Mahakumbh Mela 2025 : ಮೂರನೇ ದಿನವೂ ಸಂಗಮ ಸ್ನಾನಕ್ಕೆ ಭಕ್ತರ ದಂಡು !

ಪ್ರಯಾಗರಾಜ್ – ಮಹಾ ಕುಂಭ ಮೇಳ ಪ್ರಾರಂಭವಾದಾಗಿನಿಂದಲೇ ಜನವರಿ 15 ರಂದು ಅಂದರೆ ಮೂರನೇ ದಿನವೂ ದೇಶ-ವಿದೇಶಗಳಿಂದ ಭಕ್ತರು ಸಂಗಮದಲ್ಲಿ ಸ್ನಾನ ಮಾಡಲು ಸಾಲುಗಟ್ಟಿ ನಿಂತಿದ್ದರು. ೧೪೪ ವರ್ಷಗಳ ನಂತರ ಬಂದ ಈ ಮಹಾಕುಂಭ ಮೇಳವು ಪುಷ್ಯ ಹುಣ್ಣಿಮೆಯಂದು, ಅಂದರೆ ಜನವರಿ ೧೩ ರಂದು ಪ್ರಾರಂಭವಾಯಿತು. ಮೊದಲ ಅಮೃತ ಸ್ನಾನದಲ್ಲಿ 1.5 ಕೋಟಿ ಜನರು ಹಾಗೂ ಜನವರಿ 14 ರಂದು 3.5 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರು. ಈ ಮಹಾ ಕುಂಭ ಮೇಳವು ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವಾಗಿದೆ.