India Map Distorted Compliant Filed ‘ಗರೀಬ ನವಾಜ ಮೊಯಿನುದ್ದೀನ ಚಿಶ್ತಿ ಸಮಿತಿ’ ವಿರುದ್ಧ ದೂರು !

  • ಭಿತ್ತಿಪತ್ರಕದಲ್ಲಿನ ಭಾರತದ ಲಾಂಛನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್ ಅನ್ನು ಬೇರ್ಪಡಿಸಿದೆ !

  • ಭಾರತದ ವಿಭಜನೆಗೆ ಪ್ರಚೋದನಕಾರಿ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ಆರೋಪ !

ಮುಂಬಯಿ – ಠಾಣೆ ಪೊಲೀಸರು ‘ಗರೀಬ ನವಾಜ ಮೊಯಿನುದ್ದೀನ ಚಿಶ್ತಿ ಸಮಿತಿ’ ವಿರುದ್ಧ ದೂರು ದಾಖಲಿಸಿದ್ದಾರೆ. ಸಮಿತಿಯು ನಗರದಲ್ಲಿ ಹಾಕಿರುವ ಭಿತ್ತಿಪತ್ರಕದಲ್ಲಿ, ಭಾರತೀಯ ನಕಾಶೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್ ಅನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಈ ಎರಡೂ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ. ಈ ಘಟನೆ ಜನವರಿ 5 ರ ಭಾನುವಾರದಂದು ನಡೆದಿದೆ. ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಭಾರತವನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ. ಭಾರತದ ವಿಭಜನೆಗಾಗಿ ಒಂದು ಪ್ರಚೋದನಕಾರಿ ಕೃತ್ಯ ಎಸಗಿದ್ದಾರೆ. ಇದು ಒಗ್ಗಟ್ಟಿಗೆ ಧಕ್ಕೆ ತರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

1. ಭಿತ್ತಿಪತ್ರಕದಲ್ಲಿ ನವಾಜ ಮೊಯಿನುದ್ದೀನ ಚಿಶ್ತಿ ಅವರನ್ನು ‘ಹಿಂದೂಸ್ತಾನದ ರಾಜ’ ಎಂದು ಹೇಳಲಾಗಿತ್ತು. ಅದರ ಮೇಲೆ ಮಸೀದಿಯ ಚಿತ್ರವಿದ್ದು, ಅದರ ಮೇಲೆ ಭಾರತದ ರಾಷ್ಟ್ರಧ್ವಜ ಇರುವಂತೆ ಕಾಣಿಸುತ್ತದೆ.

2. ಚಿಶ್ತಿ ಸಮಿತಿಯು ‘ಸರಕಾರ ಗರೀಬ ನವಾಜ’ ಮತ್ತು ‘ಸರಕಾರ ಮುಲಾನ ವಾಲೆ ಬಾಬಾ’ ಇವರ ಉರುಸ್ (ಮುಸ್ಲಿಂ ಕಾರ್ಯಕ್ರಮಗಳು) ಸಂದರ್ಭದಲ್ಲಿ ಈ ಭಿತ್ತಿಪತ್ರಕವನ್ನು ಹಚ್ಚಿತ್ತು.

ಸಂಪಾದಕೀಯ ನಿಲುವು

ಲಾಂಛನದ ಮಾಧ್ಯಮದಿಂದ ಉದ್ದೇಶಪೂರ್ವಕವಾಗಿ ಭಾರತವನ್ನು ಅವಮಾನಿಸುವವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು! ಇಂತಹ ಭಾರತದ್ವೇಷಿ ಸಮಿತಿಯನ್ನು ಏಕೆ ನಿಷೇಧಿಸಬಾರದು ?