ಸ್ವಾಮಿ ಕೈಲಾಶಾನಂದ ಮಹಾರಾಜರಿಂದ ದೀಕ್ಷೆ ಪಡೆದ ಸ್ಟೀವ್ ಜಾಬ್ಸ್ ಅವರ ಪತ್ನಿ !

  • ಹೆಸರು ಕಮಲಾ, ಗೋತ್ರ ಅಚ್ಯುತ !

  • ಜೀವನಪರ್ಯಂತ ಕೊರಳಲ್ಲಿ ರುದ್ರಾಕ್ಷಿಯ ಮಾಲೆ ಧರಿಸುವ ಸಂಕಲ್ಪ!

ಪ್ರಯಾಗರಾಜ್ – ಮಕರ ಸಂಕ್ರಾಂತಿಯ ದಿನದಂದು, ವಿಶ್ವಪ್ರಸಿದ್ಧ ಕಂಪನಿ ‘ಆಪಲ್’ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಇವರು ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಶ್ರೀ ನಿರಂಜನಿ ಅಖಾಡದ ಪೀಠಾಧೀಶ್ವರ ಸ್ವಾಮಿ ಕೈಲಾಶಾನಂದರಿಂದ ವಿಧಿವತ್ತಾಗಿ ದೀಕ್ಷೆ ಪಡೆದರು. ಇದಾದ ನಂತರ, ಅವರಿಗೆ ಕಮಲಾ ಎಂಬ ಹೆಸರನ್ನು ನೀಡಿ ಅಚ್ಯುತ ಗೋತ್ರವನ್ನು ನೀಡಲಾಯಿತು. ದೀಕ್ಷೆ ಪಡೆದ 61 ವರ್ಷದ ಕಮಲಾ ತನ್ನ ಕುತ್ತಿಗೆಗೆ ರುದ್ರಾಕ್ಷಿ ಮಣಿಗಳ ಜಪಮಾಲೆಯನ್ನು ಧರಿಸಿ ಅದನ್ನು ತನ್ನ ಜೀವನದುದ್ದಕ್ಕೂ ಧರಿಸಲು ನಿರ್ಧರಿಸಿದರು.

ಹುಷಾರಿಲ್ಲದ ಕಾರಣ ಸಂಗಮ ಸ್ನಾನ ಮಾಡಲಿಲ್ಲ !

ಕಮಲಾ ಅವರ ಆರೋಗ್ಯ ಸರಿಯಿಲ್ಲದ ಕಾರಣ ಮಕರ ಸಂಕ್ರಾಂತಿಯ ದಿನದಂದು ನಡೆದ ಮೊದಲ ಅಮೃತ ಸ್ನಾನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ, ಸ್ವಾಮಿ ಕೈಲಾಶಾನಂದರು ತ್ರಿವೇಣಿ ಸಂಗಮದ ನೀರನ್ನು ಅವರ ಮೇಲೆ ಸಿಂಪಡಿಸಿ ಅದರ ಮಹತ್ವವನ್ನು ತಿಳಿಸಿದರು. ಅವರು ಜನವರಿ 10 ರಂದು ಮಹಾಕುಂಭ ಉತ್ಸವಕ್ಕಾಗಿ ಆಗಮಿಸಿದ್ದರು. ಅವರು ಜನವರಿ 16 ರಂದು ಅಮೆರಿಕಕ್ಕೆ ಹಿಂತಿರುಗಲಿದ್ದಾರೆ.