ಇಮ್ರಾನ ತುರ್ಕಿ ಸಂಭಲ್‌ನಲ್ಲಿನ ವಕ್ಫ್ ಅಭಿವೃದ್ಧಿ ನಿಗಮದ ನಿರ್ದೇಶಕ !
ಸಂಭಲ್ (ಉತ್ತರ ಪ್ರದೇಶ) – ‘ವಕ್ಫ್ ಬೋರ್ಡ್’ನ ಹೆಸರಿನಲ್ಲಿ ಭೂಮಿಯನ್ನು ಅತಿಕ್ರಮಿಸಿ ವಶಪಡಿಸಿಕೊಂಡವರಿಂದ ಪ್ರತಿಯೊಂದು ಇಂಚು ಭೂಮಿಯನ್ನು ವಾಪಸ್ಸು ಪಡೆಯಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇತ್ತೀಚೆಗೆ ಹೇಳಿದ್ದರು. ‘ವಕ್ಫ್ ಬೋರ್ಡ್ ‘ಭೂ ಮಾಫಿಯಾ ಬೋರ್ಡ್’ಯಾಗಿ ಮಾರ್ಪಟ್ಟಿದೆ ಎಂದು ಅವರು ಆರೋಪಿಸಿದ್ದರು. ಈ ಹೇಳಿಕೆಯನ್ನು ರಾಜ್ಯದ ಸಂಭಲ್‌ನಲ್ಲಿರುವ ವಕ್ಫ್ ಅಭಿವೃದ್ಧಿ ನಿಗಮದ ನಿರ್ದೇಶಕ ಇಮ್ರಾನ ತುರ್ಕಿ ಬೆಂಬಲಿಸಿದ್ದಾರೆ.
ಇಮ್ರಾನ ತುರ್ಕಿ ಹೇಳಿದರು,
1. ಯೋಗಿ ಆದಿತ್ಯನಾಥ ಅವರ ಹೇಳಿಕೆ ಸಂಪೂರ್ಣವಾಗಿ ಸತ್ಯವಾಗಿದೆ. ಉತ್ತರ ಪ್ರದೇಶದಲ್ಲಿ ವಕ್ಫ್ ಅಂದಾಜಿನ ಪ್ರಕಾರ 35 ಸಾವಿರ ಆಸ್ತಿಗಳಿದ್ದು, ಅವುಗಳಲ್ಲಿ ಶೇ. 80 ರಿಂದ 85 ರಷ್ಟು ಆಸ್ತಿಗಳನ್ನು ಜನರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ. ಇದನ್ನು ಸಹಿಸಲಾಗುವುದಿಲ್ಲ.
2. ಉತ್ತರ ಪ್ರದೇಶದಲ್ಲಿ ನೂರಾರು ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ; ಆದರೆ ಜನರು ವಕ್ಫ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನಂತರ ಅದನ್ನು ಖರೀದಿ-ಮಾರಾಟ ಮಾಡಿದರೆ, ಖರೀದಿದಾರ ಮತ್ತು ಮಾರಾಟಗಾರ ಇಬ್ಬರನ್ನೂ ಜೈಲಿಗೆ ಕಳುಹಿಸಲಾಗುತ್ತದೆ.
3. ಸಂಭಲ್‌ನಲ್ಲೂ ಇದೇ ರೀತಿಯ ಅತಿಕ್ರಮಣ ನಡೆಯುತ್ತಿದೆ, ಅಲ್ಲಿ ಜನರು ವಕ್ಫ್ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಅತಿಕ್ರಮಣಗಳು ಎಲ್ಲೆಡೆ ನಡೆಯುತ್ತಿವೆ ಮತ್ತು ನಮ್ಮ ಸರಕಾರ ಈ ಅತಿಕ್ರಮಣಗಳನ್ನು ತೆಗೆದುಹಾಕಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಕ್ಫ್ ಭೂಮಿಯ ಮೇಲೆ ಯಾವುದೇ ಪರಿಸ್ಥಿತಿಯಲ್ಲೂ ನಿಯಂತ್ರಣವನ್ನು ಅನುಮತಿಸಲಾಗುವುದಿಲ್ಲ. ಇದು ಸರಕಾರದ ಗುರಿ ಮತ್ತು ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.