Mahakumbh Anti Drone System : ಮೊದಲ ಅಮೃತ ಸ್ನಾನದ ದಿನದಂದು, ಡ್ರೋನ್ ವಿರೋಧಿ ವ್ಯವಸ್ಥೆಯು 6 ಡ್ರೋನ್‌ಗಳನ್ನು ಹೊಡೆದುರುಳಿಸಿತು !

ಪ್ರಯಾಗರಾಜ್ – ಮೊದಲ ಅಮೃತ ಸ್ನಾನದ ದಿನದಂದು, ಡ್ರೋನ್ ವಿರೋಧಿ ವ್ಯವಸ್ಥೆಯು 6 ಡ್ರೋನ್‌ಗಳನ್ನು ಹೊಡೆದುರುಳಿಸಿತು. ಈ ಎಲ್ಲಾ ಡ್ರೋನ್‌ಗಳನ್ನು ಪೊಲೀಸರಿಂದ ಯಾವುದೇ ಪೂರ್ವಾನುಮತಿ ಇಲ್ಲದೆ ಹಾರಿಸಲಾಗುತ್ತಿತ್ತು. ಮಹಾ ಕುಂಭಮೇಳದಲ್ಲಿ ಭದ್ರತಾ ಕಾರಣಗಳಿಗಾಗಿ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ. ಕುಂಭಕ್ಷೇತ್ರದಲ್ಲಿ 3 ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಇವುಗಳಲ್ಲಿ 2 ಆರ್.ಎಫ್. (ಆಧುನಿಕ ವ್ಯವಸ್ಥೆ) ಆಧಾರಿತವಾಗಿದ್ದು, ಉಳಿದ 1 ರಾಡಾರ್ ಆಧಾರಿತ ವ್ಯವಸ್ಥೆಯಾಗಿದೆ. ಆರ್.ಎಫ್. ಡ್ರೋನ್ ವ್ಯವಸ್ಥೆಯು 8 ಕಿ.ಮೀ.ಗಳ ವರೆಗೆ ಅಕ್ರಮ ಡ್ರೋನ್‌ಗಳನ್ನು ಪತ್ತೆಹಚ್ಚಿ 2 ಕಿ.ಮೀ. ದೂರದ ವರೆಗೆ ಸಿಗ್ನಲ್‌ಅನ್ನು ತಡೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ರಡಾರ್ ಆಧರಿತ ಡ್ರೋನ್ 15 ಕಿ.ಮೀ ವರೆಗೆ ಅಕ್ರಮ ಡ್ರೋನ್ಅನ್ನು ಪತ್ತೆ ಮಾಡಿ 3 ಕಿ.ಮೀ. ವರೆಗಿನ ಸುತ್ತಮುತ್ತಲಿನ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೂ ಮೊದಲು ಕುಂಭ ಕ್ಷೇತ್ರಲ್ಲಿ 3 ಅಕ್ರಮ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು, ಮತ್ತು ಈಗ ನಿಷ್ಕ್ರಿಯಗೊಳಿಸಲಾದ ಡ್ರೋನ್‌ಗಳ ಸಂಖ್ಯೆ 9 ಕ್ಕೆ ತಲುಪಿದೆ.