ವರ್ತಮಾನ ಸ್ಥಿತಿಯಲ್ಲಿ ಭಗವಂತನ  ತತ್ತ್ವ ಯಾವ ದೇವತೆಯ ರೂಪದಲ್ಲಿ ನಮ್ಮ ಎದುರಿಗೆ ಬರುತ್ತದೆಯೋ, ಆ ರೂಪಕ್ಕೆ ಪ್ರಾರ್ಥನೆ ಮಾಡಿ ಆ ರೂಪದೊಂದಿಗೆ ಏಕರೂಪವಾಗಲು ಪ್ರಯತ್ನ ಮಾಡಲು ಸಾಧ್ಯವಾದರೆ ಸರ್ವವ್ಯಾಪಿ ಭಗವಂತನೊಂದಿಗೆ ಏಕರೂಪವಾಗಬಹುದು

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

‘ವರ್ತಮಾನ ಸ್ಥಿತಿಯಲ್ಲಿ ನಮ್ಮೆದುರಿಗೆ ಬರುವ ದೇವತೆಯ ತತ್ತ್ವದೊಂದಿಗೆ ಏಕರೂಪವಾಗಲು ಬರಬೇಕು. ಆಗ ಎದುರಿಗೆ ಕಾಣುವ ದೇವತೆಯ ತತ್ತ್ವಕ್ಕೆ ಪ್ರಾರ್ಥನೆಯನ್ನು ಮಾಡಿ ಅವಳ ಸೇವೆಯನ್ನು ಮಾಡಲು ಬರಬೇಕು. ಇದರಿಂದ ಈಶ್ವರನ ಪ್ರತಿಯೊಂದು ತತ್ತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆಮೇಲೆ ಸರ್ವವ್ಯಾಪಿಯಾಗಿರುವ ಭಗವಂತನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ. ಕೆಲವರಲ್ಲಿ ಸಾಂಪ್ರದಾಯಿಕತೆಯಿಂದಾಗಿ ದೇವತೆಯ ಒಂದೇ ತತ್ತ್ವದ ಬಗ್ಗೆ ಭಾವವು ಇರುತ್ತದೆ. ಉದಾ. ಕೆಲವರಿಗೆ ಶ್ರೀರಾಮನು ಇಷ್ಟವಾಗುತ್ತಾನೆ; ಆದರೆ ಹನುಮಂತನು ಇಷ್ಟವಾಗುವುದಿಲ್ಲ. ಹನುಮಂತನು ಎದುರಿಗೆ ಇರುವಾಗ ಅವನಿಗೆ ಪ್ರಾರ್ಥನೆ ಮಾಡಿ ಆ ತತ್ತ್ವದೊಂದಿಗೆ ಏಕರೂಪವಾಗಲು ಪ್ರಯತ್ನಿಸ ಬೇಕು, ಅಂದರೆ ಯಾವುದೇ ದೇವತೆಯ ಒಂದೇ ತತ್ತ್ವದಲ್ಲಿ ಸಿಲುಕುವುದಿಲ್ಲ. ‘ಎಲ್ಲ ದೇವರು ಇಷ್ಟವಾಗಲು ಆರಂಭವಾದಾಗ ‘ಈಶ್ವರಪ್ರಾಪ್ತಿ ದೂರವಿಲ್ಲ’, ಎಂದು ತಿಳಿಯಬೇಕು.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ