ಪಾಂಟುನ ಸೇತುವೆಯ ಹಠಾತ್ ಮುಚ್ಚಿದ್ದರಿಂದ ನಾಗರಿಕರು ಮತ್ತು ಪೊಲೀಸರ ನಡುವೆ ವಾಗ್ವಾದ

ಪ್ರಯಾಗರಾಜ್ ಕುಂಭಮೇಳ 2025

ಪಾಂಟುನ ಸೇತುವೆ ಇದ್ದಕ್ಕಿದ್ದಂತೆ ಮುಚ್ಚಿದ್ದರಿಂದ ಭಕ್ತರಿ ಅಡಚಣೆ !

(ಪಾಂಟುನ್ ಸೇತುವೆ ಎಂದರೆ ತಾತ್ಕಾಲಿಕವಾಗಿ ನಿರ್ಮಿಸಲಾದ ಸೇತುವೆ)

ಪ್ರಯಾಗರಾಜ್, ಜನವರಿ 14 (ಸುದ್ದಿ) – ಭದ್ರತಾ ಕಾರಣಗಳಿಂದಾಗಿ ಮಹಾಕುಂಭದ ಸಮಯದಲ್ಲಿ ಪಾಂಟುನ್ ಸೇತುವೆಗಳನ್ನು ಇದ್ದಕ್ಕಿದ್ದಂತೆ ಮುಚ್ಚಲಾಗುತ್ತಿದೆ. ಸೇತುವೆ ಹಠಾತ್ತನೆ ಮುಚ್ಚಲ್ಪಟ್ಟ ಕಾರಣ, ಆ ಮಾರ್ಗದಲ್ಲಿ ಹಾದುಹೋಗುವ ಭಕ್ತರು ಬೇರೆ ಮಾರ್ಗಗಳನ್ನು ಬಳಸಬೇಕಾಗಿದೆ. ಇನ್ನೂ ಅನೇಕ ಭಕ್ತರು ಪ್ರಯಾಗರಾಜ್‌ಗೆ ಬರುತ್ತಿದ್ದಾರೆ. ಭಕ್ತರ ಬಳಿ ಬ್ಯಾಗ್‌ಗಳು, ಚೀಲಗಳು ಮುಂತಾದ ಹೆಚ್ಚುವರಿ ಸಾಮಗ್ರಿಗಳು ಇರುವುದರಿಂದ, ಇತರ ಮಾರ್ಗಗಳಲ್ಲಿ ಹೋಗುವಾಗ ಭಕ್ತರು ಆ ಎಲ್ಲಾ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗಬೇಕಾಗುತ್ತದೆ. ಹೆಚ್ಚಿನ ಜನಸಂದಣಿ ಇರುವುದರಿಂದ, ಅದರ ಮೂಲಕ ಸಾಮಗ್ರಿಗಳನ್ನು ಸಾಗಿಸುವುದು ಕಷ್ಟಕರವಾಗುತ್ತಿದೆ. ಅವರಲ್ಲಿ ವಯಸ್ಸಾದವರು ಇದ್ದರೆ, ಅವರು ತುಂಬಾ ಬಳಲುತ್ತಿದ್ದಾರೆ. ಒಂದು ಪಾಂಟುನ್ ಸೇತುವೆಯನ್ನು ಮುಚ್ಚಿದಾಗ, ಸೇತುವೆಯ ಎರಡೂ ತುದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಾರೆ ಮತ್ತು ಪಾಂಟುನ್ ಸೇತುವೆಯನ್ನು ಮುಚ್ಚಲಾಗುತ್ತಿದೆ ಎಂದು ಘೋಷಣೆ ಮಾಡಲಾಗುತ್ತದೆ, ಜೊತೆಗೆ ಯಾವ ಪರ್ಯಾಯ ಸೇತುವೆಯನ್ನು ಬಳಸಬೇಕೆಂಬ ಸೂಚನೆಗಳನ್ನು ನೀಡಲಾಗುತ್ತದೆ. ಆದರೂ ಜನಸಂದಣಿಯ ನಡುವೆ ನಾಗರಿಕರು ಬಹಳ ದೂರ ನಡೆದುಕೊಂಡು ಹೋಗಬೇಕಾಗಿರುವುದರಿಂದ ಪೊಲೀಸರು ಮತ್ತು ನಾಗರಿಕರ ನಡುವೆ ವಾಗ್ವಾದಗಳು ನಡೆಯುತ್ತವೆ.