ಮಹಾಕುಂಭಮೇಳದಲ್ಲಿ ನಾನು ಕೊಲೆಯಾಗಬಹುದು ! – ಮಹಂತ ಯತಿ ನರಸಿಂಹಾನಂದಗಿರಿ
ಪ್ರಯಾಗರಾಜ್, ಜನವರಿ 14 (ಸುದ್ದಿ) – ಜುನಾ ಅಖಾಡಾದ ಮಹಾಮಂಡಲೇಶ್ವರ ಮತ್ತು ಡಾಸನಾದೇವಿ ದೇವಾಲಯಗಳ ಅಧ್ಯಕ್ಷ ಮಹಂತ ಯತಿ ನರಸಿಂಹಾನಂದಗಿರಿ ಅವರ ಶಿಬಿರಕ್ಕೆ ಪ್ರವೇಶಿಸಿದ್ದ ಮತಾಂಧ ಮುಸಲ್ಮಾನನನ್ನು ಪೊಲೀಸರು ಬಂಧಿಸಿದ್ದಾರೆ. ಅವನ ಹೆಸರು ಅಯೂಬ್ ಆಗಿದ್ದೂ ಅವನು ಮಹಂತ ಯತಿ ನರಸಿಂಹಾನಂದಗಿರಿಯ ಡೇರೆಯ ಹೊರಗೆ ನಿಂತಿದ್ದ. ಸುತ್ತಮುತ್ತಲಿನ ಸನ್ಯಾಸಿಗಳು ಅನುಮಾನಗೊಂಡು ಅವನನ್ನು ಪ್ರಶ್ನಿಸಿದರು. ಮೊದಲು ಆತ ತನ್ನ ಹೆಸರು ಆಯುಷ್ ಎಂದು ಹೇಳಿದನು; ಆದರೆ ನಂತರ ಅವನ ನಿಜವಾದ ಹೆಸರು ಅಯೂಬ್ ಎಂದು ಅರಿವಿಗೆ ಬಂದಿತು.
ಈ ಬಗ್ಗೆ ಅಯೂಬ್ ನನ್ನು ಕೇಳಿದಾಗ, ನಾನು ಇಲ್ಲಿಗೆ ತಿರುಗಾಡಲು ಬಂದಿದ್ದೇ. ಯಾರೂ ನನ್ನನ್ನು ಇಲ್ಲಿಗೆ ಕಳುಹಿಸಿಲ್ಲ. ನನ್ನ ಹೆಸರು ಅಯೂಬ್ ಅಲಿ ಮತ್ತು ನಾನು ಎಟಾ ಜಿಲ್ಲೆಯ (ಉತ್ತರ ಪ್ರದೇಶ) ಅಲಿಗಂಜ್‌ನಲ್ಲಿ ವಾಸಿಸುತ್ತಿದ್ದೇನೆ. ನನಗೆ ಇಲ್ಲಿಗೆ ಬರಲು ಅನುಮತಿ ಇಲ್ಲ ಎಂದು ನನಗೆ ತಿಳಿದಿರಲಿಲ್ಲ’, ಎಂದು ಹೇಳಿದನು. (ಮಹಾಕುಂಭಮೇಳದಲ್ಲಿ 10 ಸಾವಿರಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳು, ಹಾಗೆಯೇ 12 ಸಾವಿರಕ್ಕೂ ಹೆಚ್ಚು ಶಿಬಿರಗಳು ಮತ್ತು ಲಕ್ಷಾಂತರ ಹಿಂದೂಗಳು ಇದ್ದಾಗ, ಅಯೂಬ್ ಮಹಂತ ಯತಿ ನರಸಿಂಹಾನಂದಗಿರಿಜಿಯವರ ಶಿಬಿರವನ್ನು ಹೇಗೆ ತಲುಪಿದ, ಎಂಬುದರ ಕುರಿತು ಹಿಂದೂಗಳು ಮತ್ತು ಉತ್ತರ ಪ್ರದೇಶ ಸರರ್ಕಾಕಾರ ಯೋಚಿಸಬೇಕು ! – ಸಂಪಾದಕರು)
ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಿಂದೂಗಳಿಗೆ ಅಪಾಯ ! – ಮಹಂತ ಯತಿ ನರಸಿಂಹಾನಂದಗಿರಿ
ಸುದ್ದಿಗಾರರೊಂದಿಗೆ ಮಾತನಾಡಿದ ಮಹಂತ ಯತಿ ನರಸಿಂಹಾನಂದಗಿರಿಜಿ ಇವರು, ಮುಸ್ಲಿಮರ ಸಂಖ್ಯೆಯಲ್ಲಿನ ಹೆಚ್ಚಳವು ಹಿಂದೂಗಳಿಗೆ ಅಪಾಯವನ್ನುಂಟುಮಾಡಿದೆ. ಮಹಾಕುಂಭಮೇಳದಲ್ಲಿ ನನ್ನ ಕೊಲೆಯಾಗಬಹುದು. ಕೊಲೆಗೆ ಸಂಚು ರೂಪಿಸಲಾಗಿದೆ. ಗಾಜಿಯಾಬಾದ್‌ನ ಡಾಸನಾ ದೇವಸ್ಥಾನದ ಹೊರಗೆ 10 ಸಾವಿರಕ್ಕೂ ಹೆಚ್ಚು ಮುಸ್ಲಿಮರ ಗುಂಪೊಂದು ನನ್ನ ಮೇಲೆ ದಾಳಿ ಮಾಡಿತ್ತು. ನನ್ನನ್ನು ಕೊಲ್ಲಲು ರೇಖಿಯನ್ನು ನಿರಂತರವಾಗಿ ಬಳಸಲಾಗುತ್ತಿದೆ. ಬೆಂಗಳೂರಿನ ಜುಬೈರ್ ನನಗೆ ಈ ಹಿಂದೆ ಬೆದರಿಕೆ ಹಾಕಿದ್ದ. ಅವನು ಈ ಹಿಂದೆಯೂ ದೇವಾಲಯದ ಮೇಲೆ ದಾಳಿ ಮಾಡಿದ್ದಾನೆ. ಆ ಬಗ್ಗೆ ಪ್ರಕರಣ ಬಾಕಿ ಇದೆ. ನನ್ನ ಶಿಬಿರದಲ್ಲಿ ನಡೆದ ಘಟನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ನಾನು ಪೊಲೀಸ್ ಉಪ ಮಹಾನಿರೀಕ್ಷಕ ವೈಭವ ಕೃಷ್ಣ ಅವರಿಗೆ ನೀಡಿದ್ದೇನೆ’, ಎಂದು ಹೇಳಿದರು.