ಕಾಂಗ್ರೆಸ್ ಆರಂಭಿಸಿದ ಯೋಜನೆಯು ಆರ್ಥಿಕವಾಗಿ ದುರ್ಬಲರಿಗಾಗಿ ಅಲ್ಲ, ಬದಲಿಗೆ ‘ಅಲ್ಪಸಂಖ್ಯಾತ’ರಿಗಾಗಿ ಮಾಡಿದ್ದ ಪರಿಣಾಮ !
ಮುಂಬಯಿ, ಏಪ್ರಿಲ್ 24 (ಸುದ್ದಿ) – ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ‘ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ ಎಂಬ ಹೆಸರಿನಲ್ಲಿ ಮುಸ್ಲಿಮರ ಅಭಿವೃದ್ಧಿಗಾಗಿ ‘ಬಹು ವಲಯದ ಅಭಿವೃದ್ಧಿ ಕಾರ್ಯಕ್ರಮ’ವನ್ನು ಕಾಂಗ್ರೆಸ್ ಜಾರಿಗೊಳಿಸಿತು. ಈ ಕಾರ್ಯಕ್ರಮದ ಅಡಿಯಲ್ಲಿ, ಭಾರತದ 26 ರಾಜ್ಯಗಳ 213 ಜಿಲ್ಲೆಗಳು ಮತ್ತು ನಗರಗಳಲ್ಲಿ 795 ಅಲ್ಪಸಂಖ್ಯಾತ-ಬಹುಸಂಖ್ಯಾತ ಪ್ರದೇಶಗಳ ಅಭಿವೃದ್ಧಿಗೆ ಕೋಟಿ ರೂಪಾಯಿ ವಿತರಿಸಲಾಗಿತ್ತು. ‘ಆರ್ಥಿಕವಾಗಿ ದುರ್ಬಲರು’ ‘ಹಿಂದುಳಿದವರು’ ಎಂಬ ಮಾನದಂಡದಿಂದ ಅಲ್ಲ, ‘ಅಲ್ಪಸಂಖ್ಯಾತರು’ ಎಂಬ ಮಾನದಂಡದ ಮೂಲಕ ಮುಸ್ಲಿಂ ಬಹುಸಂಖ್ಯಾತವಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಈ ಯೋಜನೆಯ ಮೂಲಕ ವಾರ್ಷಿಕವಾಗಿ ಕೋಟಿಗಟ್ಟಲೆ ಹಣ ವಿನಿಯೋಗಿಸಲಾಗುತ್ತಿದೆ. 15 ವರ್ಷಗಳ ಹಿಂದೆ ಕಾಂಗ್ರೆಸ್ ಆರಂಭಿಸಿದ ಯೋಜನೆ ಇಂದಿಗೂ ಮುಂದುವರೆದಿದ್ದು, ಇದರಲ್ಲಿ ಮುಸ್ಲಿಂ ಬಹುಸಂಖ್ಯಾತವಿರುವ ಬಡಾವಣೆಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. ಅಲ್ಪಸಂಖ್ಯಾತರ ಯೋಜನೆಗಳ ಕುರಿತು ಮಹಾರಾಷ್ಟ್ರ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆ ಪ್ರಕಟಿಸಿರುವ ಪುಸ್ತಕದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಹೆಚ್ಚಿನ ಫಲಾನುಭವಿಗಳು ಮುಸ್ಲಿಮರು !
ಈ ಯೋಜನೆಯ ಹೆಸರು ‘ಬಹು-ವಲಯ ಅಭಿವೃದ್ಧಿ ಕಾರ್ಯಕ್ರಮ’ ಆಗಿದ್ದರೂ, ವಾಸ್ತವದಲ್ಲಿ, ಈ ಯೋಜನೆಯ ನೆಪದಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಕಾಂಗ್ರೆಸ್ ಈ ಯೋಜನೆಯನ್ನು ಪ್ರಾರಂಭಿಸಿತು. ಮಹಾನಗರ ಪಾಲಿಕೆ, ನಗರ ಪಾಲಿಕೆ ಅಥವಾ ನಗರ ಪಂಚಾಯ್ತಿಯ ಕ್ಷೇತ್ರಗಳ್ಲಲಿ ಒಟ್ಟು ಜನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ (ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಸಿಖ್ಖರು, ಪಾರ್ಸಿಗಳು ಮತ್ತು ಯಹೂದಿಗಳು) ಶೇ. 10 ಕ್ಕೂ ಜನಸಂಖ್ಯೆ ಇದ್ದರೆ ಅಲ್ಪಸಂಖ್ಯಾತ ಹೆಚ್ಚಿರುವ ಪ್ರದೇಶಗಳಲ್ಲಿ ಈ ಯೋಜನೆಯ ನಿಧಿಯನ್ನು ವಿತರಿಸಲಾಗುತ್ತದೆ. ‘ಅಲ್ಪಸಂಖ್ಯಾತರ ಪ್ರದೇಶದ ಅಭಿವೃದ್ಧಿ’ ಎಂದು ಈ ಯೋಜನೆಯನ್ನು ಉಲ್ಲೇಖಿಸಲಾಗಿದೆ ಹಾಗೂ ಈ ಯೋಜನೆಯ ಫಲಾನುಭವಿಗಳು ಹೆಚ್ಚಿನವರು ಮುಸಲ್ಮಾನರಾಗಿದ್ದಾರ. ಈ ಯೋಜನೆಯಿಂದ ಅಲ್ಪಸಂಖ್ಯಾತ ಹೆಚ್ಚಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ಲೈಟಿಂಗ್ ಯೋಜನೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ, ಆರೋಗ್ಯ ಕೇಂದ್ರ-ಅಂಗನವಾಡಿಗಳ ನಿರ್ಮಾಣ, ಶೌಚಾಲಯ ನಿರ್ಮಾಣ, ವಿದ್ಯುದ್ದೀಕರಣ ಮುಂತಾದ ಸೌಲಭ್ಯಗಳಿಗೆ ಈ ಯೋಜನೆಯ ಮೂಲಕ ಹಣ ಲಭ್ಯವಾಗಿದೆ.
ದೇಶಾದ್ಯಂತ ಅಲ್ಪಸಂಖ್ಯಾತರ ಪ್ರಾಬಲ್ಯದ 710 ನಗರಗಳಲ್ಲಿ ಅಭಿವೃದ್ಧಿ ಕಾರ್ಯಗಳು !
ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳ ಅಭಿವೃದ್ಧಿಗಾಗಿ 2008-09ನೇ ಸಾಲಿನಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಈ ಯೋಜನೆ ಆರಂಭಿಸಿ 3 ಸಾವಿರದ 780 ಕೋಟಿ ರೂಪಾಯಿ ನೀಡಿದೆ. ಆರಂಭದಲ್ಲಿ, ಈ ಯೋಜನೆಯನ್ನು ದೇಶದ 90 ಅಲ್ಪಸಂಖ್ಯಾತರು ಬಹುಸಂಖ್ಯಾತ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು. ತರುವಾಯ, 12 ನೇ ಪಂಚವಾರ್ಷಿಕ ಯೋಜನೆಯಡಿ (ವರ್ಷ 2012-17), ಈ ಯೋಜನೆಗೆ 5 ಸಾವಿರದ 775 ಕೋಟಿ ರೂಪಾಯಿಯಷ್ಟು ಹಣ ನೀಡಲಾಯಿತು. ಇದರಿಂದ 26 ರಾಜ್ಯಗಳ 196 ಜಿಲ್ಲೆಗಳಲ್ಲಿ 710 ಅಲ್ಪಸಂಖ್ಯಾತರ ಪ್ರಾಬಲ್ಯದ ನಗರಗಳನ್ನು ಗುರುತಿಸಿ ಅಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
The result of #Congress devising schemes not for the economically weak, but for the appeasement of minorities.
🛑 Declared 795 places in the country as Mu$|!m-majority zones, only to allot Crores of rupees for the developmental works.
👉 Why develop only minority settlements?… pic.twitter.com/VcJoC5qHBb
— Sanatan Prabhat (@SanatanPrabhat) April 24, 2024
ಸಂಪಾದಕೀಯ ನಿಲುವು
|