Ethylene Oxide Conspiracy : ೫೨೭ ಭಾರತೀಯ ಆಹಾರ ಉತ್ಪನ್ನಗಳು ಕರ್ಕ ರೋಗಕ್ಕೆ ಕಾರಣ ಎಂದು ಯುರೋಪಿಯನ್ ಯೂನಿಯನ್ ನ ದಾವೆ !

ನವ ದೆಹಲಿ – ಭಾರತೀಯ ಕಂಪನಿಗಳ 4 ಮಸಾಲೆಗಳಲ್ಲಿ ಕ್ಯಾನ್ಸರ್ ಆಗುವ ರಾಸಾಯನ ಇರುವುದಾಗಿ ಸಿಂಗಪುರ್ ಮತ್ತು ಹಾಂಕಾಂಗ್ ದೇಶಗಳ ಆರೋಪದ ನಂತರ ಈಗ ಯುರೋಪಿಯನ್ ಯೂನಿಯನ್ ಕೂಡ ಅಂತಹದೇ ಆರೋಪ ಮಾಡಿದೆ. ‘ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ’ ಇಂದ ನಡೆಸಿರುವ ಪರಿಶೀಲನೆಯ ಸಮಯದಲ್ಲಿ ೫೨೭ ಭಾರತೀಯ ಉತ್ಪಾದನೆಗಳಲ್ಲಿ ‘ಇಥಿಲಿನ್ ಆಕ್ಸೈಡ್’ ಕಂಡು ಬಂದಿದ್ದು ಇದು ಕ್ಯಾನ್ಸರ್ ಕಾರಣವಾಗಿದೆ ಎಂದು ಈ ಸಂಸ್ಥೆಯಿಂದ ದಾವೆ ಮಾಡಲಾಗಿದೆ.

‘ಯುರೋಪಿಯನ್ ಸಂಸ್ಥೆ ಈ ರಸಾಯನದ ಬಳಕೆ ನಿಲ್ಲಿಸುವುದಕ್ಕಾಗಿ ಯಾವುದೇ ಉಪಾಯ ಯೋಜನೆ ಮಾಡಿಲ್ಲ’ ಎಂದು ಕೂಡ ಅದು ಹೇಳಿದೆ. ಒಂದು ಆಂಗ್ಲ ಸಮಾಚಾರ ಪತ್ರದಲ್ಲಿ ನೀಡಿರುವ ವರದಿಯ ಪ್ರಕಾರ, ಯುರೋಪಿಯನ್ ಯೂನಿಯನ್ ನಲ್ಲಿ ಆಹಾರ ಸುರಕ್ಷಾ ಅಧಿಕಾರಿಗಳು ಸಪ್ಟೆಂಬರ್ ೨೦೨೦ ರಿಂದ ಏಪ್ರಿಲ್ ೨೦೨೪ ಈ ಕಾಲಾವಧಿಯಲ್ಲಿ ಇಂತಹ ಅಪಾಯಕಾರಿ ಪದಾರ್ಥಗಳು ಕಂಡು ಬಂದಿದೆ ಎಂದು ಹೇಳಿದ್ದಾರೆ. ಈ ಉತ್ಪನ್ನಗಳಲ್ಲಿ ಅಕ್ರೋಡ್ ಮತ್ತು ಎಳ್ಳು, ಔಷಧಿಗಳು, ಮಸಾಲೆ ಮತ್ತು ಇತರ ಆಹಾರ ಪದಾರ್ಥದ ಸಮಾವೇಶವಿದೆ.

ರಾಪಿಡ್ ಅಲರ್ಟ್ ಸಿಸ್ಟಮ್ ಫಾರ್ ಫುಡ್ ಅಂಡ್ ಫೀಡ ಇದು ಒಂದು ಆನ್ಲೈನ್ ಪದ್ಧತಿ ಆಗಿದೆ, ಅದನ್ನು ಯುರೋಪಿಯನ್ ದೇಶದಲ್ಲಿ ಆಹಾರ ಸುರಕ್ಷಾ ಮಾನದಂಡದ ಪರೀಕ್ಷಣೆ ನಡೆಸುತ್ತದೆ. ಅದರ ಅಂಕಿ ಸಂಖ್ಯೆಗಳ ಪ್ರಕಾರ, ೫೨೫ ಆಹಾರ ಪದಾರ್ಥ ಮತ್ತು ೨ ಖಾದ್ಯ ಉತ್ಪಾದನೆಗಳಲ್ಲಿ ಈ ರಾಸಾಯನಿಕ ದೊರೆತಿದೆ. ಇದರಲ್ಲಿ ೩೩೨ ಉತ್ಪಾದನೆಗಳು ನೇರ ಭಾರತಕ್ಕೆ ಸಂಬಂಧಪಟ್ಟದ್ದಾಗಿದೆ ಮತ್ತು ಉಳಿದಿರುವ ಉತ್ಪಾದನೆಗಳಿಗಾಗಿ ಇತರ ದೇಶಗಳನ್ನು ಕೂಡ ಉತ್ತರದಾಯಿ ಎನ್ನಲಾಗಿದೆ.

ಇಥಿಲಿನ್ ಆಕ್ಸೈಡ್ ಎಂದರೆ ಏನು ?

‘ಇಥಿಲಿನ್ ಆಕ್ಸೈಡ್’ ಎಂದರೆ ಬಣ್ಣದ ವಾಯು ಆಗಿದೆ. ಅದು ಕೀಟನಾಶಕ್ಕಾಗಿ ಬಳಸುತ್ತಾರೆ. ಹಾಗೂ ಈ ರಾಸಾಯನ ಮೂಲತಃ ವೈದ್ಯಕೀಯ ಉಪಕರಣಗಳಲ್ಲಿನ ಕ್ರೀಮಿನಾಶ ಮಾಡುವುದಕ್ಕಾಗಿ ತಯಾರಿಸಲಾಗಿತ್ತು. ಇಥಿಲಿನ್ ಆಕ್ಸೈಡ್ ದ ಸಂಪರ್ಕಕ್ಕೆ ಬಂದರೆ ಲಿಮ್ಪೋಮ ಮತ್ತು ಲುಕೆಮಿಯಾ, ಇದರ ಜೊತೆಗೆ ಇತರ ಕ್ಯಾನ್ಸರ್ ನ ಅಪಾಯ ಹೆಚ್ಚಾಗಬಹುದು ಎಂದು ಹೇಳುತ್ತಾರೆ.