59 ಲಕ್ಷ ರೂಪಾಯಿ ನಗದು, 8 ತೊಲ ಚಿನ್ನವೂ ಕದ್ದ !
ಮೆರಟ್ (ಉತ್ತರ ಪ್ರದೇಶ) – ಇಲ್ಲಿನ ಕಿಥೋರ್ ಪ್ರದೇಶದ ಹಳ್ಳಿಯೊಂದರಲ್ಲಿ ರಶೀದ್ ಖಾನ್ ಎಂಬುವನು ಬ್ಲಾಕ್ ಮ್ಯಾಜಿಕ್ ಮಾಡಿ 17 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯನ್ನು ವಶೀಕರಿಸಿ ಅಪಹರಣ ಮಾಡಿದ್ದಾನೆಂದು ಆರೋಪಿಸಲಾಗಿದೆ. ಗ್ರಾಮಸ್ಥರು ಮತ್ತು ಕುಟುಂಬಸ್ಥರ ಹೇಳಿಕೆ ಪ್ರಕಾರ, ರಶೀದ್ ಖಾನ್ ಬ್ಲಾಕ್ ಮ್ಯಾಜಿಕ್ ಮಾಡಿ ಯುವತಿಗೆ ಆಮಿಷ ತೋರಿಸಿ 59 ಲಕ್ಷ ರೂಪಾಯಿ ನಗದು, 8 ತೊಲ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ. ಪೊಲೀಸರು ರಶೀದ್ ನ ಕುಟುಂಬದ 3 ಸದಸ್ಯರನ್ನು ಬಂಧಿಸಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ರಶೀದ್ ಖಾನ್ ಅಪರಾಧ ಪ್ರವೃತ್ತಿಯ ವ್ಯಕ್ತಿಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಅವನು ಕಾರಾಗೃಹದಲ್ಲಿ ಇದ್ದನು. ಅವನು ವಿವಾಹಿತನಾಗಿದ್ದು 6 ಮಕ್ಕಳಿದ್ದಾರೆ. ಗುರ್ಜರ್ ಸಮುದಾಯದ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಗುರ್ಜರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿಡಿ ರಶೀದ್ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಸಂಪಾದಕೀಯ ನಿಲುವು
|