Kumbha IIT Sadhu : ಕುಂಭ ಕ್ಷೇತ್ರದಲ್ಲಿ ಯುವ ಸಾಧು-ಸಾಧ್ವಿಗಳ ದರ್ಶನ

ಪ್ರಯಾಗರಾಜ್ ಕುಂಭ ಮೇಳ 2025

ಐಐಟಿಯ ಅಭಯ ಸಿಂಗ್ ಇವರಿಂದ ಸನ್ಯಾಸಿ ದೀಕ್ಷೆ !

ಕುಂಭನಗರಿ ಪ್ರಯಾಗರಾಜ್ – ಮಹಾಕುಂಭ ನಗರಕ್ಕೆ ಹೆಚ್ಚಿನ ಸಂಖ್ಯೆಯ ಸಾಧು-ಸಂತರು ಆಗಮಿಸಿದ್ದಾರೆ. ಈ ಸಾಧುಗಳಲ್ಲಿ ಕೆಲವು ಯುವ ಸಾಧುಗಳು ಮತ್ತು ಸಾಧ್ವಿಗಳು ಸೇರಿದ್ದಾರೆ. ಅವರು ಯುವ ವಯಸ್ಸಿನಲ್ಲಿಯೇ ಲೌಕಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಅನುಸರಿಸಿದರು. ಈ ಸಾಧು-ಸಾಧ್ವಿಗಳು ಉನ್ನತ ಶಿಕ್ಷಣ ಪಡೆದಿದ್ದಾರೆ ಮತ್ತು ಪ್ರಸ್ತುತ ದೀಕ್ಷೆ ಪಡೆದು ಆಧ್ಯಾತ್ಮಿಕತೆಯನ್ನು ಅನುಸರಿಸುತ್ತಿದ್ದಾರೆ.

ಐಐಟಿ ಮುಂಬಯಿಯ ಮಾಜಿ ವಿದ್ಯಾರ್ಥಿ ಮತ್ತು ಅಲ್ಲಿನ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಅಭಯ ಸಿಂಗ್ ಅವರನ್ನು ಕುಂಭ ಕ್ಷೇತ್ರದಲ್ಲಿ ‘ಎಂಜಿನಿಯರ್ ಬಾಬಾ’ ಎಂದು ಕರೆಯಲಾಗುತ್ತದೆ. ಅವರು ತಮ್ಮ ವೈಜ್ಞಾನಿಕ ಜ್ಞಾನವನ್ನು ಬಳಸಿಕೊಂಡು, ವಿವಿಧ ರೇಖಾಚಿತ್ರಗಳು ಮತ್ತು ಮಾಹಿತಿಯ ಮೂಲಕ, ‘ಆಧ್ಯಾತ್ಮಿಕತೆ ಮತ್ತು ವಿಜ್ಞಾನವು ಹೇಗೆ ಸಂಬಂಧಿಸಿದೆ?’ ಎಂದು ವಿವರಿಸುತ್ತಾರೆ. ವಿಜ್ಞಾನವು ಕೇವಲ ಭೌತಿಕ ವಿಷಯಗಳ ಬಗ್ಗೆ ಹೇಳುತ್ತದೆ; ಆದರೆ ಅದನ್ನು ಆಳವಾಗಿ ಅಧ್ಯಯನ ಮಾಡಿದರೆ, ಅದು ಆಧ್ಯಾತ್ಮದ ಕಡೆಗೆ ಕರೆದೊಯ್ಯುತ್ತದೆ’, ಎಂದು ಅಭಯ ಸಿಂಗ್ ಹೇಳಿದರು.