Ayurveda Doctor Murdered : ನದೀಮ ಪಾಷಾ, ನೂರ ಪಾಷಾ ಮತ್ತು ಮೊಹಮ್ಮದ ಗೌಸ್ ಈ ಮೂವರು 45 ಲಕ್ಷ ರೂಪಾಯಿಗಾಗಿ ಕೊಲೆ ಮಾಡಿದ್ದರು

ಬೆಂಗಳೂರುನಲ್ಲಿ ಮುಸ್ಲಿಮರು ಹಿಂದೂ ವೈದ್ಯನ ಹತ್ಯೆ ಮಾಡಿರುವುದು 7 ತಿಂಗಳ ಬಳಿಕ ಸತ್ಯ ಬಯಲು

ಸಾಂಧರ್ಭಿಕ ಚಿತ್ರ

ಬೆಂಗಳೂರು – ಇಲ್ಲಿನ ಆಯುರ್ವೇದ ವೈದ್ಯ ಆನಂದ ಅವರನ್ನು ನದೀಮ ಪಾಷಾ, ನೂರ ಪಾಷಾ ಮತ್ತು ಮೊಹಮ್ಮದ ಗೌಸ್ ಕೊಲೆ ಮಾಡಿದ್ದಾರೆ. ಮಹಮ್ಮದ್ ಗೌಸ್ ಬಣ್ಣ ಹಚ್ಚುವ ನೆಪದಲ್ಲಿ ವೈದ್ಯರ ಮನೆಯನ್ನು ಪ್ರವೇಶಿಸಿದ್ದನು. ವೈದ್ಯರ ಮನೆಯನ್ನು ಮಾರಾಟ ಮಾಡುವ ನೆಪದಲ್ಲಿ ಅವನು ವೈದ್ಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದನು ಮತ್ತು ಮನೆಯನ್ನು ತನ್ನ ಹೆಸರಿಗೆ ನೋಂದಾಯಿಸಿದ ನಂತರ ವೈದ್ಯನ ಕೊಲೆ ಮಾಡಿದ್ದನು. ಇದಾದ ನಂತರ, ಮಹಮ್ಮದ ಗೌಸ್ ವೈದ್ಯರ ಮನೆಯನ್ನು ಕೆಡವಿದನು. ಅವನಿಗೆ ನಾದಿಮ್ ಪಾಷಾ ಮತ್ತು ನೂರ್ ಪಾಷಾ ಸಹಾಯ ಮಾಡಿದರು.

1. ಡಾ. ಆನಂದ ನಾಪತ್ತೆಯಾದಾಗ, ಅವರ ಚಿಕ್ಕಪ್ಪ ಅವರನ್ನು ವಿಚಾರಿಸಿದರು; ಆದರೆ ಅವರಿಗೆ ಯಾವುದೇ ಸುಳಿವು ಸಿಗಲಿಲ್ಲ. ಪೊಲೀಸರು 7 ತಿಂಗಳಿನಿಂದ ಆನಂದ ಇವರನ್ನು ಹುಡುಕುತ್ತಿದ್ದರು.

2. ಫೋನ್ ದಾಖಲೆಗಳ ಆಧಾರದ ಮೇಲೆ, ಪೊಲೀಸರಿಗೆ ಮೊಹಮ್ಮದ ಗೌಸ್ ಮೇಲೆ ಸಂಶಯ ಬಂದಿತು. ಇದಾದ ನಂತರ, ಆತನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂತು ಮತ್ತು 45 ಲಕ್ಷ ರೂಪಾಯಿಗಳ ಪ್ರಕರಣ ಬಯಲಾಯಿತು.

3. ಮಹಮ್ಮದ್ ಗೌಸ್, ವೈದ್ಯರ ಶವವನ್ನು ನದಿಗೆ ಎಸೆದಿದ್ದನು ಮತ್ತು ಪೊಲೀಸರು ಅದನ್ನು ಅನಾಥ ಶವ ಎಂದು ಪರಿಗಣಿಸಿ ಅಂತ್ಯಸಂಸ್ಕಾರ ಮಾಡಿದ್ದರು ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಅಂತಹ ಜನರಿಗೆ ಆದಷ್ಟು ಬೇಗ ಗಲ್ಲುಶಿಕ್ಷೆಯಾಗಲು ತ್ವರಿತ ನ್ಯಾಯಾಲಯದಲ್ಲಿ ಪ್ರಕರಣ ನಡೆಸಬೇಕು !