚುನಾವಣೆಗಳನ್ನು ಒಟ್ಟಾಗಿ ನಡೆಸುವುದು ಅವಶ್ಯಕತೆ ಇದೆ . ೫ ವರ್ಷದಲ್ಲಿ ರಾಜಕೀಯ ಪಕ್ಷಗಳು ಒಮ್ಮೆಯಾದರೂ ಜನರೆದುರು ಹೋಗುತ್ತಾರೆ, ಜನರು ಒಮ್ಮೆಯಾದರೂ ಮತದಾನ ಮಾಡುತ್ತಾರೆ ಮತ್ತು ಯಾರಿಗೆ ಬಹುಮತ ಸಿಗುವುದೋ ಅವರು ಸರಕಾರ ರಚಿಸುತ್ತಾರೆ. ಇದರಲ್ಲಿ ಅಡಚಣೆ ಏನಿದೆ ? ಎಂದು ಶಾ ಪ್ರಶ್ನಿಸಿದರು.
೨. ಶಾ ಮಾತು ಮುಂದುವರೆಸಿ, ಯಾರ ಅಧಿಕಾರದ ಅವಧಿ ಬಾಕಿ ಉಳಿದಿದೆ, ಅದನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಹೊಸ ಸರಕಾರ.೨೦೨೯ ವರೆಗೆ ಇರುವುದು, ಅದರ ನಂತರ ಎಲ್ಲಾ ಚುನಾವಣೆಯನ್ನು ಒಟ್ಟಿಗೆ ನಡೆಸಲಾಗುವುದು ಮತ್ತು ಮುಂದಿನ ೫ ವರ್ಷಕ್ಕಾಗಿ ಸರಕಾರ ಕಾಯಂ ಇರುವುದು. ಈ ಅವಧಿಯಲ್ಲಿ ಚುನಾಯಿತ ಸರಕಾರವನ್ನು ಯಾರು ಬೀಳಿಸುವುದಿಲ್ಲ ಎಂದರು.