10 Countries In MahaKumbh: 10 ದೇಶಗಳ 21 ಸದಸ್ಯರ ಅಂತಾರಾಷ್ಟ್ರೀಯ ನಿಯೋಗ ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಲಿದೆ !

ಪ್ರಯಾಗರಾಜ್ – 10 ದೇಶಗಳ 21 ಸದಸ್ಯರ ಅಂತಾರಾಷ್ಟ್ರೀಯ ನಿಯೋಗವು ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದೆ. ಈ ಉಪಕ್ರಮವನ್ನು ಭಾರತ ಸರಕಾರದ ವಿದೇಶಾಂಗ ಸಚಿವಾಲಯದ ಪ್ರಚಾರ ಮತ್ತು ಸಾರ್ವಜನಿಕ ರಾಜತಾಂತ್ರಿಕ ಇಲಾಖೆ ಆಯೋಜಿಸಿದೆ. ಈ ನಿಯೋಗವು ಜನವರಿ 15 ರಂದು ಪ್ರಯಾಗರಾಜ್ ತಲುಪಿತು ಮತ್ತು ಅರೈಲ್ ಪ್ರದೇಶದ ಟೆಂಟ್ ಸಿಟಿಯಲ್ಲಿ ವಸತಿ ಕಲ್ಪಿಸಲಾಗಿದೆ. ಸಂಜೆ, ಈ ನಿಯೋಗವು ಕುಂಭ ಕ್ಷೇತ್ರವನ್ನು ಪರಿಶೀಲಿಸಿತು. ಜನವರಿ 16 ರ ಬೆಳಿಗ್ಗೆ, ಎಲ್ಲಾ ಸದಸ್ಯರು ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಈ ನಿಯೋಗದಲ್ಲಿ ಫಿಜಿ, ಫಿನ್ಲ್ಯಾಂಡ್, ಗಯಾನಾ, ಮಲೇಷ್ಯಾ, ಮಾರಿಷಸ್, ಸಿಂಗಾಪುರ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಈ 10 ದೇಶಗಳ ಸದಸ್ಯರು ಇದ್ದಾರೆ.