‘ಸೂಕ್ಷ್ಮ ಪರೀಕ್ಷಣೆ’ ಈ ಹೊಸ ಸಂಕಲ್ಪನೆಯ ಉದಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕಲಿಯುಗದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯ ಬಗ್ಗೆ ಸಮಾಜ ಅಜ್ಞಾನಿಯಾಗಿದೆ. ನಮ್ಮೆಲ್ಲ ಸಾಧಕರಿಗೂ ಪರಾತ್ಪರ ಗುರು ಡಾ. ಆಠವಲೆಯವರು ಪದೇ ಪದೇ ಮಾರ್ಗದರ್ಶನ ಮಾಡಿರುವುದರಿಂದ ಕೆಟ್ಟ ಶಕ್ತಿಗಳ ಸೂಕ್ಷ್ಮ ಜಗತ್ತಿನ ಬಗ್ಗೆ ತಿಳಿಯಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಸೂಕ್ಷ್ಮ ಜಗತ್ತಿನ ವಿಷಯದ ಅನುಭವವನ್ನು ಈ ಲೇಖನಮಾಲೆಯ ಮೂಲಕ ನಾವು ನೋಡುತ್ತಿದ್ದೇವೆ. ಸನಾತನ ಪ್ರಭಾತದ ೨೫/೩೧ ನೇ ಸಂಚಿಕೆಯಲ್ಲಿ ಈ ಲೇಖನ ಮಾಲೆಯ ಕೆಲವು ಭಾಗವನ್ನು ನೋಡಿದೆವು, ಇಂದು ಸೂಕ್ಷ್ಮ ಪರೀಕ್ಷಣೆಯ ವಿಷಯವನ್ನು ನೋಡೋಣ.        

(ಭಾಗ ೩)

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ‘ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮ ಜ್ಞಾನವಿರುವ ಸಾಧಕರಿಗೆ ‘ಸೂಕ್ಷ್ಮ ಪರೀಕ್ಷಣೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸುವುದು

‘ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮ ಜ್ಞಾನವಿರುವ ನಮ್ಮೆಲ್ಲ ಸಾಧಕರಿಗೆ ‘ಸೂಕ್ಷ್ಮ ಪರೀಕ್ಷಣೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸಿದರು. ಅವರು, ”ಸೂಕ್ಷ್ಮ ಪರೀಕ್ಷಣೆ ಮಾಡುವಾಗ ಮೊದಲು ದೇವರಲ್ಲಿ ಪ್ರಾರ್ಥನೆ ಮಾಡಬೇಕು. ಅನಂತರ ‘ಯಾವ ಸಾಧಕನ ಸೂಕ್ಷ್ಮ ಪರೀಕ್ಷಣೆ ಮಾಡಲಿಕ್ಕಿದೆಯೋ, ಅವನಿಗೆ ತೊಂದರೆ ಇದೆಯೋ ಅಥವಾ ಇಲ್ಲವೋ’, ಎಂಬುದನ್ನು ತಮ್ಮ ಮನಸ್ಸಿಗೆ (ಈಶ್ವರನಿಗೆ) ಕೇಳಬೇಕು. ಮನಸ್ಸಿನಲ್ಲಿ ಮೊದಲು ಬರುವ ಉತ್ತರವನ್ನು ಗ್ರಹಿಸಿಕೊಂಡು ಸಾಧಕನ ತೊಂದರೆಯ ಪ್ರಮಾಣವನ್ನು ನಿರ್ಧರಿಸಬೇಕು.’’ ‘ಅದನ್ನು ಹೇಗೆ ನಿರ್ಧರಿಸಬೇಕು ?’, ಅದರ ಕ್ರಮವನ್ನೂ ಅವರು ಹೇಳಿದರು.

೧ ಅ. ಸಾಧಕನ ಕೆಟ್ಟ ಶಕ್ತಿಯ ತೊಂದರೆಯ ವಿಷಯದಲ್ಲಿ ಸೂಕ್ಷ್ಮ ಪರೀಕ್ಷಣೆ ಮಾಡುವಾಗ ಮನಸ್ಸಿಗೆ (ದೇವರಲ್ಲಿ) ಪ್ರಶ್ನೆ ಕೇಳುವ ಕ್ರಮ

೧. ಸಾಧಕನಿಗೆ ತೊಂದರೆ ಇದೆಯೇ ಅಥವಾ ಇಲ್ಲ ?

ಉತ್ತರ : ಇದೆ (‘ಇದೆ’, ಎಂದು ಉತ್ತರ ಬಂದರೆ)

೨. ಸಾಧಕನ ತೊಂದರೆ ಶಾರೀರಿಕವೋ, ಮಾನಸಿಕವೋ ಅಥವಾ ಆಧ್ಯಾತ್ಮಿಕ ಸ್ವರೂಪದ್ದಾಗಿದೆ ಹಾಗೂ ಅವುಗಳ ಪ್ರಮಾಣ ಶೇ. ಎಷ್ಟಿದೆ ?

ಉತ್ತರ : ಶಾರೀರಿಕ ತೊಂದರೆ ಶೇ. ೪೦ + ಮಾನಸಿಕ ಶೇ. ೩೦ + ಆಧ್ಯಾತ್ಮಿಕ ಶೇ. ೩೦. = ಒಟ್ಟು ಶೇ. ೧೦೦

೩. ಸಾಧಕನ ತೊಂದರೆಗೆ ಆಧ್ಯಾತ್ಮಿಕ ಉಪಾಯ ಯಾವುದು ?

ಉತ್ತರ : ಸಾಧಕನ ತೊಂದರೆಗೆ ಉಪಾಯವೆಂದು ಅವನು ಯಾವ ದೇವತೆಯ ನಾಮಜಪ ಮಾಡಬೇಕು, ಜಪ ಮಾಡುವಾಗ ಯಾವ ಮುದ್ರೆ ಮತ್ತು ನ್ಯಾಸ ಮಾಡಬೇಕು, ಹಾಗೆಯೇ ಉಪಾಯದ ಅವಧಿಯನ್ನು ಹೇಳಬೇಕು.

೨. ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ತೊಂದರೆಯ ವರ್ಗೀಕರಣ ಮಾಡಲು ಕಲಿಸುವುದು ಹಾಗೂ ತೊಂದರೆಯ ತೀವ್ರತೆಗನುಸಾರ ನಾಮಜಪ ಹುಡುಕಿ ಕೊಡಲು ಆರಂಭಿಸುವುದು

ಈ ರೀತಿ ಪರಾತ್ಪರ ಗುರು ಡಾಕ್ಟರರು ನಮಗೆ ಸಾಧಕನ ತೊಂದರೆಯನ್ನು ಹುಡುಕುವಾಗ ಅವನ ತೊಂದರೆಯನ್ನು ‘ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ’, ಈ ೩ ಭಾಗಗಳಲ್ಲಿ ವರ್ಗೀಕರಣ ಮಾಡಲು ಕಲಿಸಿದರು. ಅನಂತರ ನಾವು ಸಾಧಕನಿಗೆ ಆಗುವ ತೊಂದರೆಯ ತೀವ್ರತೆಗನುಸಾರ ಸಾಧಕನು ‘ಯಾವ ನಾಮಜಪ ಮಾಡಬೇಕು, ಅದರ ಅವಧಿ ಮತ್ತು ಅದನ್ನು ಎಷ್ಟು ದಿನಗಳ ವರೆಗೆ ಮಾಡಬೇಕು ?’, ಎಂಬುದನ್ನು ಹುಡುಕಿ ಕೊಡಲು ಆರಂಭಿಸಿದೆವು.

೩. ‘ನಾವು ಮಾಡಿದ ಸೂಕ್ಷ್ಮ ಪರೀಕ್ಷಣೆ ಸರಿಯಾಗಿದೆಯೋ ಅಥವಾ ಇಲ್ಲವೋ ?’, ಎಂಬುದನ್ನು ಪರಾತ್ಪರ ಗುರು ಡಾಕ್ಟರ್‌ರು ನಮಗೆ ಹೇಳುತ್ತಿದ್ದರು. ಈ ರೀತಿ ‘ಸೂಕ್ಷ್ಮ ಪರೀಕ್ಷಣೆ’ ಎಂಬ ಒಂದು ಹೊಸ ಸಂಕಲ್ಪನೆಯ ಉದಯವಾಯಿತು.’

(ಮುಂದುವರಿಯುವುದು)

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸನಾತನ ಆಶ್ರಮ ರಾಮನಾಥಿ, ಗೋವಾ. (೧೯.೧.೨೦೨೨)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.