|
ನವ ದೆಹಲಿ – ಪಂಜಾಬಿ ಗಾಯಕ ಸಿದ್ದು ಮೂಸೇವಾಲಾ ಹತ್ಯೆಯ ಪ್ರಕಾರಣದ ಮುಖ್ಯ ಆರೋಪಿ ಸತಿಂದರಜಿತ್ ಸಿಂಹ ಅಲಿಯಾಸ್ ಗೋಲ್ಡಿ ಬ್ರಾರ್ ಇವನನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಹತ್ಯೆಯ ಹೊಣೆಯನ್ನು ಆತನ ಪ್ರತಿಸ್ಪರ್ಧಿ ತಂಡದ ಡಲ್ಲಾ-ಲಖಬೀರನು ಹೊತ್ತಿಕೊಮಡಿದ್ದಾನೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಾರ್ತೆ ಪ್ರಸಾರವಾಗಿದ್ದರೂ ಕೂಡ ಇಲ್ಲಿಯವರೆಗೆ ಸರಕಾರಿ ಮಟ್ಟದಲ್ಲಿ ಅಧಿಕೃತ ಹೇಳಿಕೆ ಬಂದಿಲ್ಲ.
ಗೋಲ್ಡಿ ಬ್ರಾರ್ ಇವನು ಲಾರೆನ್ಸ್ ಗುಂಪಿನ ಕುಖ್ಯಾತ ರೌಡಿಯಾಗಿದ್ದನು. ಸಿದ್ದು ಮೋಸೆವಾಲಾ ಹತ್ಯಾಕಾಂಡದಲ್ಲಿನ ಮುಖ್ಯ ಶಂಕಿತ ಆರೋಪಿ ಎಂದು ಪಂಜಾಬ್ ಪೊಲೀಸರು ಹಾಗೂ ಇತರ ರಾಜ್ಯದ ಪೊಲೀಸರಿಗೆ ಅವನು ಬೇಕಾಗಿದ್ದನು. ಗೊಲ್ಡೀಯನ್ನು ಕೇಂದ್ರ ಸರಕಾರವು ಖಲಿಸ್ತಾನಿ ಭಯೋತ್ಪಾದಕನೆಂದು ಘೋಷಿಸಿದ್ದರು. ಆತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಬಾಬರ ಖಾಲ್ಸಾ’ದೊಂದಿಗೆ ಸಂಬಂಧ ಹೊಂದಿದ್ದ. ಆತ ಅನೇಕ ಹತ್ಯೆ, ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ ಮತ್ತು ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿ ಆಗಿದ್ದನು.
#Khalistaniterrorist Goldy Brar killed in #USA ; yet to be confirmed by official agencies#GoldyBrar is the main accused in the Sidhu Moosewala murder
Dalla-Lakhbir of his rival gang are said to have claimed responsibility for the murder
गोल्डी बरार l #LawrenceBishnoi
Video… pic.twitter.com/RTmDLXK2jU
— Sanatan Prabhat (@SanatanPrabhat) May 1, 2024