Refrained from Reciting Namaz on Roads: ದೇಶದಲ್ಲಿ ಈದ್ ನಿಮಿತ್ತ ರಸ್ತೆಯ ಮೇಲೆ ನಮಾಜ್ ಪಠಣ ಆಗದಿರುವುದು ಇದೇ ಮೊದಲ ಬಾರಿ !

ದೆಹಲಿಯ ಉಪ ರಾಜ್ಯಪಾಲರ ದಾವೆ !

ನವ ದೆಹಲಿ : ದೇಶದಲ್ಲೇ ಮೊದಲ ಬಾರಿಗೆ ಈದ್ ನಿಮಿತ್ತ ರಸ್ತೆಯ ಬದಲು ಮಸೀದಿಗಳಲ್ಲಿ ನಮಾಜ್ ಪಠಣ ಮಾಡಲಾಗಿದೆ. ಇದು ಹಿಂದೂ-ಮುಸಲ್ಮಾನರ ನಡುವಿನ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ. ಇದರಿಂದ ಅನೇಕ ಸಮಸ್ಯೆಗಳನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಬಹುದು ಎಂದು ಇದು ಸಾಬೀತುಪಡಿಸುತ್ತದೆ. ನಾನು ದೆಹಲಿಯ ಎಲ್ಲಾ ಮಸೀದಿ ಮತ್ತು ಈದ್ಗಾ (ನಮಾಜು ಪಠಣಕ್ಕಾಗಿ ಇಟ್ಟಿರುವ ಬಯಲು ಜಾಗ) ಇವುಗಳ ಇಮಾಮರಿಗೆ (ಇಸ್ಲಾಂನ ವಿದ್ವಾಂಸರಿಗೆ) ಧನ್ಯವಾದ ಹೇಳುತ್ತೇನೆ ಎಂದು ದೆಹಲಿಯ ಉಪ ರಾಜ್ಯಪಾಲ ವಿ.ಕೆ. ಸಕ್ಸೇನಾ ಅವರು ‘ಎಕ್ಸ್’ ಮೂಲಕ ಅಭಿಪ್ರಾಯ ಪಟ್ಟಿದ್ದಾರೆ.

ಉಪರಾಜ್ಯಪಾಲ ಸಕ್ಸೆನಾ ಇವರು ಮಾತು ಮುಂದುವರೆಸಿ, ಈ ಸಂದರ್ಭದಲ್ಲಿ ಏಪ್ರಿಲ್ 4ರಂದು ದೆಹಲಿಯ ಎಲ್ಲಾ ಇಮಾಮ್ ರ ಜೊತೆಗೆ ಸಭೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮಸೀದಿ ಆವರಣದಲ್ಲಿ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಬಾರದು, ಇದಕ್ಕಾಗಿ ಮಸೀದಿಯ ಪರಿಸರದಲ್ಲಿಯೇ ನಮಾಜ್ ಮಾಡುವಂತೆ ಅವರಿಗೆ ವಿನಂತಿ ಮಾಡಿದ್ದೆವು, ಈ ಮನವಿಗೆ ಗೌರವ ಕೊಟ್ಟು ಅವರು ಮಸೀದಿ ಪರಿಸರದಲ್ಲಿ ನಮಾಜ್ ಮಾಡಿದರು. ವಿಶೇಷವೆಂದರೆ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಸಂಪಾದಕೀಯ ನಿಲುವು

ಒಂದು ವೇಳೆ ಹೀಗೆ ಆಗಿದ್ದರೆ, ಅದು ಒಳ್ಳೆಯ ವಿಷಯವೇ ಆಗಿದೆ. ಈಗ ಇನ್ನೂ ಮುಂದೆ ಹೋಗಿ, ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಮಸೀದಿಗಳ ಹತ್ತಿರ ಹೋಗುವ ಧಾರ್ಮಿಕ ಮೆರವಣಿಗೆಗಳ ಮೇಲೆ ಆಕ್ರಮಣ ಆಗಬಾರದು, ಇದಕ್ಕಾಗಿ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನ್ನಿಸುತ್ತದೆ !