(ಎನ್‌ಸಿಸಿ ಎಂದರೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್)

ಪ್ರಯಾಗರಾಜ್, ಜನವರಿ 15 (ಸುದ್ದಿ.) – ಜನವರಿ 14 ರಂದು ನಡೆದ ಅಮೃತ ಸ್ನಾನಕ್ಕಾಗಿ ಕೋಟ್ಯಂತರ ಭಕ್ತರು ಕುಂಭ ಕ್ಷೇತ್ರಕ್ಕೆ ಬಂದಿದ್ದರು. ಅನೇಕ ಭಕ್ತರು ಮತ್ತು ಸಾಧು-ಸಂತರು ಅಮೃತದಲ್ಲಿ ಸ್ನಾನ ಮಾಡಿ ಹೋಗುತ್ತಿದ್ದಾರೆ. ಆದ್ದರಿಂದ, ಸಂಚಾರ ಪೊಲೀಸರ ಮೇಲೆ ವಿಪರೀತ ಒತ್ತಡವಿದೆ. ಆದ್ದರಿಂದ, ಪ್ರಯಾಗರಾಜ್‌ನ ವಿವಿಧ ಕಾಲೇಜುಗಳ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕುಂಭ ಕ್ಷೇತ್ರದಲ್ಲಿ ಸಂಚಾರ ನಿಯಂತ್ರಿಸಲು ಕಾರ್ಯ ನಿರ್ವಹಿಸುತ್ತಿದೆ. ಕುಂಭ ಕ್ಷೇತ್ರ ಚೆಕ್‌ಪೋಸ್ಟ್‌ಗಳಲ್ಲಿ ಸಂಚಾರ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಲ್ಲಿನ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ. ಸಂಚಾರ ನಿಯಂತ್ರಣದ ಜೊತೆಗೆ ಬರುವ ಮತ್ತು ಹೋಗುವ ಭಕ್ತರಿಗೆ ದಾರಿ ತೋರಿಸುವ, ವೃದ್ಧ ಭಕ್ತರಿಗೆ ವಾಹನಗಳನ್ನು ಒದಗಿಸಲು ಸಹಾಯ ಮಾಡುವುದು ಮತ್ತು ದಾರಿ ತಪ್ಪಿದ ಭಕ್ತರನ್ನು ಸಂಬಂಧಿತ ವ್ಯವಸ್ಥೆಗಳಿಗೆ ಸಂಪರ್ಕಿಸುವಂತಹ ಕೆಲಸಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಫೆಬ್ರವರಿ 26 ರವರೆಗೆ ಕುಂಭಕ್ಷೇತ್ರದಲ್ಲಿ ಸಂಚಾರ ನಿಯಂತ್ರಣ ಸೇವೆಯಲ್ಲಿ ಕಾರ್ಯ ಮಾಡಲಿದ್ದಾರೆ.
ಹೀಗಿದೆ ಕುಂಭ ಪ್ರದೇಶದಲ್ಲಿನ ಭದ್ರತಾ ವ್ಯವಸ್ಥೆ !
ಪ್ರಸ್ತುತ, ಕುಂಭಕ್ಷೇತ್ರದಲ್ಲಿ 37 ಸಾವಿರ ಪೊಲೀಸರು ಮತ್ತು 14 ಸಾವಿರ ಗೃಹರಕ್ಷಕ ದಳದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಂಭ ಕ್ಷೇತ್ರದಲ್ಲಿ 2 ಸಾವಿರದ 750 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕುಂಭಕ್ಷೇತ್ರದಲ್ಲಿ 3 ಜಲ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ, ಜೊತೆಗೆ 18 ಜಲ ಪೊಲೀಸ್ ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಗಂಗಾನದಿಯಲ್ಲಿ ಸ್ನಾನ ಮಾಡುವಾಗ ಭಕ್ತರಿಗೆ ಯಾವುದೇ ತೊಂದರೆಗಳು ಎದುರಾದರೆ ಅಥವಾ ಯಾವುದೇ ಅನಾಹುತ ಸಂಭವಿಸಿದರೆ, ಭಕ್ತರನ್ನು ರಕ್ಷಿಸಲು ಜಲ ಪೊಲೀಸರು ಅಗತ್ಯವಿರುವ ಯಾವುದೇ ಸಹಾಯವನ್ನು ನೀಡುತ್ತಾರೆ. ಜನಸಂದಣಿಯನ್ನು ನಿಯಂತ್ರಿಸಲು 50 ಕಾವಲು ಗೋಪುರಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ 50 ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗಿದೆ.