India Bangladesh Border Tension : ಎರಡೂ ದೇಶಗಳು ಪರಸ್ಪರರ ಉಚ್ಚಾಯುಕ್ತರಿಗೆ ಸಮನ್ಸ ಕಳುಹಿಸಿ ಹೇಳಿಕೆ ನೀಡುವಂತೆ ಕೇಳಿದವು !

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಹೇಳಿಕೆಯ ಕಟ್ಟಡಕಾಮಗಾರಿಯ ಪ್ರಕರಣ.

(ಸಮನ್ಸ್ ಎಂದರೆ ನ್ಯಾಯಾಲಯ ಅಥವಾ ಸರಕಾರವು ಸಂಬಂಧಪಟ್ಟ ವ್ಯಕ್ತಿಯನ್ನು ಮಾಹಿತಿ ನೀಡಲು ಕರೆಸುವುದು)

ನವದೆಹಲಿ – ಬಾಂಗ್ಲಾದೇಶವು ಅಲ್ಲಿನ ಭಾರತೀಯ ಉಚ್ಚಾಯುಕ್ತರಾದ ಪ್ರಣಯ ವರ್ಮಾ ರವರಿಗೆ ಸಮನ್ಸ್ ಕಳಿಸಿ ಉತ್ತರ ನೀಡುವಂತೆ ಹೇಳಿದ ನಂತರ, ಭಾರತದ ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶದ ಉಪ ಉಚ್ಚಾಯುಕ್ತರಾಗಿರುವ ನರೂಲ ಇಸ್ಲಾಂ ರವರನ್ನು ಕರೆಸಿ ಸಮನ್ಸ್ ಕಳಿಸಿ ಉತ್ತರ ನೀಡುವಂತೆ ಹೇಳಿದೆ. ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಭದ್ರತಾ ಪಡೆಗಳ ಚಲನವಲನಗಳ ಬಗ್ಗೆ ಬಾಂಗ್ಲಾದೇಶವು ಕಳವಳ ವ್ಯಕ್ತಪಡಿಸಿತ್ತು.

1. ಭಾರತವು ಈ ಗಡಿಯುದ್ದಕ್ಕೂ 5 ಕಡೆಗಳಲ್ಲಿ ಭದ್ರತಾ ಬೇಲಿಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಇದು ಎರಡೂ ದೇಶಗಳ ನಡುವಿನ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಬಾಂಗ್ಲಾದೇಶ ಹೇಳಿದೆ.

2. ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದಲ್ಲಿ ನಡೆದ ಭೇಟಿಯ ಬಳಿಕ, ಭಾರತೀಯ ಉಚ್ಚಾಯುಕ್ತರಾದ ಪ್ರಣಯ ವರ್ಮಾರವರು ಮಾತನಾಡಿ, ಈ ಸಭೆಯಲ್ಲಿ ಕಳ್ಳಸಾಗಣೆ ಮತ್ತು ಅಪರಾಧ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದರು. ಗಡಿಯನ್ನು ಅಪರಾಧ ಮುಕ್ತಗೊಳಿಸುವ ಬಗ್ಗೆ ಚರ್ಚೆ ನಡೆಯಿತು, ಎಂದು ಹೇಳಿದರು.

3. ಬಾಂಗ್ಲಾದೇಶವು ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಚಪೈನವಾಬಗಂಜ, ನೌಗಾಂವ, ಲಾಲಮೊನಿರಹಾಟ ಮತ್ತು 3 ಬಿಘಾ ಕಾರಿಡಾರನಲ್ಲಿ ಗಡಿ ಭದ್ರತಾ ಪಡೆಯ ಕಾಮಗಾರಿಯನ್ನು ಆಕ್ಷೇಪಿಸಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಇಂತಹ ಕೃತ್ಯಗಳು ಭಾರತವನ್ನು ಕೆರಳಿಸುವ ಪ್ರಯತ್ನಗಳಾಗಿವೆ. ಭಾರತವು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಅದು ತಲೆಯ ಮೇಲೆ ಕೂರುವ ಸಾಧ್ಯತೆಯಿದೆ. ಆದುದರಿಂದ ಸಮಯವಿರುವಾಗಲೇ ಬಾಂಗ್ಲಾದೇಶಕ್ಕೆ ಅದರ ಜಾಗವನ್ನು ತೋರಿಸುವುದು ಅವಶ್ಯಕವಾಗಿದೆ !

 ‘ಬಾಂಗ್ಲಾದೇಶವು ತನ್ನ ಗಡಿಯಲ್ಲಿ ಯಾರಿಗೂ ಜಾಗ ಕೊಡುವುದಿಲ್ಲವಂತೆ !’

ಕೆಲವು ದಿನಗಳ ಹಿಂದೆ, ಬಾಂಗ್ಲಾದೇಶದ ಗೃಹ ಸಚಿವಾಲಯದ ಸಭೆ ನಡೆದಿತ್ತು. ಈ ಸಭೆಯ ನಂತರ, ಗೃಹ ಸಚಿವಾಲಯದ ಸಲಹೆಗಾರರಾದ ಲೆಫ್ಟಿನೆಂಟ ಜನರಲ (ಸೇವಾನಿವೃತ್ತ) ಜಹಾಂಗೀರ ಆಲಂ ಚೌಧರಿಯವರು, “ಬಾಂಗ್ಲಾದೇಶವು ತನ್ನ ಗಡಿಯಲ್ಲಿ ಯಾರಿಗೂ ಜಾಗ ನೀಡುವುದಿಲ್ಲ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಶೂನ್ಯ ರೇಖೆಯಿಂದ 150 ಅಡಿ ಒಳಗೆ ಯಾವುದೇ ಮಿಲಿಟರಿ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ್ದರು.
ಬಾಂಗ್ಲಾದೇಶದ ವಿರೋಧದಿಂದಾಗಿ ಭಾರತವು 3 ಜಿಲ್ಲೆಗಳಲ್ಲಿನ 5 ಕಡೆಗಳಲ್ಲಿ ಗಡಿ ಕೆಲಸವನ್ನು ಸ್ಥಗಿತಗೊಳಿಸಬೇಕಾಗಿದೆ.

ಸಂಪಾದಕೀಯ ನಿಲುವು

ಭಾರತದ ಉಪಕಾರದಿಂದಾಗಿ ನಿರ್ಮಾಣವಾಗಿರುವ ದೇಶವು ಇಂದು ಭಾರತದತ್ತ ಕಣ್ಣು ಕೆಕ್ಕರಿಸಿ ನೋಡುತ್ತಿದೆ, ಇದನ್ನು ಭಾರತದ ವೈಫಲ್ಯವೆಂದು ಹೇಳುವುದೇ ? ಈ ಸ್ಥಿತಿಯನ್ನು ಬದಲಾಯಿಸಲು ಭಾರತವು ಕಠೋರವಾಗಬೇಕಾದ ಸಮಯ ಬಂದಿದೆ !