ಸಾಧಕರಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆಗಳ ಕಾರಣವನ್ನು ಹುಡುಕುವಾಗ ಸೂಕ್ಷ್ಮವನ್ನು ಅರಿಯುವ ಸಾಧಕರಿಗೆ ವಾಸ್ತುವಿನ ಸೂಕ್ಷ್ಮ ಪರೀಕ್ಷಣೆ ಮಾಡಲು, ಹಾಗೆಯೇ ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯ ವಿವಿಧ ಪದ್ಧತಿಗಳನ್ನು ಶೋಧಿಸಲು ಕಲಿಸಿ ಅವರನ್ನು ತಯಾರಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಕಲಿಯುಗದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯ ಬಗ್ಗೆ ಸಮಾಜವು ಅಜ್ಞಾನಿಯಾಗಿದೆ. ನಮ್ಮೆಲ್ಲ ಸಾಧಕರಿಗೂ ಪರಾತ್ಪರ ಗುರು ಡಾ. ಆಠವಲೆಯವರು ಪದೇ ಪದೇ ಮಾರ್ಗದರ್ಶನ ಮಾಡಿರುವುದರಿಂದ ಕೆಟ್ಟ ಶಕ್ತಿಗಳ ಸೂಕ್ಷ್ಮ ಜಗತ್ತಿನ ಬಗ್ಗೆ ತಿಳಿಯಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಸೂಕ್ಷ್ಮ ಜಗತ್ತಿನ ವಿಷಯದ ಅನುಭವವನ್ನು ಈ ಲೇಖನಮಾಲೆಯ ಮೂಲಕ ನಾವು ನೋಡುತ್ತಿದ್ದೇವೆ. ಸನಾತನ ಪ್ರಭಾತದ ೨೫/೩೨ ನೇ ಸಂಚಿಕೆಯಲ್ಲಿ ಇದರ ಸ್ವಲ್ಪ ಭಾಗವನ್ನು ನೋಡಿದೆವು, ಇಂದು ಸೂಕ್ಷ್ಮ ಪರೀಕ್ಷಣೆ, ವಾಸ್ತುಶುದ್ಧಿ ಹಾಗೂ ವಾಹನಶುದ್ಧಿಯ ವಿಷಯವನ್ನು ನೋಡೋಣ. ಸೂಕ್ಷ್ಮ ಪರೀಕ್ಷಣೆ, ವಾಸ್ತುಶುದ್ಧಿ ಹಾಗೂ ವಾಹನಶುದ್ಧಿಯ ವಿಷಯವನ್ನು ನೋಡೋಣ.     

(ಭಾಗ ೪)

  ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/113723.html

 

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಹಾಗೂ ಅವರ ವಾಸ್ತುವಿನ ಪರೀಕ್ಷಣೆ ಕಲಿಸುವುದು 

‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮ ವಿಷಯ ತಿಳಿಯುವ ಸಾಧಕರಿಗೆ ಮುಂದಿನಂತೆ ಹೇಳಿದರು,”ಯಾವುದಾದರೊಬ್ಬ ಸಾಧಕನಿಗೆ ಬಹಳ ತೊಂದರೆಯಿದ್ದರೆ ಅವನು ವಾಸಿಸುವ ವಾಸ್ತುವನ್ನೂ ಪರೀಕ್ಷಣೆ ಮಾಡಿರಿ; ಏಕೆಂದರೆ, ವಾಸ್ತುವಿನಲ್ಲಿ ತೊಂದರೆಯಿದ್ದರೆ, ಅದರ ಪರಿಣಾಮದಿಂದ ಆ ಸಾಧಕನಿಗೆ ತೊಂದರೆಯಾಗಬಹುದು.” ವಾಸ್ತುವಿನಲ್ಲಿರುವ ತೊಂದರೆಯನ್ನು ಅಭ್ಯಾಸ ಮಾಡಲು ನಾನು ಗೋವಾದಲ್ಲಿ ವಾಸಿಸುವ ಅನೇಕ ಸಾಧಕರ ಮನೆಗೆ ಹೋಗಿದ್ದೆ. ಅಲ್ಲಿ ನನಗೆ ವಿವಿಧ ಅನುಭವಗಳು ಬಂದವು. ಪರಾತ್ಪರ ಗುರು ಡಾಕ್ಟರರು, ”ವಾಸ್ತುವಿನಲ್ಲಿ ತೊಂದರೆ ಇದ್ದರೆ ಅದು ಯಾವ ಕಾರಣದಿಂದ ಇದೆ ?’, ಎಂಬುದನ್ನು ಕಂಡುಹಿಡಿಯಿರಿ. ‘ಪೂರ್ವಜರ ತೊಂದರೆಯಿಂದ ವಾಸ್ತುವಿನಲ್ಲಿ ತೊಂದರೆ ಆಗುತ್ತಿದೆಯೇ ಅಥವಾ ಭೂತ, ಪಿಶಾಚಿ, ಮಾಟ-ಮಂತ್ರದಿಂದ ವಾಸ್ತು ಮಲಿನ ವಾಗಿದೆಯೇ’, ಎಂಬುದನ್ನು ಕಂಡು ಹಿಡಿಯಬೇಕು” ಎಂದರು.

೨. ವಾಸ್ತುವಿನಲ್ಲಿ ಒತ್ತಡದ ಅರಿವಾದರೆ ಅದರ ಮೂಲ ಸ್ರೋತವನ್ನು ಕಂಡುಹಿಡಿದು ಅಲ್ಲಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು ಹಾಗೂ ಆಕಾಶತತ್ತ್ವದ ಉಪಾಯವೆಂದು ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಹಾಕಬೇಕು 

ಅನೇಕ ಬಾರಿ ವಾಸ್ತುವಿನಲ್ಲಿ ಹೋದಾಗ ನನಗೆ ಒತ್ತಡದ ಅರಿವಾಗುತ್ತಿತ್ತು. ‘ಅದರ ಮೂಲ ಸ್ರೋತ ಎಲ್ಲಿದೆ ?’, ಎಂಬುದನ್ನು ನಾವು ಕಂಡು ಹಿಡಿಯುತ್ತಿದ್ದೆವು. ವಾಸ್ತುವಿನ ಯಾವುದಾದರೊಂದು ಮೂಲೆಯಲ್ಲಿ ಕೆಟ್ಟ ಶಕ್ತಿಯ ಸ್ಥಾನ ಇರುತ್ತಿತ್ತು. ನಾವು ಸಾಧಕರಿಗೆ ‘ವಾಸ್ತುವಿನ ಆ ಮೂಲೆಯಲ್ಲಿ ಗೋಮೂತ್ರ ಚಿಮುಕಿಸುವುದು, ವಿಭೂತಿ ಊದುವುದು ಅಥವಾ ಯಾವುದಾದರೊಂದು ದೇವತೆಯ ಚಿತ್ರವನ್ನು ಅಲ್ಲಿ ಅಂಟಿಸುವುದು’, ಇಂತಹ ಉಪಾಯಗಳನ್ನು ಹೇಳುತ್ತಿದ್ದೆವು. ಹೀಗೆ ಮಾಡುವುದರಿಂದ ಕೆಲವೊಮ್ಮೆ ತೊಂದರೆ ಹೆಚ್ಚಾಗುತ್ತಿತ್ತು; ಏಕೆಂದರೆ ಕೆಟ್ಟ ಶಕ್ತಿ ಕೋಪಿಸಿಕೊಂಡು ಮನೆಯಲ್ಲಿರುವ ವ್ಯಕ್ತಿಗಳಿಗೆ ಹೆಚ್ಚು ತೊಂದರೆ ಕೊಡುತ್ತಿತ್ತು. ಇಂತಹ ಪ್ರಸಂಗದಲ್ಲಿ ನಾವು ವಾಸ್ತುವಿನಲ್ಲಿ ‘ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ರಚಿಸಿ ಅವರೇ ಹಾಡಿದ ಭಜನೆಗಳನ್ನು ಹಾಕುತ್ತಿದ್ದೆವು ಅಥವಾ ಯಾವುದಾದರೊಂದು ದೇವತೆಯ ನಾಮಜಪ ಹಾಕಿ ಇಡುತ್ತಿದ್ದೆವು. ನಾದದ ಮೂಲಕ ವಾಸ್ತುವಿನಲ್ಲಿ ಆಕಾಶತತ್ತ್ವದ ಉಪಾಯವಾಗುವುದರಿಂದ ವಾಸ್ತುವಿನಲ್ಲಿನ ತೊಂದರೆ ಬೇಗನೆ ಕಡಿಮೆಯಾಗುತ್ತಿತ್ತು.

೩. ಆಕಾಶತತ್ತ್ವದ ಉಪಾಯ ಮಾಡುವ ಪ.ಪೂ. ಭಕ್ತರಾಜ ಮಹಾರಾಜರು ರಚಿಸಿದ ಚೈತನ್ಯಮಯ ಭಜನೆಗಳು !

೩ ಅ. ಪ.ಪೂ. ಭಕ್ತರಾಜ ಮಹಾರಾಜರು ರಚಿಸಿದ ಭಜನೆಗಳ ಚೈತನ್ಯದ ಮಹತ್ವವನ್ನು ತಿಳಿದು ಅವರ ವಾಣಿಯಲ್ಲಿನ ಭಜನೆಗಳನ್ನು ಧ್ವನಿಮುದ್ರಿಸಿಡುವ ದ್ರಷ್ಟಾರ ಗುರು ಪರಾತ್ಪರ ಗುರು ಡಾ. ಆಠವಲೆ ! : ಸುಮಾರು ೨೦೦೧ ರ ನಂತರ ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯ ವೆಂದು ಪ.ಪೂ. ಭಕ್ತರಾಜ ಮಹಾರಾಜರು ರಚಿಸಿದ ಭಜನೆಗಳನ್ನು ಕೇಳುವ ಚೈತನ್ಯಮಯ ಪರಂಪರೆ ನಮ್ಮಲ್ಲಿ ಆರಂಭವಾಯಿತು. ‘ಪ.ಪೂ. ಬಾಬಾರವರ ದೇಹತ್ಯಾಗದ ಮೊದಲೆ ಅವರ ಧ್ವನಿಯಲ್ಲಿನ ಭಜನೆಗಳನ್ನು ಪರಾತ್ಪರ ಗುರು ಡಾಕ್ಟರರು ಕಠಿಣ ಪರಿಶ್ರಮದಿಂದ ಧ್ವನಿಮುದ್ರಣ ಏಕೆ ಮಾಡಿಟ್ಟಿದ್ದರು ?’, ಎಂಬುದರ ಕಾರಣ ನಮಗೆ ಈಗ ತಿಳಿಯಿತು. ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳಲ್ಲಿನ ನಾದಚೈತನ್ಯದ ಪರಿಣಾಮವೆಂದು ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳಿಂದಾಗುವ ತೊಂದರೆ ಕಡಿಮೆಯಾಗಿದೆ.

೩ ಆ. ‘ಪ.ಪೂ. ಭಕ್ತರಾಜ ಮಹಾರಾಜರು ರಚಿಸಿದ ಭಜನೆಗಳು’, ಸಾಧಕರಿಗೆ ಆಧ್ಯಾತ್ಮಿಕ ಆಸ್ತಿ ಆಗಿವೆ ! : ಪ.ಪೂ. ಬಾಬಾರವರ ಭಜನೆಗಳನ್ನು ಧ್ವನಿಮುದ್ರಣ ಮಾಡುವುದೆಂದರೆ ಅದೊಂದು ಈಶ್ವರೀ ಲೀಲೆಯೆ ಆಗಿತ್ತು. ಪ.ಪೂ. ಬಾಬಾರವರ ಭಜನೆಗಳು ನಮ್ಮೆಲ್ಲ ಸಾಧಕರಿಗೆ ಸಾಧನೆಯಲ್ಲಿನ ಆಧಾರಸ್ತಂಭವಾಗಿವೆ. ಪ.ಪೂ. ಬಾಬಾರವರ ಭಜನೆಗಳಲ್ಲಿ ಚೈತನ್ಯ ಇರುವುದರಿಂದ ಸಾಧಕರು ಆ ಭಜನೆಗಳನ್ನು ಕೇಳಿದಾಗ ಅವರಿಗೆ ಸಾಧನೆಯನ್ನು ಮಾಡಲು ಪ್ರೇರಣೆ ಸಿಗುತ್ತದೆ, ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಿಂದ ಕಡಿಮೆಯಾದ ಪ್ರಾಣಶಕ್ತಿಯು ಹೆಚ್ಚಾಗುತ್ತದೆ ಹಾಗೂ ಸಾಧಕರಲ್ಲಿರುವ ಆಯಾಸ ದೂರವಾಗುತ್ತದೆ. ಪ.ಪೂ. ಬಾಬಾರವರ ಭಜನೆ ನಮ್ಮೆಲ್ಲ ಸಾಧಕರಿಗೆ ‘ಮಲ್ಟಿವಿಟಾಮಿನ್‌’ನ (ಅನೇಕ ಜೀವÀಸತ್ತ್ವ) ಡೋಸ್‌ ಆಗಿದೆ. ಇದನ್ನು ಯಾವುದೇ ಆಧುನಿಕ ವೈದ್ಯರು ನಮಗೆ ಕೊಡಲು ಸಾಧ್ಯವಿಲ್ಲ.

ಪರಾತ್ಪರ ಗುರು ಡಾಕ್ಟರ್, ನೀವು ನಮಗೆ ಅನೇಕ ಬಾರಿ ಪ.ಪೂ. ಬಾಬಾರವರ ಭಜನೆಗಳ ಆಧಾರ ನೀಡಿ ಕೆಟ್ಟ ಶಕ್ತಿಗಳ ಹಿಡಿತದಿಂದ ಬಿಡಿಸಿದ್ದೀರಿ. ನಾವೆಲ್ಲ ಸಾಧಕರು ತಮ್ಮ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಕಡಿಮೆಯೆ ಆಗಿದೆ.

೪. ವಾಸ್ತುದೋಷ ದೂರವಾಗಲು ಪರಾತ್ಪರ ಗುರು ಡಾ. ಆಠವಲೆಯವರು ಕಂಡುಹಿಡಿದ ‘ವಾಸ್ತುಛಾವಣಿ’ ಪದ್ಧತಿ !

ಪರಾತ್ಪರ ಗುರು ಡಾಕ್ಟರರು ವಾಸ್ತುದೋಷದ ನಿವಾರಣೆಗಾಗಿ ವಾಸ್ತುವಿನಲ್ಲಿ ದೇವತೆಗಳ ನಾಮಜಪದ ಪಟ್ಟಿಗಳನ್ನು ಹಚ್ಚುವ ಪದ್ಧತಿಯನ್ನು ಆರಂಭಿಸಿದರು. ಇದಕ್ಕೆ ‘ವಾಸ್ತುಛಾವಣಿ’ ಎಂದು ಹೆಸರು ಕೊಡಲಾಯಿತು. ‘ಕೋಣೆಯ ನಾಲ್ಕೂ ಗೋಡೆಗಳ ಮೇಲೆ ಯಾವ ದೇವತೆಗಳ ನಾಮಜಪದ ಪಟ್ಟಿಗಳನ್ನು ಹಚ್ಚಬೇಕು’, ಎಂಬುದನ್ನು ಸೂಕ್ಷ್ಮದಲ್ಲಿ ಅಭ್ಯಾಸ ಮಾಡಿ ನಿರ್ಧರಿಸಲಾಯಿತು. ಸಾಧಕರು ವಾಸಿಸುವ ವಾಸ್ತುಗಳಲ್ಲಿ ವಾಸ್ತುಛಾವಣಿ ಹಚ್ಚಿದಾಗ ಸಾಧಕರ ತೊಂದರೆಗಳು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾದವು.

೫. ವಾಹನಗಳ ಮೂಲಕ ಸಾಧಕರಿಗಾಗುವ ತೊಂದರೆಗಳು ಹಾಗೂ ಪರಾತ್ಪರ ಗುರು ಡಾ. ಆಠವಲೆಯವರು ಕಂಡು ಹಿಡಿದ ‘ವಾಹನಶುದ್ಧಿ’ಯ ಪದ್ಧತಿ ! 

೫ ಅ. ಸಾಧಕರಿಗೆ ಸೇವೆಯನ್ನು ಮಾಡುವಾಗ ವಾಹನಗಳಿಂದ ಅಡಚಣೆ ಬರಬಾರದೆಂದು ವಾಹನಶುದ್ಧಿ ಮಾಡುವ ಉಪಾಯವನ್ನು ಕಂಡು ಹಿಡಿಯುವುದು : ಸಾಧನೆ ಮಾಡುವಾಗ ಸಾಧಕರು ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಸಾಧಕರಿಗೆ ಸೇವೆಗೆ ಹೋಗುವಾಗ ‘ಚತುಶ್ಚಕ್ರ ಅಥವಾ ದ್ವಿಚಕ್ರ ವಾಹನ ಸ್ಥಗಿತವಾಗುವುದು, ವಾಹನದ ಟಯರ್‌ಗಳು ಒಡೆಯುವುದು, ವಾಹನ ಅಪಘಾತದಿಂದ ಕೂದಲೆಳೆ ಅಂತರದಿಂದ ಪಾರಾಗುವುದು’, ಇಂತಹ ಅಡಚಣೆಗಳು ಬರತೊಡಗಿದವು. ನಾವು ಸಾಧಕರಿಗೆ ಶ್ರೀಫಲದಿಂದ ವಾಹನದ ದೃಷ್ಟಿ ತೆಗೆಯುವುದು, ವಾಹನ ನಡೆಸುವ ಮೊದಲು ವಾಹನದಲ್ಲಿ ವಿಭೂತಿ ಊದುವುದು, ವಾಹನದ ಚಕ್ರಗಳಿಗೆ ಗೋಮೂತ್ರ ಸಿಂಪಡಿಸುವುದು, ಇತ್ಯಾದಿ ಉಪಾಯಪದ್ಧತಿಗಳನ್ನು ಹೇಳತೊಡಗಿದೆವು.

೫ ಆ. ವಾಹನಶುದ್ಧಿಗಾಗಿ ವಾಹನದಲ್ಲಿ ದೇವತೆಗಳ ನಾಮಪಟ್ಟಿಗಳ ಮಂಡಲ ಹಾಕುವುದು : ಗುರುದೇವರು ನಮಗೆ, ”ನಾವು ವಾಸ್ತುವಿನಲ್ಲಿ ದೇವತೆಗಳ ನಾಮಜಪದ ಪಟ್ಟಿಗಳ ಛಾವಣಿ ಹಚ್ಚುವಂತೆ ವಾಹನದಲ್ಲಿಯೂ ಹಚ್ಚಬಹುದಲ್ಲ; ವಾಹನವೂ ಒಂದು ಕೋಣೆಯೇ ಅಲ್ಲವೇ ?” ಎಂದು ಹೇಳಿದರು. ಅನಂತರ ನಾವು ಸೂಕ್ಷ್ಮದಿಂದ ದೇವರಲ್ಲಿ ಕೇಳಿ ವಾಹನದಲ್ಲಿ ಹಚ್ಚುವ ನಾಮಜಪ ಪಟ್ಟಿಗಳ ಮಂಡಲವನ್ನು ಸಿದ್ಧಪಡಿಸಿದೆವು.

೬. ಸೂಕ್ಷ್ಮ ಜಗತ್ತಿನ ಅಭ್ಯಾಸ ಮಾಡುವಾಗ ಸಾಧಕರನ್ನು ಹಂತಹಂತವಾಗಿ ಮುಂದೆ ಕರೆದುಕೊಂಡು ಹೋಗುವ ಪರಾತ್ಪರ ಗುರು ಡಾ. ಆಠವಲೆ !

೬ ಅ. ಪರಾತ್ಪರ ಗುರು ಡಾಕ್ಟರರು ದಣಿವರಿಯದೇ ಸಾಧಕರಿಗೆ ಸೂಕ್ಷ್ಮದ ವಿಷಯವನ್ನು ಹೇಳುವುದು ಹಾಗೂ ನಂತರ ‘ಇವರಿಗೆಷ್ಟು ತಿಳಿಯುತ್ತದೆ ನೋಡಿ !’, ಎಂದು ಸಾಧಕರನ್ನು ಹೊಗಳುವುದು : ಪರಾತ್ಪರ ಗುರು ಡಾಕ್ಟರರು ನಮಗೆ ಪ್ರತಿಯೊಂದು ವಿಷಯವನ್ನು ಆಳವಾಗಿ ವಿಚಾರ ಮಾಡಲು ಹೇಳುತ್ತಿದ್ದರು, ನಾನು ಸೂಕ್ಷ್ಮದ ಪದ್ಧತಿಯ ಅಭ್ಯಾಸ ಮಾಡಿ ಅನೇಕ ಬಾರಿ ಪರಾತ್ಪರ ಗುರು ಡಾಕ್ಟರರಲ್ಲಿಗೆ ಹೋಗುತ್ತಿದ್ದೆ, ಆಗ ಅವರು ಬೇಸರ ಪಡದೇ ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು ಹಾಗೂ ನಂತರ ನಮ್ಮನ್ನೇ ಹೊಗಳುತ್ತಾ ಹೇಳುತ್ತಿದ್ದರು, ”ಇವರಿಗೆ ಎಷ್ಟು ತಿಳಿಯುತ್ತದೆ ನೋಡಿ !” ಆಗ ನಾವು ಮನಸ್ಸಿನಲ್ಲಿಯೇ ‘ಗುರುದೇವರೇ, ನೀವೇ ನಮಗೆ ಇದೆಲ್ಲ ನೀಡಿದ್ದೀರಿ. ನಾವು ಕೇವಲ ನಿಮ್ಮ ಆಜ್ಞಾಪಾಲನೆಯ ಮಾಧ್ಯಮವಾಗಿದ್ದೇವೆ. ನೀವು ಹೀಗೆಯೇ ಅಧ್ಯಾತ್ಮದ ಸೂಕ್ಷ್ಮ ಅಂಗಗಳನ್ನು ಕಲಿಸಿರಿ. ನಮ್ಮ ಅಲ್ಪಬುದ್ಧಿಯಿಂದ ಸೂಕ್ಷ್ಮ ಜಗತ್ತಿನ ಬಗ್ಗೆ ತಿಳಿಯುವುದು ಅಸಾಧ್ಯವಾಗಿದೆ. ನೀವೇ ನಮ್ಮನ್ನು ಸಿದ್ಧಪಡಿಸಿ, ನಮ್ಮನ್ನು ಬೆಳೆಸಿ’, ಎಂದು ಪ್ರಾರ್ಥಿಸುತ್ತಿದ್ದೆವು.

೬ ಆ. ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ವಾಸ್ತುವಿನ ಪರೀಕ್ಷಣೆ ಮಾಡುವಾಗ ‘ಮೊದಲು ಪ್ರತ್ಯಕ್ಷ ವಾಸ್ತುವನ್ನು ನೋಡಿ ಪರೀಕ್ಷಣೆ ಮಾಡುವುದು, ನಂತರ ವಾಸ್ತುವಿನ ನಕಾಶೆ ನೋಡಿ ಪರೀಕ್ಷಣೆ ಮಾಡುವುದು ಹಾಗೂ ನಂತರ ಎಲ್ಲರಿಗೂ ಉಪಯೋಗವಾಗುವ ನಾಮಜಪವನ್ನು ಹುಡುಕುವುದು’, ಈ ಹಂತಗಳಲ್ಲಿ ಕಲಿಸುವುದು : ಒಮ್ಮೆ ಪರಾತ್ಪರ ಗುರು ಡಾಕ್ಟರರು ನಮಗೆ, ”ಈಗ ನೀವು ಪರೀಕ್ಷಣೆಗಾಗಿ ಸಾಧಕರ ಮನೆಗೆ ಹೋಗಬೇಡಿ. ಅವರ ಮನೆಯ ನಕಾಶೆಯನ್ನು ಇಲ್ಲಿಗೆ ತರಿಸಿಕೊಳ್ಳಿ” ಎಂದು ಹೇಳಿದರು. ಆಗ ಪರಾತ್ಪರ ಗುರು ಡಾಕ್ಟರರು ನಮಗೆ ವಾಸ್ತುವಿನ ಪರೀಕ್ಷಣೆಯ ಇನ್ನೂ ಮುಂದಿನ ಹಂತಕ್ಕೆ ಒಯ್ದರು. ಅದರಿಂದ ನಮ್ಮ ಸಾಧಕರ ಮನೆಗೆ ಹೋಗುವ ಸಮಯ ಉಳಿಯುತ್ತಿತ್ತು. ನಾವು ಸಾಧಕರ ವಾಸ್ತುಗಳ ನಕಾಶೆಯ ಪರೀಕ್ಷಣೆ ಮಾಡಿ ‘ಎಲ್ಲಿ ಯಾವ ತೊಂದರೆ ಇದೆ ?’, ಎಂದು ಹೇಳಲು ಆರಂಭಿಸಿದೆವು. ನಾವು ಆ ನಕಾಶೆಯಲ್ಲಿ ‘ಯಾವ ದಿಕ್ಕಿನ ಗೋಡೆಯ ಮೇಲೆ ಯಾವ ದೇವತೆಗಳ ನಾಮಜಪದ ಪಟ್ಟಿಗಳನ್ನು ಹಚ್ಚಬೇಕು ?’, ಎಂದು ಬರೆದು ಅದನ್ನು ಸಂಬಂಧಪಟ್ಟ ಸಾಧಕರಿಗೆ ಕಳುಹಿಸಲು ಆರಂಭಿಸಿದೆವು. ಅನಂತರ ಪರಾತ್ಪರ ಗುರು ಡಾಕ್ಟರರು ನಮಗೆ ಮುಂದಿನಂತೆ ಹೇಳಿದರು, ನೀವು ಹೀಗೆ ಎಷ್ಟು ನಕಾಶೆಗಳನ್ನು ನೋಡುವಿರಿ ಹಾಗೂ ಎಷ್ಟು ಜನರಿಗೆ ನಾಮಜಪವನ್ನು ಹುಡುಕಿ ಕೊಡುವಿರಿ ? ನೀವು ‘ವಾಸ್ತುವಿನ ತೊಂದರೆ ಕಡಿಮೆಯಾಗಲು ಎಲ್ಲರಿಗೂ ಉಪಯುಕ್ತವಾದ ನಾಮಜಪ ಯಾವುದು ? ಎಂದು ದೇವರಲ್ಲಿ ಕೇಳಿರಿ. ಅದರಿಂದ ನಮ್ಮ ಸಮಯ ಉಳಿಯುವುದು.”

೬ ಇ. ಪರಾತ್ಪರ ಗುರು ಡಾಕ್ಟರರ ಸತ್ಸಂಗದಲ್ಲಿ ಸಾಧಕರಿಗೆ ಸೂಕ್ಷ್ಮ ಜಗತ್ತಿನ ಅನೇಕ ವಿಷಯಗಳು ಕಲಿಯಲು ಸಿಗುವುದು : ಹೀಗೆ ದೇವರಲ್ಲಿ ಕೇಳುವ ವಿಷಯ ನಮಗೆ ಹೊಳೆದಿರಲೇ ಇಲ್ಲ. ಪರಾತ್ಪರ ಗುರು ಡಾಕ್ಟರರೇ ನಮಗೆ ಯಾವುದಾದರೊಂದು ವಿಷಯದ ಬಗ್ಗೆ ಹೇಳಿ ಅಥವಾ ನಮ್ಮ ಮುಂದೆ ಯಾವುದಾದರೊಂದು ಪ್ರಸಂಗವನ್ನುಂಟು ಮಾಡಿ ನಮ್ಮನ್ನು ಸೂಕ್ಷ್ಮದಲ್ಲಿ ತಿಳಿದುಕೊಳ್ಳುವ ಪದ್ಧತಿಯ ಮುಂದಿನ ಹಂತಕ್ಕೆ ನಮಗೆ ತಿಳಿಯದಂತೆಯೇ ಒಯ್ಯು ತ್ತಿದ್ದರು. ಇದರಿಂದ ಸಾಧನೆಯಲ್ಲಿ ದೇಹಧಾರಿ ಗುರುಗಳ ಮಹತ್ವ ಎಷ್ಟಿದೆ ಎಂದು ತಿಳಿಯುತ್ತದೆ. ಗುರುಗಳ ಸತ್ಸಂಗದಲ್ಲಿ ಸಾಧಕರು ಬಹಳಷ್ಟು ಕಲಿಯುತ್ತಾರೆ; ಆದರೆ ಸಾಧಕರಿಗೆ ಕಲಿಯುವ ಜಿಜ್ಞಾಸೆ ಇರಬೇಕು. ನಾವು ಪರಾತ್ಪರ ಗುರು ಡಾಕ್ಟರರು ಹೇಳಿದ ಅಂಶಗಳನ್ನು ತಕ್ಷಣ ಆಜ್ಞಾಪಾಲನೆ ಮಾಡಿದ ಕಾರಣ ಸೂಕ್ಷ್ಮ ಜಗತ್ತಿನ ಬಹಳಷ್ಟು ವಿಷಯ ನಮಗೆ ಕಲಿಯಲು ಸಿಕ್ಕಿತು.

೬ ಈ. ವಾಸ್ತುವಿನಲ್ಲಿನ ತೊಂದರೆಯ ತೀವ್ರತೆ ಹೆಚ್ಚು ಪ್ರಮಾಣದಲ್ಲಿದ್ದರೆ ಪರಾತ್ಪರ ಗುರುದೇವರು ಸಾಧಕರ ಸ್ಥಿತಿಗನುಸಾರ ಅವರಿಗೆ ವಾಸ್ತುವನ್ನು ತ್ಯಜಿಸಲು ಅಥವಾ ಬೇರೆ ಉಪಾಯ ಮಾಡಲು ಹೇಳುವುದು : ಒಮ್ಮೆ ಪರಾತ್ಪರ ಗುರು ಡಾಕ್ಟರರು ವಾಸ್ತುವಿನ ವಿಷಯದಲ್ಲಿ ಅವರ ನಿರೀಕ್ಷಣೆಯನ್ನು ಕಾಗದದಲ್ಲಿ ಬರೆದು ಅದನ್ನು ನನಗೆ ಕಳುಹಿಸಿದರು. ಅದರಲ್ಲಿ ಅವರು ‘ವಾಸ್ತುವಿನಲ್ಲಿ ಶೇ. ೬ ರಷ್ಟು ತೊಂದರೆ ಇದ್ದರೆ ವಾಸ್ತುವನ್ನು ಬಿಡದೇ ಪರ್ಯಾಯವಿಲ್ಲ’, ಎಂದು ಬರೆದಿದ್ದರು. ವಾಸ್ತುವಿನಲ್ಲಿನ ಈ ತೊಂದರೆಗಳು ಕಡಿಮೆಯಾಗಲು ಅನೇಕ ವರ್ಷಗಳು ತಗಲಬಹುದು. ವಾಸ್ತುವಿನಲ್ಲಿನ ತೊಂದರೆಗಳನ್ನು ಕಡಿಮೆ ಮಾಡಲು ಸಾಧಕರ ಸಾಧನೆಯೂ ಖರ್ಚಾಗುತ್ತದೆ. ಆದ್ದರಿಂದ ವಾಸ್ತುವಿನ ತೊಂದರೆಯನ್ನು ಪರೀಕ್ಷಣೆ ಮಾಡುವಾಗ ಮೊದಲು ‘ವಾಸ್ತುವಿನಲ್ಲಿ ಎಷ್ಟು ಶೇ. ತೊಂದರೆಯಿದೆ ?’, ಎಂಬುದನ್ನು ಸೂಕ್ಷ್ಮದಿಂದ ತಿಳಿದುಕೊಳ್ಳಬೇಕು. ವಾಸ್ತುವಿನಲ್ಲಿ ತೊಂದರೆ ಇರುವುದರಿಂದ ವಾಸ್ತುವನ್ನು ಬಿಡುವ ಅಗತ್ಯವಿದ್ದರೆ ಸಾಧಕರಿಗೆ ಹಾಗೆ ಹೇಳಬೇಕು; ಆದರೆ ಅವನ ಮನೆಯ ಪರಿಸ್ಥಿತಿಯನ್ನು ತಿಳಿದುಕೊಂಡ ನಂತರ ಹಾಗೆ ಹೇಳಬೇಕು; ಏಕೆಂದರೆ ಅನೇಕ ಸಾಧಕರು ವಾಸ್ತುವನ್ನು ತ್ಯಜಿಸುವ ಪರಿಸ್ಥಿತಿಯಲ್ಲಿರುವುದಿಲ್ಲ. ಸಾಧಕರ ಆ ಸಮಯದ ಪರಿಸ್ಥಿತಿಯನ್ನು ಅಭ್ಯಾಸ ಮಾಡಿಯೇ ಈ ಪರ್ಯಾಯವನ್ನು ಹೇಳಬೇಕು. ಸಾಧಕರ ಅಂತಹ ಸ್ಥಿತಿ ಇಲ್ಲದಿದ್ದರೆ, ಅವನಿಗೆ ‘ಬೇರೆ ರೀತಿಯ ಆಧ್ಯಾತ್ಮಿಕ ಉಪಾಯವನ್ನು ಹೇಳಿ ವಾಸ್ತುವಿನ ತೊಂದರೆಯನ್ನು ಹೇಗೆ ಕಡಿಮೆಗೊಳಿಸಬಹುದು ?’, ಎಂದು ಹೇಳಬೇಕು.’ ಪ.ಪೂ.ಡಾಕ್ಟರರು ಸಾಧಕರ ಬಗ್ಗೆ ಎಷ್ಟು ವಿಚಾರ ಮಾಡುತ್ತಾರೆ ! ನಾವು ಸಾಧಕರಿಗೆ ವಾಸ್ತುವನ್ನು ಬಿಟ್ಟು ಹೋಗದಂತಹ ಉಪಾಯವನ್ನೇ ಹೇಳುತ್ತಿದ್ದೆವು. ವಾಸ್ತುವಿನಲ್ಲಿ ಎಷ್ಟು ತೊಂದರೆ ಇದ್ದರೂ ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಸಾಧಕರ ತೊಂದರೆಗಳು ಕಡಿಮೆಯಾಗುತ್ತಿವೆ. ಇದರಿಂದ ‘ಜೀವನದಲ್ಲಿ ಗುರುಕೃಪೆ ಎಷ್ಟು ಮಹತ್ವದ್ದಾಗಿದೆ !’, ಎಂಬುದೂ ನಮ್ಮ ಗಮನಕ್ಕೆ ಬಂದಿತು.

೭. ವಾಸ್ತುವನ್ನು ಬದಲಾಯಿಸಿದ ನಂತರವೂ ಕೆಲವು ಸಾಧಕರಿಗೆ ತೊಂದರೆಯಾಗುವುದರಿಂದ ‘ಸಾಧಕರು ಸಾಧನೆ ಮಾಡಿ ತಮ್ಮ ಸುತ್ತಲೂ ವಜ್ರದಂತಹ ಕವಚ ನಿರ್ಮಾಣ ಮಾಡುವುದೇ ಶಾಶ್ವತ ಉಪಾಯವಾಗಿದೆ’, ಎಂಬುದು ಅರಿವಾಗುವುದು

ಕೆಲವು ಸಾಧಕರು ಹಿಂದಿನ ವಾಸ್ತುವನ್ನು ಬಿಟ್ಟು ಅವರು ಇನ್ನೊಂದು ವಾಸ್ತುವಿನಲ್ಲಿ ವಾಸಿಸಲು ಹೋದಾಗ ಅವರಿಗೆ ಸ್ವಲ್ಪ ಸಮಯದ ನಂತರ ಪುನಃ ತೊಂದರೆ ಆರಂಭವಾಯಿತು; ಆದರೆ ಅವರ ತೊಂದರೆಯ ತೀವ್ರತೆ ಕಡಿಮೆಯಿತ್ತು.’ ಇದರ ಕಾರಣವನ್ನು ಹುಡುಕಿದಾಗ ನಮಗೆ ಅರಿವಾಗಿರುವುದೇನೆಂದರೆ, ‘ಸಮಷ್ಟಿ ಸಾಧನೆ ಮಾಡುವ ಸಾಧಕರ ವಿಷಯದಲ್ಲಿ ಅವರು ಒಂದು ವಾಸ್ತುವನ್ನು ಬಿಟ್ಟರೂ ಕೆಟ್ಟ ಶಕ್ತಿಗಳು ಅವರ ಹಿಂದೆಯೇ ಇನ್ನೊಂದು ವಾಸ್ತುವಿನಲ್ಲಿ ಬರುತ್ತವೆ.’ ಪರಾತ್ಪರ ಗುರು ಡಾಕ್ಟರರು ‘ವಾಸ್ತುವನ್ನು ತ್ಯಜಿಸುವುದು, ವಾಸ್ತುವಿನಲ್ಲಿ ಉಪಾಯ ಮಾಡುವುದು ಇವೆಲ್ಲವೂ ತಾತ್ಕಾಲಿಕ ಉಪಾಯ ಎಂಬುದನ್ನು ನಮ್ಮ ಗಮನಕ್ಕೆ ತಂದುಕೊಟ್ಟರು. ‘ಸಾಧಕರು ಸಾಧನೆಯನ್ನು ಹೆಚ್ಚಿಸಿ ತಮ್ಮ ಸುತ್ತಲೂ ವಜ್ರದಂತಹ ಕವಚ ನಿರ್ಮಾಣ ಮಾಡುವುದು ಹಾಗೂ ಈ ಕವಚ ಸತತ ಜಾಗೃತವಾಗಿರಲು ನಿತ್ಯ ಸಾಧನೆ ಮಾಡುವುದೇ’, ಶಾಶ್ವತ ಪರ್ಯಾಯವಾಗಿದೆ. ಯಾವುದೇ ಪದ್ಧತಿಯ ಹಾಗೂ ಯಾವುದೇ ಸ್ಥಳದಲ್ಲಿ ತೊಂದರೆ ಇದ್ದರೆ ಸಾಧಕರು ಸ್ವತಃ ಸಾಧನೆ ಮಾಡದೆ ಪರ್ಯಾಯವಿಲ್ಲ.

೮. ಸಾಧನೆಯಲ್ಲಿ ಉಳಿದುಕೊಳ್ಳಬೇಕಾದರೆ ಗುರುಕೃಪೆಯೇ ಬೇಕು !

‘ಸಾಧಕರು ಸಾಧನೆ ಮಾಡುವುದರೊಂದಿಗೆ ಬೇರೆ ಉಪಾಯ ಪದ್ಧತಿಗಳನ್ನು ಅವಲಂಬಿಸುವುದು ಕೂಡ ಅಷ್ಟೇ ಮಹತ್ವದ್ದಾಗಿದೆ. ಆದ್ದರಿಂದ ಸಾಧಕರ ಸಾಧನೆಯು ತೊಂದರೆ ನಿವಾರಣೆಗಾಗಿ ಖರ್ಚಾಗುವುದಿಲ್ಲ’, ಎಂಬುದನ್ನೂ ಪರಾತ್ಪರ ಗುರು ಡಾಕ್ಟರರು ಕಲಿಸಿದರು, ಅಂದರೆ ವರ್ತಮಾನ ಸ್ಥಿತಿಯಲ್ಲಿ ಎಲ್ಲವೂ ಮಹತ್ವದ್ದೇ ಆಗಿದೆ; ಏಕೆಂದರೆ ಇದು ಕಲಿಯುಗವಾಗಿದೆ. ಸುತ್ತಮುತ್ತಲೂ ಕೆಟ್ಟ ಶಕ್ತಿಗಳ ಪ್ರಕೋಪ ಹೆಚ್ಚಿದೆ. ಅದನ್ನು ಎದುರಿಸಿ ಸಾಧನೆಯಲ್ಲಿ ಉಳಿದುಕೊಳ್ಳುವುದು ಮಹತ್ವದ್ದಾಗಿದೆ; ಆದರೆ ಅದಕ್ಕಾಗಿ ಗುರುಕೃಪೆಯೇ ಬೇಕು.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಕಾಂಚೀಪುರಮ್, ತಮಿಳುನಾಡು. (೬.೨.೨೦೨೨)

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.