‘ನಮಗೆ ದಿನವಿಡೀ ಮನೆಯಿಂದ ಹೊರಗೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಆದ್ದರಿಂದ ಹೊರಗಿನ ಆಹಾರ ಸೇವಿಸದೆ ನಮಗೆ ಪರ್ಯಾಯವಿಲ್ಲ; ಬಹಳಷ್ಟು ರೋಗಿಗಳು ಇಂತಹ ಸಮಸ್ಯೆಯೊಂದಿಗೆ ಬರುತ್ತಾರೆ. ಕೆಲವರು ‘ಪೈಲೇಟ್’ ಆಗಿರುತ್ತಾರೆ, ಕೆಲವರ ತಮ್ಮದೆ ಕಂಪನಿಗಳಿರುತ್ತವೆ, ಕೆಲವರು ‘ಕನ್ಸಲಟಂಟ’ (ಸಲಹೆಗಾರ) ಆಗಿರುತ್ತಾರೆ, ವ್ಯವಸಾಯ ಅಥವಾ ನೌಕರಿ ಇರುತ್ತವೆ. ಇವುಗಳಲ್ಲಿ ಈ ಮುಂದಿನ ಕೆಲವು ವಿಷಯಗಳನ್ನು ಗಮನಿಸಿ ತಮ್ಮ ಶರೀರದ ಮೇಲೆ ಆದಷ್ಟು ಕಡಿಮೆ ಪರಿಣಾಮವಾಗುವಂತೆ ಪ್ರಯತ್ನ ಮಾಡಬಹುದು. ಈ ಮುಂದೆ ಹೇಳಿರುವ ಪರ್ಯಾಯವನ್ನು ಎಲ್ಲರೂ ಮಾಡಬಹುದೇ ? ಖಂಡಿತವಾಗಿ ಇಲ್ಲ; ಕೆಲಸದ ಸ್ವರೂಪವೆ ಹೀಗಿರುವಾಗ ಪರಿಸ್ಥಿತಿಯೂ ಹಾಗೆಯೆ ಇರುತ್ತದೆ, ಆಗ lesser of the two evils (ಕೆಟ್ಟಿರುವ ಎರಡರಲ್ಲಿ ಕಡಿಮೆ ಕೆಟ್ಟಿರುವುದನ್ನು ಆರಿಸುವುದು) ಹೇಗೆ ಆರಿಸುವುದು, ಎಂಬುದನ್ನು ಹೇಳುವ ಪ್ರಯತ್ನವಾಗಿದೆ.
೧. ಯಾವಾಗ ಹೊರಗೆ ಹೋಗುವುದು ಇರುವುದಿಲ್ಲವೋ, ಆಗ ಮನೆ ಊಟ ಹಾಗೂ ತಾಜಾ ಆಹಾರದ ಬಗ್ಗೆ ವಿಚಾರ ಮಾಡಬೇಕು. ಪ್ರತಿದಿನ ಸೂರ್ಯನಮಸ್ಕಾರ ಮತ್ತು ನಡೆಯುವುದು, ಈ ವ್ಯಾಯಾಮ ನಾವು ಎಲ್ಲಿದ್ದರೂ ಮಾಡಬಹುದು. ಇವು ಅಗ್ನಿಯನ್ನು ಚೆನ್ನಾಗಿಡಲು ಹಾಗೂ ಶರೀರವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತವೆ.
೨. ಬೆಳಗ್ಗೆ ಬೇಗನೆ ಹೋಗಿ ರಾತ್ರಿ ಅನಿರೀಕ್ಷಿತವಾಗಿ ಔತಣ ಕೂಟ (ಪಾರ್ಟಿ) ನಿಶ್ಚಿತವಾಗುತ್ತದೆ, ‘ಕಾರ್ಪೋರೇಟ್’ ಕ್ಷೇತ್ರದಲ್ಲಿ ಇಂತಹ ಕಾರ್ಯಪದ್ಧತಿ (ವರ್ಕ ಕಲ್ಚರ) ಬಹಳಷ್ಟು ಕಾಣಿಸುತ್ತದೆ. ಹೀಗೆ ಪದೇ ಪದೇ ಆಗುತ್ತಿದ್ದರೆ, ಬೆಳಗ್ಗೆ ಹೋಗುವಾಗ ಪರೋಟಾ ಅಥವಾ ಚಪಾತಿ-ಪಲ್ಯ ಜೊತೆಗಿಟ್ಟುಕೊಳ್ಳಬೇಕು. ಯೋಗ್ಯ ಸಮಯದಲ್ಲಿ ಯೋಗ್ಯ ಶಬ್ದಗಳಲ್ಲಿ ಕೆಲವು ವಿಷಯಗಳಿಗೆ ತಮಗೆ ಹಾಗೂ ಇತರರಿಗೂ ಇಲ್ಲವೆನ್ನುವ ಅಭ್ಯಾಸವನ್ನು ಕ್ರಮೇಣ ಬೆಳೆಸಿಕೊಳ್ಳಬೇಕು.
೩. ಮನೆಯಿಂದ ಟಿಫಿನ್ (ಡಬ್ಬಿ) ಸಾಧ್ಯವೇ ಇಲ್ಲದಿದ್ದರೆ, ಅಂತಹ ಸಮಯದಲ್ಲಿ ಕಂಪನಿಯ ಉಪಹಾರಗೃಹದಲ್ಲಿ ಬಿಸಿ ಹಾಗೂ ಬೇಯಿಸಿದ ಅದರಲ್ಲಿ ಮೈದಾ ಇಲ್ಲದ ಪದಾರ್ಥವನ್ನು ಸೇವಿಸಬೇಕು. ಎಲ್ಲ ವಸ್ತುಗಳಿಗೆ ಚೀಸ್ ತೆಗೆದುಕೊಳ್ಳಬಾರದು.
೪. ಹೊರಗಿರುವಾಗ ನಿಯಮಿತವಾಗಿ ಹೋಟೆಲ್‌ಗಳಲ್ಲಿ ಉಳಿಯ ಬೇಕಾದರೆ ಆಗ ಕೊಬ್ಬಿನ ಪದಾರ್ಥ, ಚೀಸ್, ಮೇಯೊದಂತಹ ಜೀರ್ಣಿಸಲು ಜಡವಾಗಿರುವ ಹಾಗೂ ಶರೀರದಲ್ಲಿ ದಾಹ ಹೆಚ್ಚಿಸುವ ಪದಾರ್ಥಗಳು, ಚೈನೀಸ್ ಅಥವಾ ಸೋಯಾ ಸಾಸ್, ಅಜಿನೋಮೋಟೋ ಇವುಗಳನ್ನು ವರ್ಜಿಸಿ ‘ಕಾರ್ನ್ ಸ್ಟಾರ್ಚ್’ ಕಡಿಮೆಯಿರುವ ಸೂಪ್, ದೋಸೆ, ಗೋದಿಯ ಚಪಾತಿ, ಬೇಳೆ, ಬೇಳೆಯ ಕಿಚಡಿ ಇತ್ಯಾದಿ ಸೇವಿಸಬಹುದು. ಪಂಜಾಬಿ ಪಲ್ಯದಲ್ಲಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟಿರುವ ಮಸಾಲೆ ಇರುತ್ತದೆ, ಅದನ್ನು ನಿಯಮಿತವಾಗಿ ಸೇವಿಸುವುದು ಹಿತಕರವಲ್ಲ. ಅದರ ಬದಲು ದೋಸೆ ಅಥವಾ ಅಕ್ಕಿಯ ಯಾವುದಾದರೂ ಪದಾರ್ಥ ಯೋಗ್ಯ ಆಗಿರುತ್ತದೆ.
೫. ‘ಕಾರ್ಬೋನೇಟೆಡ್’ ಪಾನೀಯಕ್ಕಿಂತ ಸೋಡಾ, ಮಜ್ಜಿಗೆ ಅಥವಾ ನೀರು ಇಂತಹ ಪರ್ಯಾಯವನ್ನು ಆರಿಸಬೇಕು.
೬. ಮನೆಯಿಂದ ಹೊರಗೆ ಹೋಗುವಾಗ ಊಟದ ಸಮಯಕ್ಕೆ ವಾಪಸು ಬರುವವರಿದ್ದರೆ, ಖಿಚಡಿ/ ದೋಸೆ/ ನೀರುದೋಸೆ ಈ ಪದಾರ್ಥಗಳು ೧೦ ರಿಂದ ೧೫ ನಿಮಿಷಗಳಲ್ಲಿ ತಯಾರಾಗುತ್ತವೆ, ಅವುಗಳನ್ನು ಹೊಟ್ಟೆ ತುಂಬ ತಿಂದು ಹೊರಗೆ ಹೋಗಬೇಕು.
ನಾವು ತಿಂಡಿತಿನಸುಗಳ ಉತ್ತಮ ಆಯ್ಕೆ ಮಾಡುವುದು ಮಹತ್ವದ್ದಾಗಿದೆ !
ಈ ಉಪಾಯವು ಯಾರಿಗೆ ಅನ್ವಯವಾಗುತ್ತವೆ ಎಂದರೆ, ಪ್ರಾಮಾಣಿಕವಾಗಿ ಪ್ರಯತ್ನಿಸುವವರಿಗೆ, ನಿಜವಾಗಿಯೂ ಯಾರಿಗೆ ಬದಲಾವಣೆ ಮಾಡಲಿಕ್ಕಿದೆಯೋ ಅವರಿಗೆ. ಇಲ್ಲಿ ಕೆಲವರ ವಿಚಾರ ಹೇಗಿರುತ್ತದೆಯೆಂದರೆ, ಕೆಲವರು ಸಿಕ್ಕಿದ್ದೆಲ್ಲವನ್ನೂ ತಿನ್ನುತ್ತಾರೆ, ಅವರಿಗೇನಾಗುತ್ತದೆ ? ಯಾರಿಗೆ ಯಾವಾಗ ಏನಾಗಲಿಕ್ಕಿದೆಯೋ, ಅದು ಆಗಿಯೇ ಆಗುತ್ತದೆ ! ಆದರೂ ನಾವು ಪ್ರಯತ್ನ ಮಾಡಿ ಒಳ್ಳೆಯ ಆಯ್ಕೆ ಮಾಡಿದರೆ ಹಾಗೂ ತಪ್ಪಿಸಲು ಸಾಧ್ಯವಾಗುವ ವಿಷಯವನ್ನು ತಪ್ಪಿಸಿದರೆ, ಬರುವಂತಹ ದೊಡ್ಡ ಕಾಯಿಲೆಗಳನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದು.
ಒಂದು ವಿಷಯವನ್ನು ಗಮನದಲ್ಲಿಡಿ, ಆರೋಗ್ಯವಂತ ವ್ಯಕ್ತಿಗಳ ಜೀವನ ಶೈಲಿಯು ಅವರು ಮಾಡುತ್ತಿರುವ ವ್ಯಾಯಾಮ, ಶೇ. ೮೦ ರಿಂದ ೯೦ ರಷ್ಟು ಸಮಯ ಪಥ್ಯ, ವಯಸ್ಸು ಮತ್ತು ಅವರ ದೇಹಪ್ರಕೃತಿ ಈ ಎಲ್ಲ ವಿಷಯಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಶರೀರದ ಪ್ರತಿಕ್ರಿಯೆ ನೀಡುವ ಸಮಯ ಮತ್ತು ಆರಂಭ ಬೇರೆ ಬೇರೆಯಾಗಿರುತ್ತದೆ, ಅದನ್ನು ದುರ್ಲಕ್ಷಿಸಿ ಕಾಯಿಲೆ ಬರುವವರೆಗೆ ಕಾಯುತ್ತಾ ಕುಳಿತುಕೊಳ್ಳಬಾರದಷ್ಟೆ !
– ವೈದ್ಯೆ (ಸೌ.) ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೨೪.೮.೨೦೨೪)