ಮಹಾ ಕುಂಭ ಮೇಳದ ಬಗ್ಗೆ ಪಾಕಿಸ್ತಾನ ಸೇರಿದಂತೆ ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚಿದ ಕುತೂಹಲ !

ಪ್ರಯಾಗರಾಜ್ – ಇತ್ತೀಚೆಗೆ ಮಹಾ ಕುಂಭ ಮೇಳದ ಬಗ್ಗೆ ಪಾಕಿಸ್ತಾನ ಸೇರಿದಂತೆ ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚಿದ ಕುತೂಹಲ ಕಂಡುಬಂದಿದೆ. ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ಮಹಾಕುಂಭಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಲ್ಲಿ ವ್ಯಾಪಕವಾಗಿ ಹುಡುಕಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ನಂತರ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್‌ನಂತಹ ದೇಶಗಳು ಸಹ ಮಹಾಕುಂಭದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ.

ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ಪ್ರಾರಂಭವಾಗಿದ್ದು, ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಬ್ರೆಜಿಲ್, ಜರ್ಮನಿ, ಜಪಾನ್, ಇಂಗ್ಲೆಂಡ್, ಅಮೆರಿಕ ಮತ್ತು ಸ್ಪೇನ್‌ನಂತಹ ದೇಶಗಳಿಂದ ಭಕ್ತರು ಪ್ರಯಾಗರಾಜ್‌ಗೆ ಬರುತ್ತಿದ್ದಾರೆ. ಮಹಾಕುಂಭದಲ್ಲಿ ಅಂತರರಾಷ್ಟ್ರೀಯ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ಜಾಗತಿಕ ಮಟ್ಟದಲ್ಲಿ ಸನಾತನ ಸಂಸ್ಕೃತಿ ಮತ್ತು ಭಾರತೀಯ ಆಧ್ಯಾತ್ಮಿಕ ಪರಂಪರೆಗಳ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ.